Marcus Stoinis: 6 ಭರ್ಜರಿ ಸಿಕ್ಸ್, ಸ್ಪೋಟಕ ಅರ್ಧಶತಕ: ವಿಶ್ವ ದಾಖಲೆ ಬರೆದ ಸ್ಟೊಯಿನಿಸ್

| Updated By: ಝಾಹಿರ್ ಯೂಸುಫ್

Updated on: Oct 25, 2022 | 9:05 PM

T20 World Cup 2022: ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್​ ಕಲೆಹಾಕಿತು.

1 / 7
ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಆಲ್​ರೌಂಡರ್ ಮಾರ್ಕಸ್ ಸ್ಟೊಯಿನಿಸ್.

2 / 7
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್​ ಕಲೆಹಾಕಿತು.

3 / 7
158 ರನ್​ಗಳ ಸ್ಪರ್ಧಾತ್ಮಕ ಗುರಿ ಪಡೆದ ಆಸ್ಟ್ರೇಲಿಯಾ ತಂಡವು ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ 9ನೇ ಓವರ್​ನಲ್ಲಿ ಆಸ್ಟ್ರೇಲಿಯಾ ತಂಡದ ಮೊತ್ತ 2 ವಿಕೆಟ್ ನಷ್ಟಕ್ಕೆ ಬಂದು ನಿಂತಿತು.

4 / 7
ಇತ್ತ 13ನೇ ಓವರ್​ ವೇಳೆ ಮ್ಯಾಕ್ಸ್​ವೆಲ್ (23) ವಿಕೆಟ್ ಪಡೆಯುವ ಮೂಲಕ ಸಂಪೂರ್ಣ ಹಿಡಿತ ಸಾಧಿಸಿದ್ದ ಶ್ರೀಲಂಕಾ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು ಮಾರ್ಕಸ್ ಸ್ಟೊಯಿನಿಸ್.

5 / 7
ಕ್ರೀಸ್​ಗೆ ಬರುತ್ತಿದ್ದಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೊಯಿನಿಸ್ ಸಿಕ್ಸ್-ಫೋರ್​​​ಗಳ ಸುರಿಮಳೆಗೈದರು. ಪರಿಣಾಮ ಕೇವಲ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರೊಂದಿಗೆ ಆಸ್ಟ್ರೇಲಿಯಾ ಪರ ಟಿ20ಯಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆ ಸ್ಟೊಯಿನಿಸ್ ಪಾಲಾಯಿತು.

6 / 7
ಅಷ್ಟೇ ಅಲ್ಲದೆ ಟಿ20 ವಿಶ್ವಕಪ್​ನಲ್ಲಿ ಯುವರಾಜ್ ಸಿಂಗ್ (12 ಎಸೆತ) ಬಳಿಕ ಅತೀ ವೇಗವಾಗಿ ಅರ್ಧಶತಕ ಬಾರಿಸಿದ ವಿಶ್ವ ದಾಖಲೆಯನ್ನೂ ಕೂಡ ಮಾರ್ಕಸ್ ಸ್ಟೊಯಿನಿಸ್ ಬರೆದರು.

7 / 7
ಇನ್ನು 18 ಎಸೆತಗಳಲ್ಲಿ 4 ಫೋರ್ ಹಾಗೂ 6 ಭರ್ಜರಿ ಸಿಕ್ಸ್​ ಸಿಡಿಸುವ ಮೂಲಕ ಸ್ಟೊಯಿನಿಸ್ 59 ರನ್ ಚಚ್ಚಿದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 16.3 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿತು.

Published On - 9:04 pm, Tue, 25 October 22