LSG vs DC: ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಲಕ್ನೋ ‘ಸೂಪರ್ ಸ್ಟಾರ್ಸ್’

Updated on: Apr 01, 2026 | 8:45 PM

Lucknow Super Giants Stumble in IPL 2026:ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡಿದೆ. ಬಲಿಷ್ಠ ಬ್ಯಾಟಿಂಗ್ ಲೈನ್ಅಪ್ ಹೊಂದಿದ್ದರೂ, ನಾಯಕ ರಿಷಭ್ ಪಂತ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಬೇಗನೆ ವಿಕೆಟ್ ಒಪ್ಪಿಸಿದರು. ಮೊದಲ 10 ಓವರ್‌ಗಳಲ್ಲಿ 71 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಲಕ್ನೋ ತಂಡ ಸಂಕಷ್ಟಕ್ಕೆ ಸಿಲುಕಿದೆ, ನಿರೀಕ್ಷೆ ಸುಳ್ಳಾಗಿದೆ.

1 / 5
ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಲಕ್ನೋ ಈ ಪಂದ್ಯದಲ್ಲಿ ರನ್ ಮಳೆ ಹರಿಸುವ ನಿರೀಕ್ಷೆಯಿತ್ತು. ಆದರೆ ಮೊದಲ ಪಂದ್ಯದಲ್ಲಿ ಆ ನಿರೀಕ್ಷೆ ಸುಳ್ಳಾಗಿದೆ.

ಐಪಿಎಲ್ 2026 ರ ಐದನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಲಕ್ನೋ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಲಕ್ನೋ ಈ ಪಂದ್ಯದಲ್ಲಿ ರನ್ ಮಳೆ ಹರಿಸುವ ನಿರೀಕ್ಷೆಯಿತ್ತು. ಆದರೆ ಮೊದಲ ಪಂದ್ಯದಲ್ಲಿ ಆ ನಿರೀಕ್ಷೆ ಸುಳ್ಳಾಗಿದೆ.

2 / 5

ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ನಾಯಕ ರಿಷಭ್ ಪಂತ್ ಹಾಗೂ ಮಿಚೆಲ್ ಮಾರ್ಷ್​ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಪಂದ್ಯದ ಮೂರನೇ ಓವರ್​ನಲ್ಲಿ ನಾಯಕ ಪಂತ್ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾದರು. ಪಂತ್ ತಮ್ಮ ಇನ್ನಿಂಗ್ಸ್​ನಲ್ಲಿ 9 ಎಸೆತಗಳನ್ನು ಎದುರಿಸಿ 7 ರನ್ ಬಾರಿಸಿ ಔಟಾದರು.

3 / 5

ಪಂತ್ ವಿಕೆಟ್ ಬಳಿಕ ಬಂದ ಐಡೆನ್ ಮಾರ್ಕ್ರಾಮ್ ಮೇಲೆ ನಿರೀಕ್ಷೆ ಹೆಚ್ಚಿತ್ತು. ಏಕೆಂದರೆ ಇತ್ತೀಚೆಗೆ ಮುಗಿದ ಟಿ20 ವಿಶ್ವಕಪ್​ನಲ್ಲಿ ಮಾರ್ಕ್ರಾಮ್ ಅದ್ಭುತ ಪ್ರದರ್ಶನ ನೀಡಿದ್ದರು. ಅದರಂತೆ ಮಾರ್ಕ್ರಾಮ್ ಕೂಡ ಉತ್ತಮ ಆರಂಭ ಪಡೆದುಕೊಂಡಿದ್ದರು. ಆದರೆ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿ ಮಾರ್ಕ್ರಾಮ್ ಕೇವಲ 11 ರನ್​ಗಳಿಗೆ ಔಟಾದರು.

4 / 5

ಬ್ಯಾಟಿಂಗ್​ನಲ್ಲಿ ಮುಂಬಡ್ತಿ ಪಡೆದು 4ನೇ ಕ್ರಮಾಂಕದಲ್ಲಿ ಬಂದ ಯುವ ಬ್ಯಾಟರ್ ಆಯುಷ್ ಬಧೋನಿಗೆ ತಮ್ಮ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ. ಬದೋನಿ 3 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು. ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್​ಗೂ ಈ ಪಂದ್ಯದಲ್ಲಿ ಅಬ್ಬರಿಸಲು ಸಾಧ್ಯವಾಗಲಿಲ್ಲ. ಪೂರನ್ 8 ಎಸೆತಗಳಲ್ಲಿ 8 ರನ್ ಬಾರಿಸಿ ಔಟಾದರು.

5 / 5

ಆರಂಭದಿಂದಲೂ ಲಕ್ನೋ ಪರ ಏಕಾಂಗಿ ಹೋರಾಟ ನೀಡಿದ ಆರಂಭಿಕ ಮಿಚೆಲ್ ಮಾರ್ಷ್​ ಉತ್ತಮ ಆರಂಭ ಪಡೆದ ಬಳಿಕ ವಿಕೆಟ್ ಒಪ್ಪಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 28 ಎಸೆತಗಳನ್ನು ಎದುರಿಸಿದ ಮಾರ್ಷ್​ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 35 ರನ್ ಬಾರಿಸಿ ಔಟಾದರು. ಹೀಗಾಗಿ ಲಕ್ನೋ ತಂಡ 10 ಓವರ್​ಗಳಲ್ಲಿ 71 ರನ್​ಗೆ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡಿತು.

Loading...
Unable to load recommendations.
Follow Us