11 ವಿಕೆಟ್​ ಉರುಳಿಸಿ ಮಿಂಚಿದ ಮಾಜಿ ಆಟಗಾರನ ಪುತ್ರ..!

|

Updated on: Sep 14, 2024 | 11:25 AM

Archie Vaughan: ಆರ್ಚಿ ವಾನ್ ಈವರೆಗೆ ಕೇವಲ 2 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಈ ಎರಡು ಪಂದ್ಯಗಳಿಂದ ಒಟ್ಟು 14 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಸರ್ರೆ ಪರ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ 18 ವರ್ಷದ ಆರ್ಚಿ 97 ರನ್​ಗಳನ್ನು ಸಿಡಿಸಿದ್ದಾರೆ. ಈ ಮೂಲಕ ಆಲ್​ರೌಂಡರ್ ರೂಪದಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ.

1 / 5
ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್​ಶಿಪ್ ಪಂದ್ಯದಲ್ಲಿ 11 ವಿಕೆಟ್ ಕಬಳಿಸಿ 18 ವರ್ಷದ ಆರ್ಚಿ ವಾನ್ ಸಂಚಲನ ಸೃಷ್ಟಿಸಿದ್ದಾರೆ. ದಿ ಕೂಪರ್ ಅಸೋಸಿಯೇಟ್ಸ್ ಕೌಂಟಿ ಮೈದಾನದಲ್ಲಿ ನಡೆದ ಸರ್ರೆ ವಿರುದ್ಧದ ಈ ಪಂದ್ಯದಲ್ಲಿ ಆರ್ಚಿ ಸೋಮರ್‌ಸೆಟ್ ಪರ ಕಣಕ್ಕಿಳಿದಿದ್ದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೋಮರ್‌ಸೆಟ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 317 ರನ್ ಕಲೆಹಾಕಿತು.

2 / 5
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಸರ್ರೆ ತಂಡವು ಒಂದು ಹಂತದವರೆಗೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆದರೆ ಯಾವಾಗ ಆರ್ಚಿ ವಾನ್ ಚೆಂಡನ್ನು ಕೈಗೆತ್ತಿಕೊಂಡರೊ ಅಲ್ಲಿಂದ ಸರ್ರೆ ತಂಡದ ಪತನ ಆರಂಭವಾಯಿತು. ಅತ್ಯುತ್ತಮ ಸ್ಪಿನ್ ಬೌಲಿಂಗ್​ನೊಂದಿಗೆ ಮೋಡಿ ಮಾಡಿದ ಜೂನಿಯರ್ ವಾನ್, 37 ಓವರ್​ಗಳಲ್ಲಿ 102 ರನ್ ನೀಡಿ 6 ವಿಕೆಟ್ ಉರುಳಿಸಿದರು. ಪರಿಣಾಮ ಸರ್ರೆ ತಂಡವು 321 ರನ್​ಗಳಿಗೆ ಆಲೌಟ್ ಆಯಿತು.

3 / 5
ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಸೋಮರ್‌ಸೆಟ್ ತಂಡವು ಕೇವಲ 224 ರನ್​ಗಳಿಸಿ ಆಲೌಟ್ ಆದರು. ಅದರಂತೆ ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 221 ರನ್​ಗಳ ಸುಲಭ ಗುರಿ ಪಡೆದ ಸರ್ರೆ ತಂಡಕ್ಕೆ ಈ ಬಾರಿ ಆರ್ಚಿ ವಾನ್ ಹಾಗೂ ಜ್ಯಾಕ್ ಲೀಚ್ ಆಘಾತ ನೀಡಿದರು. ಅನುಭವಿ ಸ್ಪಿನ್ನರ್ ಲೀಚ್​ ಜೊತೆಗೂಡಿ ಉತ್ತಮ ದಾಳಿ ಸಂಘಟಿಸಿದ ಆರ್ಚಿ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದರು.

4 / 5
ಅಲ್ಲದೆ 32 ಓವರ್​ಗಳಲ್ಲಿ 15 ಮೇಡನ್ ಓವರ್​ಗಳನ್ನು ಎಸೆದ ಆರ್ಚಿ ವಾನ್, ಕೇವಲ 38 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಸರ್ರೆ ತಂಡವು ಕೇವಲ 109 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ ಸೋಮರ್​ಸೆಟ್ ತಂಡಕ್ಕೆ 111 ರನ್​ಗಳ ಭರ್ಜರಿ ಜಯ ತಂದುಕೊಡುವಲ್ಲಿ ಯುವ ಆಲ್​ರೌಂಡರ್ ಆರ್ಚಿ ವಾನ್ ಯಶಸ್ವಿಯಾದರು.

5 / 5
ಅಂದಹಾಗೆ ಆರ್ಚಿ ವಾನ್ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರ ಸುಪುತ್ರ. ಇದೀಗ ತಂದೆಯ ಹಾದಿಯಲ್ಲೇ ಸಾಗಿರುವ ಆರ್ಚಿ ತನ್ನ 2ನೇ ಪ್ರಥಮ ದರ್ಜೆ ಪಂದ್ಯದಲ್ಲೇ 11 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ. ಅಲ್ಲದೆ ಇದೇ ಪಂದ್ಯದಲ್ಲಿ ಬ್ಯಾಟಿಂಗ್ ಮೂಲಕ 47 ರನ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ ಸರ್ರೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.