- Kannada News Photo gallery Cricket photos Mithali raj retirement know her net worth salary income earning car collection
Mithali Raj: ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಲೇಡಿ ಸಚಿನ್ ಮಿಥಾಲಿ ರಾಜ್ ಎಷ್ಟು ಕೋಟಿಯ ಒಡತಿ ಗೊತ್ತಾ?
Mithali Raj: 1999ರಲ್ಲಿ ಪದಾರ್ಪಣೆ ಮಾಡಿದ್ದ ಮಿಥಾಲಿ 23 ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿರ್ ಎಂದು ಗುರುತಿಸಿಕೊಂಡಿದ್ದಾರೆ.
Updated on:Jun 10, 2022 | 4:17 PM



ಮಿಥಾಲಿ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಈ ಪಟ್ಟಿಯಲ್ಲಿ 2.2 ಕೋಟಿ ಮೌಲ್ಯದ 320-ಡಿ ಬಿಎಂಡಬ್ಲ್ಯೂ ಕೂಡ ಸೇರಿದೆ.

ಮಿಥಾಲಿ ಗ್ಯಾರೇಜ್‌ನಲ್ಲಿ ರೂ 35.49 ಲಕ್ಷ ಮೌಲ್ಯದ ಹೋಂಡಾ ಅಕಾರ್ಡ್ ಮತ್ತು ರೂ 8.49 ಲಕ್ಷ ಮೌಲ್ಯದ ರೆನಾಲ್ಟ್ ಡಸ್ಟರ್ ಕೂಡ ಇದೆ.

ಉಬರ್, ಲಿವರ್ ಮತ್ತು ವುಡ್ಸ್, ಎಲ್ಲೆನ್ ಸೊಲ್ಲಿ, ಅಮೇರಿಕನ್ ಟೂರಿಸ್ಟರ್, ಫಾಸ್ಟ್ ಅಪ್ ಇಂಡಿಯಾದಂತಹ ಬ್ರ್ಯಾಂಡ್‌ಗಳ ಉತ್ಪನ್ನಗಳಿಗೆ ಮಿಥಾಲಿ ಅಂಭಾಸಿಡರ್ ಆಗಿದ್ದಾರೆ.

ಮಿಥಾಲಿ ರಾಜ್ ಸಾಮಾಜಿಕ ಜಾಲತಾಣದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು Instagram ನಲ್ಲಿ 1.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಮಿಥಾಲಿ ಅವರಿಗೆ ಫೇಸ್‌ಬುಕ್‌ನಲ್ಲಿ 4.5 ಮಿಲಿಯನ್ ಫಾಲೋವರ್ಸ್ ಮತ್ತು ಟ್ವಿಟರ್‌ನಲ್ಲಿ 873.7 ಸಾವಿರ ಫಾಲೋವರ್ಸ್ ಇದ್ದಾರೆ. ಈ ಮೂಲಕ ಅವರು ಸಾಮಾಜಿಕ ಮಾಧ್ಯಮದಲ್ಲಿ ರೂ. 50 ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ.

ಮಿಥಾಲಿ ರಾಜ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಆಟಗಾರ್ತಿಯರಲ್ಲಿ ಒಬ್ಬರು. ತನ್ನ 23 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಅವರು ತಮ್ಮ ಖಾತೆಯಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಕೋಚ್ ರಮೇಶ್ ಪೊವಾರ್ ಅವರೊಂದಿಗಿನ ವಿವಾದವು ಭಾರತೀಯ ಕ್ರಿಕೆಟ್‌ನಲ್ಲಿ ಸುನಾಮಿ ಎಬ್ಬಿಸಿತು. ಅಲ್ಲಿಯವರೆಗೂ ಕೇವಲ ಒಂದು ಆಟಕ್ಕೆ ಸುದ್ದಿಯಾಗಿದ್ದ ಮಿಥಾಲಿ ಈ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದರು.
Published On - 3:56 pm, Fri, 10 June 22




