ಐಪಿಎಲ್​ಗಿಂತ ಹೆಚ್ಚಿನ ಮೊತ್ತಕ್ಕೆ ಹರಾಜಾದ ಇಸುರು ಉಡಾನ

|

Updated on: Aug 31, 2024 | 10:00 AM

Isuru Udana: ಇಸುರು ಉಡಾನ ಶ್ರೀಲಂಕಾ ಪರ 35 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಕೇವಕ 27 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಇನ್ನು 2020 ರಲ್ಲಿ ಆರ್​ಸಿಬಿ ಪರ 10 ಮ್ಯಾಚ್​ಗಳಲ್ಲಿ ಕಣಕ್ಕಿಳಿದಿದ್ದ ಶ್ರೀಲಂಕಾ ವೇಗಿ 8 ವಿಕೆಟ್ ಪಡೆದಿದ್ದರು. ಇನ್ನು 2021 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದ ಉಡಾನ ಇದೀಗ ಫ್ರಾಂಚೈಸಿ ಲೀಗ್​ನತ್ತ ಮುಖ ಮಾಡಿದ್ದಾರೆ.

1 / 5
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್​ನಲ್ಲಿ ಆಟಗಾರರಿಗೆ ಹಣ ಸುರಿಮಳೆಯಾಗುವುದು ಗೊತ್ತೇ ಇದೆ. ಆದರೆ ಶ್ರೀಲಂಕಾ ಕ್ರಿಕೆಟಿಗ ಇಸುರು ಉಡಾನ ವಿಷಯದಲ್ಲಿ ಇದು ತದ್ವಿರುದ್ಧ. ಏಕೆಂದರೆ ಐಪಿಎಲ್​ನಲ್ಲಿ ಕೇವಲ 50 ಲಕ್ಷ ರೂ.ಗೆ ಆಡಿದ್ದ ಇಸುರು ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್​ನಲ್ಲಿ ಬೃಹತ್ ಮೊತ್ತಕ್ಕೆ ಬಿಕರಿಯಾಗಿದ್ದಾರೆ.

2 / 5
ನಿವೃತ್ತ ಆಟಗಾರರನ್ನು ಒಳಗೊಂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಇಸುರು ಉಡಾನ ಅವರನ್ನು ಅರ್ಬನ್‌ರೈಸರ್ಸ್ ಹೈದರಾಬಾದ್ 61.97 ಲಕ್ಷ ರೂ.ಗೆ ಖರೀದಿಸಿದೆ. ಇದು ಈ ಬಾರಿಯ ಲೆಜೆಂಡ್ಸ್ ಲೀಗ್​ ಹರಾಜಿನಲ್ಲಿ ಆಟಗಾರರೊಬ್ಬರು ಪಡೆದ ಅತ್ಯಧಿಕ ಮೊತ್ತ ಎಂಬುದು ವಿಶೇಷ.

3 / 5
ಇಂಟ್ರೆಸ್ಟಿಂಗ್ ವಿಷಯ ಎಂದರೆ ಇದೇ ಇಸುರು ಉಡಾನಗೆ ಐಪಿಎಲ್​ನಿಂದ ಸಿಕ್ಕಿದ್ದು ಕೇವಲ 50 ಲಕ್ಷ ರೂ. ಮಾತ್ರ. 2020 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಉಡಾನ ಅವರನ್ನು 50 ಲಕ್ಷ ರೂ. ನೀಡಿ ಖರೀದಿಸಿತ್ತು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಬಳಿಕ ಇಸುರು 61.97 ಲಕ್ಷ ರೂ.ಗೆ ಬಿಕರಿಯಾಗಿದ್ದಾರೆ.

4 / 5
ಈ ಮೂಲಕ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2024ರ ಹರಾಜಿನಲ್ಲಿ ಅತ್ಯಧಿಕ ಮೊತ್ತ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅದರಂತೆ ಈ ಬಾರಿಯ ಎಲ್​ಎಲ್​ಸಿ ಟೂರ್ನಿಯಲ್ಲಿ ಲಂಕಾ ಕ್ರಿಕೆಟಿಗ ಸುರೇಶ್ ರೈನಾ ನಾಯಕತ್ವದ ಅರ್ಬನ್‌ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯಲಿದ್ದಾರೆ.

5 / 5
ಅಂದಹಾಗೆ 2020 ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದ 10 ಪಂದ್ಯಗಳನ್ನಾಡಿದ್ದರು. ಈ ವೇಳೆ ಒಟ್ಟು 174 ಎಸೆತಗಳನ್ನು ಎಸೆದಿದ್ದ ಅವರು 282 ರನ್ ನೀಡಿ ಕೇವಲ 8 ವಿಕೆಟ್ ಮಾತ್ರ ಕಬಳಿಸಿದ್ದರು. ಹೀಗಾಗಿ ಮರುವರ್ಷವೇ ಆರ್​ಸಿಬಿ ಇಸುರು ಉದಾನ ಅವರನ್ನು ಕೈ ಬಿಟ್ಟಿತ್ತು. ಇದಾದ ಬಳಿಕ ಅವರಿಗೆ ಐಪಿಎಲ್​ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್​ನಲ್ಲಿ ಮುಂದುವರೆದಿದ್ದಾರೆ.