- Kannada News Photo gallery Cricket photos LSG vs SRH IPL 2023 Krunal Pandya stars as Lucknow Super Giants beat Sunrisers Hyderabad by 6 wickets
LSG vs SRH, IPL 2023: ನಾಯಕನೇ ಶೂನ್ಯಕ್ಕೆ ಔಟ್: ಸತತ ಎರಡನೇ ಪಂದ್ಯ ಸೋತ ಹೈದರಾಬಾದ್
Lucknow vs Hyderabad: ಶುಕ್ರವಾರ ಲಖನೌದ ಎಖಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ ಸುಲಭ ಗೆಲುವು ಸಾಧಿಸಿತು. ಅಲ್ಪ ಮೊತ್ತದ ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿತು.
Updated on:Apr 08, 2023 | 7:51 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಎರಡನೇ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಗೆಲುವಿನ ಖಾತೆ ತೆರೆಯುವಲ್ಲಿ ಎಡವಿದೆ. ಆ್ಯಡಂ ಮಾರ್ಕ್ರಮ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದರೂ ನಾಯಕನೇ ಸೊನ್ನೆ ಸುತ್ತಿರುವುದು ದೊಡ್ಡ ಹಿನ್ನಡೆ ಆಗಿದೆ.

ಶುಕ್ರವಾರ ಲಖನೌದ ಎಖಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ ಲಖನೌ ಸೂಪರ್ ಜೇಂಟ್ಸ್ ಸುಲಭ ಗೆಲುವು ಸಾಧಿಸಿತು. ಅಲ್ಪ ಮೊತ್ತದ ಟಾರ್ಗೆಟ್ ಬೆನ್ನಟ್ಟಿ 5 ವಿಕೆಟ್ಗಳ ಜಯ ಸಾಧಿಸುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿತು.

ಕ್ರುನಾಲ್ ಪಾಂಡ್ಯ ಬೌಲಿಂಗ್ ಮುಂದೆ ಸನ್ರೈಸರ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 121 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಅನ್ಮೋಲ್ಪ್ರೀತ್ ಸಿಂಗ್ ಜೊತೆಗೇ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರ್ವಾಲ್ (8) ಬೇಗನೆ ಔಟಾದರು.

ಅನ್ಮೋಲ್ಪ್ರೀತ್ 31 ರನ್ ಹಾಗೂ ರಾಹುಲ್ ತ್ರಿಪಾಠಿ 35 ರನ್ಗಳ ಕೊಡುಗೆ ನೀಡಿದರು. ಈ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ನಾಯಕ ಮಾರ್ಕ್ರಮ್ ಡಕ್ಗೆ ಔಟಾದರು. ವಾಷಿಂಗ್ಟನ್ ಸುಂದರ್ 16 ರನ್ ಮತ್ತು ಅಬ್ದುಲ್ ಸಮದ್ ಅಜೇಯ 21 ರನ್ ಗಳಿಸಿದ ಪರಿಣಾಮ ತಂಡದ ಮೊತ್ತವು ನೂರರ ಗಡಿ ದಾಟಿತು. ಕ್ರುನಾಲ್ ಎದುರಾಳಿಯ 3 ವಿಕೆಟ್ ಕಿತ್ತರು.

ಟಾರ್ಗೆಟ್ ಬೆನ್ನಟ್ಟಿದ ಎಲ್ಎಸ್ಜಿ ಈ ಬಾರಿ ಬೇಗನೆ ಕೈಲ್ ಮೇಯರ್ಸ್ (13) ವಿಕೆಟ್ ಕಳೆದುಕೊಂಡಿತು. ದೀಪಕ್ ಹೂಡಾ 7 ರನ್ ಗಳಿಸಿ ಔಟಾದರು. ನಂತರ ಬಡ್ತಿ ಪಡೆದು ಬಂದ ಕೃನಾಲ್ ಪಾಂಡ್ಯ ನಾಯಕ ರಾಹುಲ್ ಸೇರಿ 50 ರನ್ ಜೊತೆಯಾಟ ನೀಡಿದರು.

ಪಾಂಡ್ಯ 34 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಗೆಲುವಿಗೆ 8 ರನ್ ದೂರ ಇರುವಾಗ ರಾಹುಲ್ (35) ಆದಿಲ್ ರಶೀದ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಜೇಯರಾಗುಳಿದ ನಿಕೋಲಸ್ ಪೂರನ್ (10) ಮತ್ತು ಮಾರ್ಕಸ್ ಸ್ಟೊಯಿನಿಸ್ (11) ತಂಡವನ್ನು ಗೆಲ್ಲಿಸಿದರು. ಲಖನೌ 16 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 127 ರನ್ ಬಾರಿಸಿ ಜಯ ಸಾಧಿಸಿತು.
Published On - 7:51 am, Sat, 8 April 23
