ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ, ಕೂಲ್ ಕ್ಯಾಪ್ಟನ್ ಎಂದೇ ಹೆಸರುವಾಸಿಯಾಗಿರುವವರು ಮಹೇಂದ್ರ ಸಿಂಗ್ ಧೋನಿ. ಧೋನಿಗೆ ಒಬ್ಬಳೆ ಮಗಳು ಝೀವಾ. ಇವರೀಗ ಏಳನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಝೀವಾ ಧೋನಿಗೆ ಶುಭಾಷಯಗಳ ಮಹಾಪೂರವೇ ಹರಿದುಬರುತ್ತಿದೆ.
ಭಾನುವಾರ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಝೀವಾ ಧೋನಿ ಫೆಬ್ರವರಿ 6, 2015 ರಂದು ಜನಿಸಿದರು.
ತನ್ನ ಕ್ಯೂಟ್ನೆಸ್ನಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದಾಳೆ ಧೋನಿ ಮಗಳು. ಮ್ಯಾಚ್ ಸಮಯಲ್ಲಿ ತಂದೆಯನ್ನು ಚಿಯರ್ ಮಾಡುವ ಝೀವಾಗೆ ತಂದೆಯಷ್ಟೆ ಅಭಿಮಾನಿಗಳಿದ್ದಾರೆ.
ಸುಮಾರು 1.9 ಮಿಲಿಯನ್ ಫಾಲೋವರ್ಸ್ ಹೊಂದಿರುವ ಝೀವಾ ಅವರ ಇನ್ ಸ್ಟಾಗ್ರಾಮ್ ಆಕೌಂಟ್ ಅನ್ನು ತಾಯಿ ಸಾಕ್ಷಿ ಸಿಂಗ್ ಧೋನಿ ನಿರ್ವಹಿಸುತ್ತಾರೆ.
ಝೀವಾ ಹುಟ್ಟಿದಾಗ, ಧೋನಿ ಭಾರತೀಯ ನಾಯಕನಾಗಿ ವಿಶ್ವಕಪ್ ಆಡಲು ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಆಟದ ಮೇಲೆ ಸಂಪೂರ್ಣ ಏಕಾಗ್ರತೆ ಸಾಧಿಸಲು ಅವರು ಫೋನ್ ಸಹ ಇಟ್ಟುಕೊಳ್ಳಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಸಾಕ್ಷಿ ಮಗಳ ಜನನದ ಬಗ್ಗೆ ರೈನಾಗೆ ಸಂದೇಶ ಕಳುಹಿಸಿ, ಸುದ್ದಿಯನ್ನು ಧೋನಿಗೆ ಮುಟ್ಟಿಸಿದ್ದರಂತೆ.
ಝೀವಾ ಧೋನಿಯ ಮುದ್ದು ಫೋಟೋಗಳು.
ಝೀವಾ ಧೋನಿಯ ಮುದ್ದು ಫೋಟೋಗಳು.
ಝೀವಾ ಧೋನಿಯ ಮುದ್ದು ಫೋಟೋಗಳು.
ಝೀವಾ ಧೋನಿಯ ಮುದ್ದು ಫೋಟೋಗಳು.