- Kannada News Photo gallery Cricket photos Michael Bracewel likely to play today Here is the RCB Playing XI vs LSG IPL 2023 Match Kannada Sports News
RCB Playing XI vs LSG: ಹ್ಯಾಜಲ್ವುಡ್ ಅಲ್ಲ: ಲಖನೌ ವಿರುದ್ಧ ಗೆಲ್ಲಲು ಆರ್ಸಿಬಿ ಮಾಸ್ಟರ್ ಪ್ಲಾನ್: ಆ ಪ್ಲೇಯರ್ ಇಂದು ಕಣಕ್ಕೆ
LSG vs RCB IPL 2023: ಅನೇಕ ಕಾರಣಗಳಿಗೆ ಆರ್ಸಿಬಿಗೆ ಇಂದಿನ ಎಲ್ಎಸ್ಜಿ ವಿರುದ್ಧದ ಪಂದ್ಯ ಗೆಲ್ಲಲೇ ಬೇಕಾಗಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ರೂಪಿಸಿದೆ. ಇಲ್ಲಿದೆ ನೋಡಿ ಲಖನೌ ವಿರುದ್ಧದ ಪಂದ್ಯಕ್ಕೆ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI.
Updated on: May 01, 2023 | 10:35 AM

ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೇಂಟ್ಸ್ ನಡುವೆ ಹೈವೋಲ್ಟೇಜ್ ಕದನ ಏರ್ಪಡಿಸಲಾಗಿದೆ. ಲಖನೌದ ಏಕಾನ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಪಾಯಿಂಟ್ ಟೇಬಲ್ನಲ್ಲಿ ಮೇಲಕ್ಕೇರಲು ಆರ್ಸಿಬಿಗೆ ಈ ಪಂದ್ಯ ಮಹತ್ವದ್ದಾಗಿದೆ.

ಈಗಾಗಲೇ ಆಡಿರುವ ಎಂಟು ಪಂದ್ಯಗಳ ಪೈಕಿ ತಲಾ ನಾಲ್ಕು ಗೆಲುವು, ನಾಲ್ಕು ಸೋಲು ಕಂಡಿರುವ ಆರ್ಸಿಬಿ ಪ್ಲೇ ಆಫ್ ಪ್ರವೇಶಿಸಬೇಕಾದರೆ ಮುಂಬರುವ ಪಂದ್ಯ ಮಹತ್ವದ್ದಾಗಿದೆ. ಅಲ್ಲದೆ ಮೈನಸ್ ರನ್ರೇಟ್ನಲ್ಲಿರುವುದನ್ನು ಪ್ಲಸ್ ಆಗಿ ಪರಿವರ್ತಿಸಬೇಕಿದೆ.

ಹೀಗೆ ಅನೇಕ ಕಾರಣಗಳಿಗೆ ಆರ್ಸಿಬಿಗೆ ಇಂದಿನ ಎಲ್ಎಸ್ಜಿ ವಿರುದ್ಧದ ಪಂದ್ಯ ಗೆಲ್ಲಲೇ ಬೇಕಾಗಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ರೂಪಿಸಿದೆ. ಇಂದು ಬ್ಯಾಟಿಂಗ್ನಲ್ಲಿ ಬಲ ತುಂಬಲು ಹೊಸ ಆಟಗಾರ ಕಣಕ್ಕಿಳಿಯುವ ಸಾಧ್ಯತೆ ಇದೆ.

ಆರ್ಸಿಬಿ ತಂಡ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ಮಾತ್ರ ನೆಚ್ಚಿಕೊಂಡಿದೆ. ಇವರು ಬೇಗನೆ ಔಟಾದರೆ ತಂಡದ ಮೊತ್ತ ಮೂರಂಕಿ ದಾಟುವುದು ಅನುಮಾನ. ಹೀಗಾಗಿ ಮಿಚೆಲ್ ಬ್ರೆಸ್ವೆಲ್ಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಐಪಿಎಲ್ 2023 ಆರಂಭಕ್ಕೂ ಮುನ್ನ ಆರ್ಸಿಬಿ ಪರ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿದ್ದ ನ್ಯೂಜಿಲೆಂಡ್ನ ಮಿಚೆಲ್ ಬ್ರೆಸ್ವೆಲ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಬಲ ತುಂಬಲು ಆರ್ಸಿಬಿ ಇವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ಕಣಕ್ಕಿಳಿಸವ ಪ್ಲಾನ್ನಲ್ಲಿದೆ.

ಇನ್ನು ಬೌಲಿಂಗ್ನಲ್ಲಿ ಆರ್ಸಿಬಿ ಮಾರಕವಾಗಿ ಗೋಚರಿಸುತ್ತಿಲ್ಲ. ಮೊಹಮ್ಮದ್ ಸಿರಾಜ್ ಮಾತ್ರ ಅಪಾಯಕಾರಿ ಆಗಿದ್ದಾರೆ. ಹರ್ಷಲ್ ಪಟೇಲ್ ದುಬಾರಿ ಆಗುತ್ತಿದ್ದಾರೆ. ಜೋಶ್ ಹ್ಯಾಜಲ್ವುಡ್ ಆಡುವ ಬಗ್ಗೆಯೂ ಮಾಹಿತಿಯಿಲ್ಲ.

ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ XI vs ಎಲ್ಎಸ್ಜಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಬ್ರೆಸ್ವೆಲ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ಕರ್ಣ್ ಶರ್ಮಾ, ವನಿಂದು ಹಸರಂಗ, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್.
