MS Dhoni Family Tree: ಎಂಎಸ್ ಧೋನಿ ಫ್ಯಾಮಿಲಿ ಟ್ರೀ: ಎಂಎಸ್ ಧೋನಿ ಕುಟುಂಬದಲ್ಲಿ ಯಾರು ಯಾರು ಇದ್ದಾರೆ ಗೊತ್ತೇ?

MS Dhoni: ಎಂಎಸ್​ಡಿ ಅವರ ತಂದೆ ಪಾನ್ ಸಿಂಗ್ ಅವರು ಧೋನಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿಯೊಬ್ಬ ತಂದೆಗೂ ತನ್ನ ಮಗ ಓದು ಬರಹದ ಮೂಲಕ ದೊಡ್ಡ ಹೆಸರು ಗಳಿಸಲಿ ಎಂಬ ಆಸೆ ಇರುತ್ತದೆ. ಅದು ಧೋನಿ ತಂದೆಗೆ ಕೂಡ ಇತ್ತು.

Vinay Bhat
|

Updated on:Jul 11, 2023 | 1:55 PM

ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳುವ ಬಯಕೆ ಪ್ರತಿಯೊಬ್ಬ ಅಭಿಮಾನಿಗೆ ಇದ್ದೇ ಇರುತ್ತದೆ. ಅದರಂತೆ ಇಂದು ನಾವು ಭಾರತೀಯ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕುಟುಂಬದ ಬಗ್ಗೆ ಮಾಹಿತಿ ನೀಡುತ್ತೇವೆ. ಸಾಮಾನ್ಯ ಕುಟುಂಬದಂತೆಯೇ ಇವರಿಗೆ ತಂದೆ-ತಾಯಿ, ಒಡಹುಟ್ಟಿದವರಿದ್ದಾರೆ. ಆದರೆ, ಇವರ ಫೋಟೋಗಳು ಹೆಚ್ಚು ಬಹಿರಂಗವಾಗುವುದಿಲ್ಲ. ಧೋನಿ ಕುಟುಂಬದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

1 / 7
ಎಂಎಸ್​ಡಿ ಅವರ ತಂದೆ ಪಾನ್ ಸಿಂಗ್ ಅವರು ಧೋನಿ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿಯೊಬ್ಬ ತಂದೆಗೂ ತನ್ನ ಮಗ ಓದು ಬರಹದ ಮೂಲಕ ದೊಡ್ಡ ಹೆಸರು ಗಳಿಸಲಿ ಎಂಬ ಆಸೆ ಇರುತ್ತದೆ. ಅದು ಧೋನಿ ತಂದೆಗೆ ಕೂಡ ಇತ್ತು. ಅದರಂತೆ ಧೋನಿಗೆ 2001ರಲ್ಲಿ ಟಿಟಿಇ ಪರೀಕ್ಷೆಯಲ್ಲಿ ತೇರ್ಗಡೆಯಾದ ಖರಗ್‌ಪುರ ರೈಲು ನಿಲ್ದಾಣದಲ್ಲಿ ಟಿಕೆಟ್ ಪರೀಕ್ಷಕನಾಗಿ ಕೆಲಸ ಸಿಗುತ್ತದೆ. ಆದರೆ, ಕ್ರಿಕೆಟಿಗನಾಗಲು ಧೋನಿ ತನ್ನ ಕೆಲಸವನ್ನು ತೊರೆದಾಗ, ಅವರ ತಂದೆ ಅವರನ್ನು ಬೆಂಬಲಿಸಿದರು ಮತ್ತು ಅವರ ಕನಸನ್ನು ನನಸಾಗಿಸಲು ಸಹಾಯ ಮಾಡಿದರು.

2 / 7
ಎಂಎಸ್ ಧೋನಿ ಅವರು ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಾಗ ಅವರ ತಾಯಿ ದೇವಿಕಾ ದೇವಿ ಬೆಂಬಲವಾಗಿ ನಿಂತಿದ್ದಾರೆ. ಬಾಲ್ಯದಲ್ಲಿ ಧೋನಿಗೆ ಕ್ರಿಕೆಟಿಗನಾಗಲು ತಾಯಿಯಿಂದ ಸಾಕಷ್ಟು ಬೆಂಬಲ ಸಿಕ್ಕಿತು. 2016ರಲ್ಲಿ ವಿಶಾಖಪಟ್ಟಣಂನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ತಮ್ಮ ಜೆರ್ಸಿಯ ಹಿಂಭಾಗದಲ್ಲಿ ತಾಯಿಯ ಹೆಸರನ್ನೂ ಬರೆದಿದ್ದರು.

3 / 7
ಎಂಎಸ್ ಧೋನಿಗೆ ಒಬ್ಬ ಅಣ್ಣನಿದ್ದಾನೆ ಎಂಬುದು ಹೆಚ್ಚಿನವರಿಗೆ ತಿಳಿದೇ ಇಲ್ಲ. ಅವರಿಗಿಂತ 10 ವರ್ಷ ದೊಡ್ಡವರು. ಸೆಪ್ಟೆಂಬರ್ 2016 ರಲ್ಲಿ ಬಿಡುಗಡೆಯಾದ ಅವರ ಜೀವನಚರಿತ್ರೆಯ ಸಿನಿಮಾದಲ್ಲಿ ಅವರ ಹಿರಿಯ ಸಹೋದರ ನರೇಂದ್ರ ಸಿಂಗ್ ಅನ್ನು ಉಲ್ಲೇಖಿಸಲಾಗಿಲ್ಲ.

4 / 7
ಎಂಎಸ್ ಧೋನಿ ಅವರ ಸಹೋದರಿಯ ಹೆಸರು ಜಯಂತಿ. ಅವರು ಧೋನಿಗಿಂತಲೂ ಹಿರಿಯರು. ಧೋನಿಯನ್ನು ಯಶಸ್ವಿ ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಜಯಂತಿ ಅವರ ಪಾತ್ರ ಕೂಡ ಮಹತ್ವದ್ದಿದೆ. ಜಯಂತಿ ಅವರು ಇಂಗ್ಲಿಷ್ ಶಿಕ್ಷಕಿಯಾಗಿದ್ದಾರೆ.

5 / 7
ಸಾಕ್ಷಿ ಅವರು 2008 ರಲ್ಲಿ ಕೋಲ್ಕತ್ತಾದ ತಾಜ್ ಬೆಂಗಾಲ್​ನಲ್ಲಿ ಇಂಟರ್ನ್ ಆಗಿ ಕೆಲಸ ಮಾಡುವಾಗ ಎಂಎಸ್ ಧೋನು ಅವರನ್ನು ಭೇಟಿಯಾದರು. ನಂತರ ಧೋನಿ ತನ್ನ ಸ್ನೇಹಿತನ ಮೂಲಕ ಸಾಕ್ಷಿ ಅವರ ಮೊಬೈಲ್ ನಂಬರ್ ಕೇಳಿದರು. ಅಲ್ಲಿಂದು ಇವರಿಬ್ಬರ ಪ್ರೀತಿ ಪ್ರಾರಂಭವಾಯಿತು. 4 ಜುಲೈ 2010 ರಂದು, ಧೋನಿ ಡೆಹ್ರಾಡೂನ್‌ನಲ್ಲಿ ಸಾಕ್ಷಿ ಅವರನ್ನು ವಿವಾಹವಾದರು.

6 / 7
6 ಫೆಬ್ರವರಿ 2015 ರಂದು ಎಂಎಸ್ ಧೋನಿ ಹಾಗೂ ಸಾಕ್ಷಿ ದಂಪತಿಗೆ ಹೆಣ್ಣು ಮಗು ಜನಿಸಿತು. ಅವರ ಹೆಸರು ಝೀವಾ. ಐಪಿಎಲ್​ನಲ್ಲಿ ತನ್ನ ತಂದೆ ಆಡುವ ಸಿಎಸ್​ಕೆ ತಂಡಕ್ಕೆ ಸಪೋರ್ಟ್ ಮಾಡಲು ಪ್ರತಿ ಬಾರಿ ಝೀವಾ ಮೈದಾನದಲ್ಲಿರುತ್ತಾರೆ.

7 / 7

Published On - 1:54 pm, Tue, 11 July 23

Follow us