LSG vs DC, IPL 2023: ಲಖನೌ- ಡೆಲ್ಲಿ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ

IPL 2023: ಕೆರಿಬಿಯನ್​ ದೈತ್ಯ ಕೈಲ್ ಮೇಯರ್ಸ್ ಬಿರುಸಿನಲ್ಲಿ ಬ್ಯಾಟ್​ ಬೀಸಿದರು. ನಾಯಕನ ವಿಕೆಟ್​ ಬಿದ್ದರೂ ಅಂಜದೇ ದೀಪಕ್ ಹೂಡ (17) ಜೊತೆಗೂಡಿ ಎರಡನೇ ವಿಕೆಟ್​​ಗೆ 88 ರನ್​ ಜೊತೆಯಾಟ ಆಡಿದರು.

Vinay Bhat
|

Updated on:Apr 02, 2023 | 7:35 AM

ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ಶನಿವಾರ ಮೊದಲ ಡಬಲ್ ಹೆಡರ್ ಪಂದ್ಯ ನಡೆಯಿತು. ಮೊದಲ ಮ್ಯಾಚ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ ಟೀಮ್ 50 ರನ್​ಗಳ ಅಮೋಘ ಗೆಲುವು ಕಂಡಿತು.

1 / 9
ಮೊದಲು ಬ್ಯಾಟಿಂಗ್‌ ಮಾಡಲು ಕಣಕ್ಕೆ ಇಳಿದ ಲಖನೌ ತಂಡಕ್ಕೆ ನಾಯಕ ಕೆ.ಎಲ್‌ ರಾಹುಲ್‌ (8) ಅವರ ವಿಕೆಟ್‌ ಪತನದೊಂದಿಗೆ ಆರಂಭಿಕ ಆಘಾತ ಎದುರಾಗಿತ್ತು. ಯುವ ವೇಗಿ ಚೇತನ್ ಸಕರಿಯಾ ರಾಹುಲ್​ ವಿಕೆಟ್​ ಪಡೆದರು.

2 / 9
ನಂತರ ಕೆರಿಬಿಯನ್​ ದೈತ್ಯ ಕೈಲ್ ಮೇಯರ್ಸ್ ಬಿರುಸಿನಲ್ಲಿ ಬ್ಯಾಟ್​ ಬೀಸಿದರು. ನಾಯಕನ ವಿಕೆಟ್​ ಬಿದ್ದರೂ ಅಂಜದೇ ದೀಪಕ್ ಹೂಡ (17) ಜೊತೆಗೂಡಿ ಎರಡನೇ ವಿಕೆಟ್​​ಗೆ 88 ರನ್​ ಜೊತೆಯಾಟ ಆಡಿದರು. ಕೈಲ್ ಮೇಯರ್ಸ್ 38 ಬಾಲ್​ ಎದುರಿಸಿ 7 ಸಿಕ್ಸ್​ ಹಾಗೂ 2 ಬೌಂಡರಿಯಿಂದ 73 ರನ್ ಗಳಿಸಿ ತಂಡಕ್ಕೆ ನೆರವಾದರು.

3 / 9
ಮಾರ್ಕಸ್ ಸ್ಟೊಯಿನಿಸ್ (12), ಕೃನಾಲ್ ಪಾಂಡ್ಯ (15*), ನಿಕೋಲಸ್ ಪೂರನ್ 21 ಎಸೆತಗಳಲ್ಲಿ 36 ರನ್, ಆಯುಷ್ ಬಡೋನಿ (18) ಮತ್ತು ಕೃಷ್ಣಪ್ಪ ಗೌತಮ್​ (ಇಂಪ್ಯಾಕ್ಟ್​ ಪ್ಲೇಯರ್​) 6* ರನ್​ ಗಳಿಸಿದರು. ಇದರಿಂದ ಲಕ್ನೋ ಸೂಪರ್‌ ಜೈಂಟ್ಸ್ 6 ವಿಕೆಟ್​ ನಷ್ಟದಲ್ಲಿ 193 ರನ್​ ಗಳಿಸಿತು.

4 / 9
ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹ್ಮದ್ ಮತ್ತು ಚೇತನ್ ಸಕರಿಯಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಿತ್ತರು.

5 / 9
ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಕೊಂಚ ಉತ್ತಮ ಆರಂಭವನ್ನೇ ಪಡೆಯಿತು. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್​ 4.2 ಓವರ್​​ಗಳಲ್ಲಿ 41 ರನ್​ಗಳನ್ನು ಕಲೆ ಹಾಕಿದರು. ಆದರೆ, ನಂತರದ 7 ರನ್​ಗಳ ಅಂತರದಲ್ಲಿ ಮಾರ್ಕ್​ ವುಡ್ ಪ್ರಮುಖ ಮೂರು ವಿಕೆಟ್​ಗಳನ್ನು ಕಿತ್ತರು.

6 / 9
9 ಎಸೆತಗಳನ್ನು ಎದುರಿಸಿ 12 ರನ್ ಬಾರಿಸಿದ್ದ ಪೃಥ್ವಿ ಅವರನ್ನು ಬೋಲ್ಡ್​ ಆದರೆ, ಇದರ ಬೆನ್ನಲ್ಲೇ ಕ್ರೀಸ್​ಗೆ ಬಂದ ಮಿಚೆಲ್ ಮಾರ್ಷ್ ಸೊನ್ನೆ ಸುತ್ತಿದರು. 4 ರನ್​ಗೆ ಸರ್ಫಾರಾಜ್ ಖಾನ್ ಸುಸ್ತಾದರು.

7 / 9
ಮತ್ತೊಂದೆಡೆ, ನಾಯಕನ ಆಟ ಮುಂದುವರೆಸಿದ ಡೇವಿಡ್​ ವಾರ್ನರ್ ಆಕರ್ಷಕ ಅರ್ಧಶತಕ ಬಾರಿಸಿದರು. ವಾರ್ನರ್​ಗೆ ರಿಲೀ ರೋಸೌವ್ (30) ಉತ್ತಮ ಸಾಥ್​ ನೀಡಿದರು. ಬಳಕ ಬಂದ ಬ್ಯಾಟರ್​ಗಳು ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.

8 / 9
48 ಬಾಲ್​ಗಳಲ್ಲಿ 7 ಬೌಂಡರಿಗಳ ಸಮೇತ 56 ರನ್​ ಗಳಿಸಿದ್ದ ವಾರ್ನರ್​ ಕೂಡ ಅಂತಿಮ ಹಂತದಲ್ಲಿ ವಿಕೆಟ್​ ಒಪ್ಪಿಸಿದರು. ಡೆಲ್ಲಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲು ಕಂಡಿತು. ಲಖನೌ ಪರ ಮಾರ್ಕ್​ ವುಡ್ 5 ವಿಕೆಟ್ ಕಿತ್ತು ಮಿಂಚಿದರೆ, ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ತಲಾ ಎರಡು ವಿಕೆಟ್​ ತಮ್ಮದಾಗಿಸಿದರು.

9 / 9

Published On - 7:35 am, Sun, 2 April 23

Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್