- Kannada News Photo gallery Cricket photos Mallika Sagar is all set to become the first ever female auctioneer at the upcoming IPL 2024 mini auction
Mallika Sagar: ಐಪಿಎಲ್ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿ: ಇವರು ಯಾರು ಗೊತ್ತೇ?
IPL 2024 Auction: ಹರಾಜಿಗೆ ಒಂದು ದಿನ ಇರುವಾಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ದುಬೈನಲ್ಲಿ ನಡೆಯಲಿರುವ ಐಪಿಎಲ್ 2024 ಮಿನಿ ಆಕ್ಷನ್ನಲ್ಲಿ ಮಲ್ಲಿಕಾ ಸಾಗರ್ ಅವರು ಹರಾಜುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೊದಲ ಮಹಿಳಾ ಹರಾಜುಗಾರ್ತಿಯಾಗಲು ಇವರು ಸಿದ್ಧರಾಗಿದ್ದಾರೆ.
Updated on:Dec 19, 2023 | 10:41 AM

ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು 2024 ಅನ್ನು ಡಿಸೆಂಬರ್ 19 ರಂದು ದುಬೈನ ಕೋಕಾ ಕೋಲಾ ಅರೆನಾದಲ್ಲಿ ಆಯೋಜಿಸಲಾಗಿದೆ. ಭಾರತ ಮತ್ತು ವಿದೇಶಿ ಆಟಗಾರರು ಸೇರಿ ಒಟ್ಟು 333 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪೈಕಿ ಭಾರತದಿಂದ 214 ಹಾಗೂ ವಿದೇಶದಿಂದ 119 ಆಟಗಾರರು ಭಾಗವಹಿಸಲಿದ್ದಾರೆ.

ಇದೀಗ ಹರಾಜಿಗೆ ಒಂದು ದಿನ ಇರುವಾಗ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕ್ರಿಕ್‌ಬಜ್‌ನ ವರದಿಯ ಪ್ರಕಾರ, ದುಬೈನಲ್ಲಿ ನಡೆಯಲಿರುವ ಐಪಿಎಲ್ 2024 ಮಿನಿ ಆಕ್ಷನ್ನಲ್ಲಿ ಮಲ್ಲಿಕಾ ಸಾಗರ್ ಅವರು ಹರಾಜುಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮಹಿಳಾ ಹರಾಜುಗಾರ್ತಿಯಾಗಲು ಇವರು ಸಿದ್ಧರಾಗಿದ್ದಾರೆ.

ಮಲ್ಲಿಕಾ ಸಾಗರ್ ಅವರು ಈ ಹಿಂದೆ ಮಹಿಳಾ ಪ್ರೀಮಿಯರ್ ಲೀಗ್ ಹರಾಜನ್ನು ಆಯೋಜಿಸಿದ್ದರು. ಡಬ್ಲ್ಯೂಪಿಎಲ್ನಲ್ಲಿ ಆಕ್ಷನ್ ನಡೆಸಿದ ಅನುಭವ ಇವರಿಗೆ. ಆದರೆ, ಪುರುಷರ ತಂಡದ ಹರಾಜಿನ ಉಸ್ತುವಾರಿಯನ್ನು ಅವರು ಮೊದಲ ಬಾರಿಗೆ ವಹಿಸುತ್ತಿದ್ದಾರೆ.

"ವೃತ್ತಿಪರ ಹರಾಜುದಾರರಾದ ಶ್ರೀಮತಿ ಮಲ್ಲಿಕಾ ಸಾಗರ್ ಅವರು ಹರಾಜನ್ನು ನಡೆಸುತ್ತಾರೆ ಮತ್ತು ಹರಾಜಿನ ಎಲ್ಲಾ ಅಂಶಗಳಿಗೆ ಅವರು ಏಕೈಕ ತೀರ್ಪುಗಾರರಾಗಿದ್ದಾರೆ," ಎಂದು ಬಿಸಿಸಿಐ ಫ್ರಾಂಚೈಸಿಗಳಿಗೆ ಮಾಹಿತಿ ನೀಡಿದೆಯಂತೆ.

ರಿಚರ್ಡ್ ಮ್ಯಾಡ್ಲಿ ಅವರು 2018 ರವರೆಗೆ ಐಪಿಎಲ್ ಹರಾಜುದಾರರಾಗಿದ್ದರು. ನಂತರ ಹಗ್ ಎಡ್ಮೀಡ್ಸ್ ಅವರು ಕಳೆದ ವರ್ಷದವರೆಗೂ ನಡೆಸುತ್ತಿದ್ದರು. ಇದೀಗ ಮಲ್ಲಿಕಾ ಸಾಗರ್ ಅವರು ಐಪಿಎಲ್ ಹರಾಜನ್ನು ಆಯೋಜಿಸಿದ ಭಾರತದ ಮೊದಲ ಪೂರ್ಣ ಪ್ರಮಾಣದ ಹರಾಜುದಾರರಾಗಿದ್ದಾರೆ.

ಮಲ್ಲಿಕಾ ಸಾಗರ್ ಅವರು ಈ ಹಿಂದೆ ಪ್ರೊ-ಕಬಡ್ಡಿ ಲೀಗ್ ಸೇರಿದಂತೆ ಹಲವು ಹರಾಜು ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಅನುಭವ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಮುಂಬೈ ಮೂಲದ ಇವರು ಕಲಾ ಸಂಗ್ರಾಹಕಿಯಾಗಿದ್ದರು. ಕಳೆದ ಎರಡು ದಶಕಗಳಿಂದ ಹರಾಜುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
Published On - 10:54 am, Mon, 18 December 23




