- Kannada News Photo gallery Cricket photos Mohammed Rizwan Played Test in South Africa vs Pakistan T20 Match
ಟಿ20 ಪಂದ್ಯದಲ್ಲಿ ಟೆಸ್ಟ್ ಆಡಿ ಅಚ್ಚರಿಯ ದಾಖಲೆ ಬರೆದ ಮೊಹಮ್ಮದ್ ರಿಝ್ವಾನ್
Mohammed Rizwan: ಟಿ20 ಕ್ರಿಕೆಟ್ ಅಂದ್ರೆನೇ ಹೊಡಿಬಡಿ ಆಟ. ಆದರೆ ಈ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ. ಅದು ಕೂಡ ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಹೆಸರಿನಲ್ಲಿದ್ದ ಹೀನಾಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on: Dec 11, 2024 | 7:53 AM

ಡರ್ಬನ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಝ್ವಾನ್ ಅನಗತ್ಯ ದಾಖಲೆಯೊಂದು ಬರೆದಿದ್ದಾರೆ. ಅದು ಕೂಡ 74 ರನ್ ಬಾರಿಸಿ ಎಂಬುದೇ ಅಚ್ಚರಿ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಹೆನ್ರಿಕ್ ಕ್ಲಾಸೆನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಬಾಬರ್ ಆಝಂ (0) ಶೂನ್ಯಕ್ಕೆ ಔಟಾದರು. ಈ ಆರಂಭಿಕ ಆಘಾತವನ್ನು ತಪ್ಪಿಸಲು ಮೊಹಮ್ಮದ್ ರಿಝ್ವಾನ್ ಎಚ್ಚರಿಕೆಯ ಬ್ಯಾಟಿಂಗ್ನ ಮೊರೆ ಹೋದರು.

ಈ ಎಚ್ಚರಿಕೆಯೊಂದಿಗೆ ಸೌತ್ ಆಫ್ರಿಕಾ ವೇಗಿಗಳ ಮಾರಕ ದಾಳಿ ಮುಂದೆ ಸೆಟೆದು ನಿಂತ ರಿಝ್ವಾನ್ ರನ್ ಗಳಿಸಲು ಮರೆತರು. ಪರಿಣಾಮ ಪವರ್ ಪ್ಲೇನಲ್ಲಿ 19 ಎಸೆತಗಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 15 ರನ್ ಮಾತ್ರ.

ಇನ್ನು ಪವರ್ ಪ್ಲೇ ಬಳಿಕ ಮೊಹಮ್ಮದ್ ರಿಝ್ವಾನ್ ಸಂಪೂರ್ಣ ಪವರ್ ಕಳೆದುಕೊಂಡರು. ಅಲ್ಲದೆ ಪವರ್ ಇಲ್ಲದ ಬ್ಯಾಟಿಂಗ್ ನೊಂದಿಗೆ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನ ಅತ್ಯಂತ ಹೀನಾಯ ದಾಖಲೆ ರಿಝ್ವಾನ್ ಪಾಲಾಯಿತು.

ಅಂದರೆ ಬರೋಬ್ಬರಿ 50 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹಾಫ್ ಸೆಂಚುರಿ ಸಿಡಿಸಲು ಅತ್ಯಧಿಕ ಎಸೆತಗಳನ್ನು ಎದುರಿಸಿದ ಕ್ಯಾಪ್ಟನ್ ಎನಿಸಿಕೊಂಡರು. ಹಾಗೆಯೇ ಟಿ20 ಪಂದ್ಯದಲ್ಲಿ 2 ಬಾರಿ 50+ ಎಸೆತಗಳನ್ನು ಎದುರಿಸಿ ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಅಪಖ್ಯಾತಿಗೂ ಒಳಗಾದರು.

ಇದಕ್ಕೂ ಮುನ್ನ ಟಿ20 ವಿಶ್ವಕಪ್ ಪಂದ್ಯದಲ್ಲಿ ಕೆನಡಾ ವಿರುದ್ಧ ರಿಝ್ವಾನ್ 52 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಮತ್ತೊಮ್ಮೆ ಟಿ20 ಪಂದ್ಯದಲ್ಲಿ ಟೆಸ್ಟ್ ಆಡುವ ಮೂಲಕ ಮೊಹಮ್ಮದ್ ರಿಝ್ವಾನ್ ಹೀನಾಯ ದಾಖಲೆಯನ್ನು ತಮ್ನದಾಗಿಸಿಕೊಂಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 62 ಎಸೆತಗಳನ್ನು ಎದುರಿಸಿದ ರಿಝ್ವಾನ್ 74 ರನ್ ಬಾರಿಸಿ ಔಟಾದರು. ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ ಪಾಕಿಸ್ತಾನ್ ತಂಡವು 20 ಓವರ್‌ಗಳಲ್ಲಿ 172 ರನ್ ಗಳಿಸಲಷ್ಟೇ ಶಕ್ತರಾದರು. ಇದರ ಸಂಪೂರ್ಣ ಲಾಭ ಪಡೆದ ಸೌತ್ ಆಫ್ರಿಕಾ ತಂಡವು 11 ರನ್್ಗಳ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.
