- Kannada News Photo gallery Cricket photos LSG vs DC Here is the photos of Lucknow Super Giants vs Delhi Capitals IPL 2023 Match Kannada News
LSG vs DC, IPL 2023: ಲಖನೌ- ಡೆಲ್ಲಿ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ
IPL 2023: ಕೆರಿಬಿಯನ್ ದೈತ್ಯ ಕೈಲ್ ಮೇಯರ್ಸ್ ಬಿರುಸಿನಲ್ಲಿ ಬ್ಯಾಟ್ ಬೀಸಿದರು. ನಾಯಕನ ವಿಕೆಟ್ ಬಿದ್ದರೂ ಅಂಜದೇ ದೀಪಕ್ ಹೂಡ (17) ಜೊತೆಗೂಡಿ ಎರಡನೇ ವಿಕೆಟ್ಗೆ 88 ರನ್ ಜೊತೆಯಾಟ ಆಡಿದರು.
Updated on:Apr 02, 2023 | 7:35 AM

ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ಶನಿವಾರ ಮೊದಲ ಡಬಲ್ ಹೆಡರ್ ಪಂದ್ಯ ನಡೆಯಿತು. ಮೊದಲ ಮ್ಯಾಚ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ ಟೀಮ್ 50 ರನ್ಗಳ ಅಮೋಘ ಗೆಲುವು ಕಂಡಿತು.

ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕೆ ಇಳಿದ ಲಖನೌ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ (8) ಅವರ ವಿಕೆಟ್ ಪತನದೊಂದಿಗೆ ಆರಂಭಿಕ ಆಘಾತ ಎದುರಾಗಿತ್ತು. ಯುವ ವೇಗಿ ಚೇತನ್ ಸಕರಿಯಾ ರಾಹುಲ್ ವಿಕೆಟ್ ಪಡೆದರು.

ನಂತರ ಕೆರಿಬಿಯನ್ ದೈತ್ಯ ಕೈಲ್ ಮೇಯರ್ಸ್ ಬಿರುಸಿನಲ್ಲಿ ಬ್ಯಾಟ್ ಬೀಸಿದರು. ನಾಯಕನ ವಿಕೆಟ್ ಬಿದ್ದರೂ ಅಂಜದೇ ದೀಪಕ್ ಹೂಡ (17) ಜೊತೆಗೂಡಿ ಎರಡನೇ ವಿಕೆಟ್ಗೆ 88 ರನ್ ಜೊತೆಯಾಟ ಆಡಿದರು. ಕೈಲ್ ಮೇಯರ್ಸ್ 38 ಬಾಲ್ ಎದುರಿಸಿ 7 ಸಿಕ್ಸ್ ಹಾಗೂ 2 ಬೌಂಡರಿಯಿಂದ 73 ರನ್ ಗಳಿಸಿ ತಂಡಕ್ಕೆ ನೆರವಾದರು.

ಮಾರ್ಕಸ್ ಸ್ಟೊಯಿನಿಸ್ (12), ಕೃನಾಲ್ ಪಾಂಡ್ಯ (15*), ನಿಕೋಲಸ್ ಪೂರನ್ 21 ಎಸೆತಗಳಲ್ಲಿ 36 ರನ್, ಆಯುಷ್ ಬಡೋನಿ (18) ಮತ್ತು ಕೃಷ್ಣಪ್ಪ ಗೌತಮ್ (ಇಂಪ್ಯಾಕ್ಟ್ ಪ್ಲೇಯರ್) 6* ರನ್ ಗಳಿಸಿದರು. ಇದರಿಂದ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹ್ಮದ್ ಮತ್ತು ಚೇತನ್ ಸಕರಿಯಾ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಿತ್ತರು.

ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊಂಚ ಉತ್ತಮ ಆರಂಭವನ್ನೇ ಪಡೆಯಿತು. ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ 4.2 ಓವರ್ಗಳಲ್ಲಿ 41 ರನ್ಗಳನ್ನು ಕಲೆ ಹಾಕಿದರು. ಆದರೆ, ನಂತರದ 7 ರನ್ಗಳ ಅಂತರದಲ್ಲಿ ಮಾರ್ಕ್ ವುಡ್ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತರು.

9 ಎಸೆತಗಳನ್ನು ಎದುರಿಸಿ 12 ರನ್ ಬಾರಿಸಿದ್ದ ಪೃಥ್ವಿ ಅವರನ್ನು ಬೋಲ್ಡ್ ಆದರೆ, ಇದರ ಬೆನ್ನಲ್ಲೇ ಕ್ರೀಸ್ಗೆ ಬಂದ ಮಿಚೆಲ್ ಮಾರ್ಷ್ ಸೊನ್ನೆ ಸುತ್ತಿದರು. 4 ರನ್ಗೆ ಸರ್ಫಾರಾಜ್ ಖಾನ್ ಸುಸ್ತಾದರು.

ಮತ್ತೊಂದೆಡೆ, ನಾಯಕನ ಆಟ ಮುಂದುವರೆಸಿದ ಡೇವಿಡ್ ವಾರ್ನರ್ ಆಕರ್ಷಕ ಅರ್ಧಶತಕ ಬಾರಿಸಿದರು. ವಾರ್ನರ್ಗೆ ರಿಲೀ ರೋಸೌವ್ (30) ಉತ್ತಮ ಸಾಥ್ ನೀಡಿದರು. ಬಳಕ ಬಂದ ಬ್ಯಾಟರ್ಗಳು ಬಂದಷ್ಟೆ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.

48 ಬಾಲ್ಗಳಲ್ಲಿ 7 ಬೌಂಡರಿಗಳ ಸಮೇತ 56 ರನ್ ಗಳಿಸಿದ್ದ ವಾರ್ನರ್ ಕೂಡ ಅಂತಿಮ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ ಗಳಿಸಿ ಸೋಲು ಕಂಡಿತು. ಲಖನೌ ಪರ ಮಾರ್ಕ್ ವುಡ್ 5 ವಿಕೆಟ್ ಕಿತ್ತು ಮಿಂಚಿದರೆ, ರವಿ ಬಿಷ್ಣೋಯಿ ಮತ್ತು ಆವೇಶ್ ಖಾನ್ ತಲಾ ಎರಡು ವಿಕೆಟ್ ತಮ್ಮದಾಗಿಸಿದರು.
Published On - 7:35 am, Sun, 2 April 23
