AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಐಪಿಎಲ್​ಗೆ ಪಾಕಿಸ್ತಾನ್ ವೇಗಿ ಮೊಹಮ್ಮದ್ ಅಮೀರ್

ಇಂಡಿಯನ್ ಪ್ರೀಮಿಯರ್ ಲೀಗ್​ನ ಚೊಚ್ಚಲ ಸೀಸನ್​ನಲ್ಲಿ ಪಾಕಿಸ್ತಾನ್ ಆಟಗಾರರು ಕಾಣಿಸಿಕೊಂಡಿದ್ದರು. ಆದರೆ 2008 ರಲ್ಲಿ ಮುಂಬೈ ಮೇಲೆ ನಡೆದ ಪಾಕ್ ಪ್ರೇರಿತ ಉಗ್ರರ ದಾಳಿಯ ಬಳಿಕ ಪಾಕಿಸ್ತಾನ್ ಆಟಗಾರರನ್ನು ಐಪಿಎಲ್​ನಿಂದ ನಿಷೇಧಿಸಲಾಗಿತ್ತು. ಈ ನಿಷೇಧದ ಹೊರತಾಗಿಯೂ ಪಾಕಿಸ್ತಾನ್ ತಂಡದ ಮಾಜಿ ವೇಗಿ ಐಪಿಎಲ್​ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಝಾಹಿರ್ ಯೂಸುಫ್
|

Updated on:Mar 08, 2025 | 10:53 AM

Share
ಪಾಕಿಸ್ತಾನ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಸಿಗಲು ಮುಂದಿನ ವರ್ಷದ ಐಪಿಎಲ್ ಮಿನಿ ಹರಾಜುವರೆಗೆ ಕಾಯಲೇಬೇಕು. ಏಕೆಂದರೆ ಐಪಿಎಲ್ 2026ರ ಐಪಿಎಲ್ ಹರಾಜು ಪಟ್ಟಿಯಲ್ಲಿ ಅಮೀರ್ ಹೆಸರು ಕೂಡ ಕಾಣಿಸಿಕೊಳ್ಳಲಿದೆ.

1 / 5
ಪಾಕಿಸ್ತಾನದ ಚಾನೆಲ್​ ಚರ್ಚೆಯೊಂದರಲ್ಲಿ ಮಾತನಾಡಿದ ಮೊಹಮ್ಮದ್ ಅಮೀರ್, ಮುಂದಿನ ವರ್ಷ ನಾನು ಐಪಿಎಲ್ ಆಡಲು ಅರ್ಹನಾಗಿರುತ್ತೇನೆ. ಹೀಗಾಗಿ ಮಿನಿ ಹರಾಜಿಗಾಗಿ ಹೆಸರು ನೋಂದಾಯಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಅದರಂತೆ ಐಪಿಎಲ್ 2026ರ ಹರಾಜಿನಲ್ಲಿ ಪಾಕಿಸ್ತಾನ್ ಕ್ರಿಕೆಟಿಗ ಮೊಹಮ್ಮದ್ ಅಮೀರ್ ಹೆಸರು ಕಾಣಿಸಿಕೊಳ್ಳುವುದು ಖಚಿತ ಎನ್ನಬಹುದು.

2 / 5
ಆದರೆ ಮೊಹಮ್ಮದ್ ಅಮೀರ್ ಐಪಿಎಲ್​ಗಾಗಿ ಹೆಸರು ನೋಂದಾಯಿಸುತ್ತಿರುವುದು ಪಾಕಿಸ್ತಾನ್ ಪ್ರಜೆಯಾಗಿ ಅಲ್ಲ. ಬದಲಾಗಿ ಯುಕೆ ಪೌರತ್ವದೊಂದಿಗೆ. ಅಂದರೆ ಮೊಹಮ್ಮದ್ ಅಮೀರ್ ಅವರ ಪತ್ನಿ ಇಂಗ್ಲೆಂಡ್​ನವರು. ಇದೀಗ ಎಡಗೈ ವೇಗಿ ಯುಕೆ ಪಾಸ್‌ಪೋರ್ಟ್ ಪಡೆಯುವ ಆಶಯ ಹೊಂದಿದ್ದಾರೆ. ಅದರಂತೆ ಮುಂದಿನ ವರ್ಷದೊಳಗೆ ಅಮೀರ್​ಗೆ ಯುಕೆ ಪೌರತ್ವ ಸಿಗಲಿದೆ.

3 / 5
ಈ ಪೌರತ್ವದೊಂದಿಗೆ ಮೊಹಮ್ಮದ್ ಅಮೀರ್ ಐಪಿಎಲ್​ಗೆ ಹೆಸರು ರಿಜಿಸ್ಟರ್ ಮಾಡಿಸಿಕೊಳ್ಳುವ ಇರಾದೆಯಲ್ಲಿದ್ದಾರೆ. ಈ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಅಮೀರ್ ಪ್ಲ್ಯಾನ್ ರೂಪಿಸಿದ್ದಾರೆ. ಹೀಗಾಗಿ ಮುಂದಿನ ವರ್ಷದ ಐಪಿಎಲ್ ಮಿನಿ ಹರಾಜಿನಲ್ಲಿ ಪಾಕಿಸ್ತಾನದ ಎಡಗೈ ವೇಗಿಯ ಹೆಸರು ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು.

4 / 5
ಈ ಹಿಂದೆ ಹಲವು ಬಾರಿ ಮೊಹಮ್ಮದ್ ಅಮೀರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಜತೆ ಕೂಡ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಮುಂದಿನ ವರ್ಷ ಅಮೀರ್ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

5 / 5

Published On - 10:53 am, Sat, 8 March 25