Updated on:Jul 10, 2023 | 10:43 PM
ನ್ಯೂಝಿಲೆಂಡ್ನ ಆಟಗಾರ್ತಿ ಸುಝಿ ಬೇಟ್ಸ್ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಇದುವರೆಗೆ ಯಾವುದೇ ಮಹಿಳಾ ಕ್ರಿಕೆಟರ್ ನಿರ್ಮಿಸದ ದಾಖಲೆ ಎಂಬುದು ವಿಶೇಷ.
ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಸುಝಿ ಬೇಟ್ಸ್ ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕದೊಂದಿಗೆ 10 ದೇಶಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಸುಝಿ ಪಾತ್ರರಾದರು.
ಇನ್ನು ಈ ದಾಖಲೆಯ ಅರ್ಧಶತಕದೊಂದಿಗೆ ಶ್ರೀಲಂಕಾ ವಿರುದ್ಧ ನ್ಯೂಝಿಲೆಂಡ್ ತಂಡವು ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ವನಿತೆಯರು 118 ರನ್ ಕಲೆಹಾಕಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ಪರ ಸುಝಿ ಬೇಟ್ಸ್ 53 ಎಸೆತಗಳಲ್ಲಿ 52 ರನ್ ಬಾರಿಸಿದರು. ಅಲ್ಲದೆ 18.4 ಓವರ್ಗಳಲ್ಲಿ ಗುರಿ ಮುಟ್ಟಿಸಿ ನ್ಯೂಝಿಲೆಂಡ್ ತಂಡಕ್ಕೆ ಜಯ ತಂದುಕೊಟ್ಟರು.
ನ್ಯೂಝಿಲೆಂಡ್ ಪರ ಒಟ್ಟು 151 ಏಕದಿನ ಪಂದ್ಯಗಳನ್ನಾಡಿರುವ ಸುಝಿ 5359 ರನ್ ಗಳಿಸಿದ್ದಾರೆ. ಈ ವೇಳೆ 12 ಶತಕ ಮತ್ತು 32 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ಇನ್ನು 145 ಟಿ20 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಸುಝಿ ಬೇಟ್ಸ್ ಒಂದು ಶತಕ ಹಾಗೂ 26 ಅರ್ಧಶತಕಗಳೊಂದಿಗೆ ಒಟ್ಟು 3916 ರನ್ ಗಳಿಸಿದ್ದಾರೆ.
Published On - 10:42 pm, Mon, 10 July 23