
ಧೋನಿ ತಮ್ಮ ಶಾಲಾ ದಿನಗಳಿಂದಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು, ಆದರೆ ಭಾರತ ತಂಡದ ಭಾಗವಾಗಲು ಅವರಿಗೆ ಹಲವು ವರ್ಷಗಳೇ ಬೇಕಾಯಿತು. ಧೋನಿಗೆ ನಮ್ಮ ದೇಶದ ಪರ ಆಡುವ ಅವಕಾಶ ಸಿಕ್ಕಿದ ತಕ್ಷಣ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ನಿಧಾನವಾಗಿ ಕ್ರಿಕೆಟ್ ಜಗತ್ತಿನಲ್ಲಿ ನೆಲೆಯೂರಿದರು. ಟೀಂ ಇಂಡಿಯಾದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯನ್ನು ಕ್ರಿಕೆಟ್ ಪಿಚ್‌ನಲ್ಲಿ ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಆದರೆ ಅವರು ಅಧ್ಯಯನದಲ್ಲಿ ಹೇಗಿದ್ದರು ಗೊತ್ತಾ?

ಭಾರತದ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ 1981 ರಲ್ಲಿ ಜನಿಸಿದ ಧೋನಿ ತಮ್ಮ ಆರಂಭಿಕ ಶಿಕ್ಷಣವನ್ನು ಡಿಎವಿ ಜವಾಹರ್ ವಿದ್ಯಾ ಮಂದಿರ ಶಾಲೆಯಲ್ಲಿ ಪಡೆದರು. 12ನೇ ತರಗತಿ ಓದಿದ ಬಳಿಕ ಕ್ಸೇವಿಯರ್ ಕಾಲೇಜು ಸೆಟ್‌ಗೆ ಸೇರಿಕೊಂಡಿದ್ದರು. ಆದರೆ ಕ್ರಿಕೆಟ್‌ಗಾಗಿ, ಧೋನಿ ತನ್ನ ಅಧ್ಯಯನದೊಂದಿಗೆ ರಾಜಿ ಮಾಡಿಕೊಳ್ಳಬೇಕಾಯಿತು. ಹೀಗಾಗಿ ಧೋನಿ ತನ್ನ ಅಧ್ಯಯನವನ್ನು ಮಧ್ಯದಲ್ಲಿಯೇ ಕೈಬಿಡಬೇಕಾಯಿತು.



Published On - 4:34 pm, Thu, 7 July 22