ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಕಟಿಸಲಾದ ಇಂಗ್ಲೆಂಡ್ ತಂಡದಲ್ಲಿ ಮೊಯೀನ್ ಅಲಿ ಅವರ ಹೆಸರು ಇರಲಿಲ್ಲ. ಈ ಸರಣಿಯಿಂದ ಇಂಗ್ಲೆಂಡ್ ತಂಡದ ಹಿರಿಯ ಆಟಗಾರರಾದ ಡೇವಿಡ್ ಮಲಾನ್, ಜೋ ರೂಟ್, ಮೊಯೀನ್ ಅಲಿ ಸೇರಿದಂತೆ ಕೆಲವರನ್ನು ಕೈ ಬಿಡಲಾಗಿತ್ತು. ಇದರ ಬೆನ್ನಲ್ಲೇ ಮಲಾನ್ ನಿವೃತ್ತಿ ಘೋಷಿಸಿದ್ದರು. ಇದೀಗ ಮೊಯೀನ್ ಅಲಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.