Lockie Ferguson: ನ್ಯೂಝಿಲೆಂಡ್​ ವೇಗಿಯ ಬೆಂಕಿ ಬೌಲಿಂಗ್: ದಾಖಲೆ ನಿರ್ಮಾಣ

| Updated By: ಝಾಹಿರ್ ಯೂಸುಫ್

Updated on: Feb 22, 2024 | 8:44 AM

Lockie Ferguson: IPL 2024ರ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿದೆ. ಅದರಂತೆ ಕಿವೀಸ್ ತಂಡದ ವೇಗದೂತ ಈ ಬಾರಿ ಆರ್​ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಇದಕ್ಕೂ ಮುನ್ನ ಭರ್ಜರಿ ಪ್ರದರ್ಶನದ ಮೂಲಕ ಫರ್ಗುಸನ್ ಗಮನ ಸೆಳೆಯುತ್ತಿದ್ದಾರೆ.

1 / 7
ವೆಲ್ಲಿಂಗ್ಟನ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನ್ಯೂಝಿಲೆಂಡ್ ವೇಗಿ ಲಾಕಿ ಫರ್ಗುಸನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 215 ರನ್​ ಕಲೆಹಾಕಿತು.

2 / 7
ಇದಕ್ಕುತ್ತರವಾಗಿ ಬ್ಯಾಟ್​ ಬೀಸಿದ ಆಸ್ಟ್ರೇಲಿಯಾ ಬ್ಯಾಟರ್​ಗಳನ್ನು ಕಾಡುವಲ್ಲಿ ಲಾಕಿ ಫರ್ಗುಸನ್ ಯಶಸ್ವಿಯಾದರು. ಮಾರಕ ದಾಳಿ ಸಂಘಟಿಸಿದ ಫರ್ಗುಸನ್ 4 ಓವರ್​ಗಳಲ್ಲಿ ನೀಡಿದ್ದು ಕೇವಲ 23 ರನ್​ಗಳು ಮಾತ್ರ. ಇದೇ ವೇಳೆ ಒಂದು ವಿಕೆಟ್ ಕಬಳಿಸುವಲ್ಲಿಯೂ ಯಶಸ್ವಿಯಾದರು.

3 / 7
ಈ ಒಂದು ವಿಕೆಟ್​ನೊಂದಿಗೆ ಲಾಕಿ ಫರ್ಗುಸನ್ ಟಿ20 ಕ್ರಿಕೆಟ್​ನಲ್ಲಿ 50 ವಿಕೆಟ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಕಿವೀಸ್ ಪರ ಅತೀ ವೇಗವಾಗಿ 50 ಟಿ20 ವಿಕೆಟ್​ಗಳನ್ನು ಪಡೆದ 2ನೇ ಬೌಲರ್​ ಎನಿಸಿಕೊಂಡಿದ್ದಾರೆ.

4 / 7
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ನ್ಯೂಝಿಲೆಂಡ್​ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್. ಕೇವಲ 36 ಪಂದ್ಯಗಳಲ್ಲಿ 50 ವಿಕೆಟ್ ಪೂರ್ಣಗೊಳಿಸಿ ಟ್ರೆಂಟ್ ಬೌಲ್ಟ್ ಈ ಸಾಧನೆ ಮಾಡಿದ್ದಾರೆ. ಇದೀಗ ಈ ದಾಖಲೆಯ ಪಟ್ಟಿಯಲ್ಲಿ ಲಾಕಿ ಫರ್ಗುಸನ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

5 / 7
ಲಾಕಿ ಫರ್ಗುಸನ್ 37 ಪಂದ್ಯಗಳ ಮೂಲಕ 50 ವಿಕೆಟ್​ಗಳನ್ನು ಕಬಳಿಸಿದ್ದು, ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ಐವತ್ತು ವಿಕೆಟ್ ಪಡೆದ ನ್ಯೂಝಿಲೆಂಡ್​ನ 2ನೇ ವೇಗಿ ಎನಿಸಿಕೊಂಡಿದ್ದಾರೆ.

6 / 7
ಇನ್ನು ಈ ಪಂದ್ಯದಲ್ಲಿ 216 ರನ್​ಗಳನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಮಿಚೆಲ್ ಮಾರ್ಷ್​ 44 ಎಸೆತಗಳಲ್ಲಿ 7 ಸಿಕ್ಸ್​ನೊಂದಿಗೆ ಅಜೇಯ 72 ರನ್ ಬಾರಿಸಿದರು. ಅದರಲ್ಲೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಟಿಮ್ ಡೇವಿಡ್ 10 ಎಸೆತಗಳಲ್ಲಿ 31 ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ ಎಸೆತದಲ್ಲಿ ಜಯ ತಂದುಕೊಟ್ಟರು.

7 / 7
ಅಂದಹಾಗೆ ಲಾಕಿ ಫರ್ಗುಸನ್ ಈ ಬಾರಿಯ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಹರಾಜಿನಲ್ಲಿ ನ್ಯೂಝಿಲೆಂಡ್ ವೇಗಿಯನ್ನು ಆರ್​ಸಿಬಿ ಬರೋಬ್ಬರಿ 2 ಕೋಟಿ ರೂ. ನೀಡಿ ಖರೀದಿಸಿದೆ.