9 ಬೌಂಡರಿ, 5 ಸಿಕ್ಸ್: ಟಿ20 ಕ್ರಿಕೆಟ್ನಲ್ಲಿ ಅತ್ಯಂತ ದುಬಾರಿ ಓವರ್ಗಳನ್ನು ಎಸೆದ ವಿಂಡೀಸ್ ವೇಗಿ
CPL 2024: ಸಿಪಿಎಲ್ನ 3ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟದೊಂದಿಗೆ 250 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 206 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟಿಕೆಆರ್ ತಂಡ 44 ರನ್ಗಳ ಜಯ ಸಾಧಿಸಿದೆ.
Updated on:Sep 01, 2024 | 1:54 PM

ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೊಮಿನಿಕ್ ಡ್ರೇಕ್ಸ್ ಅತ್ಯಂತ ಹೀನಾಯ ದಾಖಲೆ ಬರೆದಿದ್ದಾರೆ. ವಾರ್ನರ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ಪರ ಕಣಕ್ಕಿಳಿದ ಡ್ರೇಕ್ಸ್ 4 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 77 ರನ್ಗಳು.

ಇದು ಕೆರಿಬಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಸ್ಪೆಲ್ ಎಂಬುದು ವಿಶೇಷ. ಈ ಮೂಲಕ ಸಿಪಿಎಲ್ನಲ್ಲಿ 4 ಓವರ್ಗಳಲ್ಲಿ ಅತ್ಯಧಿಕ ರನ್ ನೀಡಿದ ಕೆಟ್ಟ ದಾಖಲೆಯನ್ನು ಡೊಮಿನಿಕ್ ಡ್ರೇಕ್ಸ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಕೆಟ್ಟ ದಾಖಲೆ ನ್ಯೂಝಿಲೆಂಡ್ನ ಜಿಮ್ಮಿ ನೀಶಮ್ ಹೆಸರಿನಲ್ಲಿತ್ತು. 2019ರ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಕಣಕ್ಕಿಳಿದಿದ್ದ ನೀಶಮ್, ಸೇಂಟ್ ಕಿಟ್ಸ್ ಅ್ಯಂಡ್ ನೆವಿಸ್ ಪೇಟ್ರಿಯಾಟ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 68 ರನ್ ನೀಡಿದ್ದರು.

ಇದೀಗ ಡೊಮಿನಿಕ್ ಡ್ರೇಕ್ಸ್ ಈ ಹೀನಾಯ ದಾಖಲೆಯನ್ನು ಮುರಿದಿದ್ದಾರೆ. ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ಗಳಲ್ಲಿ 9 ಬೌಂಡರಿ ಹಾಗೂ 5 ಸಿಕ್ಸ್ಗಳೊಂದಿಗೆ ಒಟ್ಟು 77 ರನ್ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ದುಬಾರಿ ಸ್ಪೆಲ್ ಎಸೆದ ಬೌಲರ್ ಎನಿಸಿಕೊಂಡಿದ್ದಾರೆ.

ಇನ್ನು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಸ್ಪೆಲ್ ಎಸೆದ ಕಳಪೆ ದಾಖಲೆ ಇಂಗ್ಲೆಂಡ್ನ ಮ್ಯಾಟಿ ಮೆಕಿರ್ನಾನ್ ಹೆಸರಿನಲ್ಲಿದೆ. 2022ರ ಟಿ20 ಪಂದ್ಯದಲ್ಲಿ ಡರ್ಬಿಶೈರ್ ಪರ ಕಣಕ್ಕಿಳಿದಿದ್ದ ಮ್ಯಾಟಿ, ಸೋಮರ್ಸೆಟ್ ವಿರುದ್ಧ 4 ಓವರ್ಗಳಲ್ಲಿ 82 ರನ್ ಬಿಟ್ಟು ಕೊಟ್ಟಿದ್ದರು. ಇದು ಟಿ20 ಕ್ರಿಕೆಟ್ ಇತಿಹಾಸ ಅತ್ಯಂತ ದುಬಾರಿ ಸ್ಪೆಲ್ ಎಂಬುದು ವಿಶೇಷ.
Published On - 1:52 pm, Sun, 1 September 24
