100 ಎಸೆತಗಳನ್ನು ಎದುರಿಸಿದ ಮಿಚೆಲ್ ಸ್ಟಾರ್ಕ್..!
IND vs AUS: ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ 100 ಎಸೆತಗಳನ್ನು ಎದುರಿಸಿರುವುದು ಏಕೈಕ ಬ್ಯಾಟರ್. ಅದು ಕೂಡ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಎಂಬುದು ವಿಶೇಷ.
1 / 5
ಪರ್ತ್ನ ಒಪ್ಟಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಟೆಸ್ಟ್ ಪಂದ್ಯವು 2ನೇ ದಿನದಾಟಕ್ಕೆ ಕಾಲಿಟ್ಟಿದೆ. ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ 150 ರನ್ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ 67 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತು.
2 / 5
ಆದರೆ ದ್ವಿತೀಯ ದಿನದಾಟದ ಆರಂಭದಲ್ಲೇ ಆಸ್ಟ್ರೇಲಿಯಾವನ್ನು ಆಲೌಟ್ ಮಾಡುವ ಯೋಜನೆಯೊಂದಿಗೆ ಕಣಕ್ಕಿಳಿದ ಟೀಮ್ ಇಂಡಿಯಾ ಪಾಲಿಗೆ ತೊಡಕಾಗಿದ್ದು ಮಿಚೆಲ್ ಸ್ಟಾರ್ಕ್. ಏಕೆಂದರೆ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ಕ್ ಅಸಲಿ ಟೆಸ್ಟ್ ಆಟ ಪ್ರದರ್ಶಿಸಿ ಭಾರತೀಯ ಬೌಲರ್ಗಳನ್ನು ಹೈರಾಣರಾಗಿದರು.
3 / 5
ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಮಿಚೆಲ್ ಸ್ಟಾರ್ಕ್ ಬರೋಬ್ಬರಿ 112 ಎಸೆತಗಳನ್ನು ಎದುರಿಸಿದರು. ಇದರ ನಡುವೆ ಹ್ಯಾಝಲ್ವುಡ್ ಜೊತೆಗೂಡಿ ಕೊನೆಯ ವಿಕೆಟ್ಗೆ 25 ರನ್ಗಳ ಜೊತೆಯಾಟವಾಡಿದರು. ಈ ಮೂಲಕ ಆಸ್ಟ್ರೇಲಿಯಾ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.
4 / 5
ಅಂದರೆ 79 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಎರಡಂಕಿ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿ ಆಸ್ಟ್ರೇಲಿಯಾಗೆ ಮಿಚೆಲ್ ಸ್ಟಾರ್ಕ್ ಹಾಗೂ ಜೋಶ್ ಹ್ಯಾಝಲ್ವುಡ್ ಆಸರೆಯಾಗಿ ನಿಂತರು. ಪರಿಣಾಮ ಟೀಮ್ ಇಂಡಿಯಾ ಬೌಲರ್ಗಳು ಕೊನೆಯ ವಿಕೆಟ್ ಪಡೆಯಲು ಹರಸಾಹಸ ಪಡಬೇಕಾಯಿತು.
5 / 5
ಅಂತಿಮವಾಗಿ 112 ಎಸೆತಗಳನ್ನು ಎದುರಿಸಿದ ಮಿಚೆಲ್ ಸ್ಟಾರ್ಕ್ 2 ಫೋರ್ಗಳೊಂದಿಗೆ 26 ರನ್ ಬಾರಿಸಿ ಔಟಾದರು. ಇದರೊಂದಿಗೆ 104 ರನ್ಗಳಿಗೆ ಆಸ್ಟ್ರೇಲಿಯಾ ತಂಡದ ಇನಿಂಗ್ಸ್ ಕೂಡ ಕೊನೆಗೊಂಡಿದೆ. ಇದೀಗ 46 ರನ್ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
Published On - 10:59 am, Sat, 23 November 24