Ranji Trophy: ಫಿಟ್ನೆಸ್ ವಿವಾದದ ನಡುವೆ 7 ವಿಕೆಟ್ ಕಬಳಿಸಿ ಮಿಂಚಿದ ಮೊಹಮ್ಮದ್ ಶಮಿ

Updated on: Oct 18, 2025 | 3:47 PM

Mohammed Shami Ranji Trophy: ರಣಜಿ ಟ್ರೋಫಿಯಲ್ಲಿ ಮೊಹಮ್ಮದ್ ಶಮಿ ಅದ್ಭುತ ಕಮ್‌ಬ್ಯಾಕ್ ಮಾಡಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಬಂಗಾಳ ಪರ ಆಡಿ, 7 ವಿಕೆಟ್‌ಗಳನ್ನು ಕಬಳಿಸಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದರು. 40 ಓವರ್‌ಗಳ ಬೌಲಿಂಗ್ ಮೂಲಕ ತಾವು ಸಂಪೂರ್ಣ ಫಿಟ್ ಎಂದು ಸಾರಿದರು. ಆದರೆ, ಆಯ್ಕೆದಾರ ಅಜಿತ್ ಅಗರ್ಕರ್ ಇನ್ನೂ ಅವರ ಫಿಟ್‌ನೆಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ. ಶಮಿ ಟೀಂ ಇಂಡಿಯಾಗೆ ಮರಳಲು ಸಿದ್ಧ.

1 / 5
ಟೀಂ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ ಕಳೆದ ಏಳು ತಿಂಗಳಿನಿಂದ ರಾಷ್ಟ್ರೀಯ ತಂಡದ ಪರ ಆಡಿಲ್ಲ. ಚಾಂಪಿಯನ್ಸ್ ಟ್ರೋಫಿ ಬಳಿಕ ಇಂಜುರಿ ಸಮಸ್ಯೆಯಿಂದಾಗಿ ತಂಡದಿಂದ ದೂರ ಉಳಿದಿರುವ ಶಮಿ, ಇದೀಗ ದೇಶಿ ಟೂರ್ನಿ ರಣಜಿಯಲ್ಲಿ ಆಡುತ್ತಿದ್ದಾರೆ. 2025-26 ರ ರಣಜಿ ಟ್ರೋಫಿಯ ಮೊದಲ ಸುತ್ತಿನಲ್ಲಿ ಬಂಗಾಳ ಪರ ಕಣಕ್ಕಿಳಿದಿದ್ದ ಶಮಿ ತಮ್ಮ ಮಾರಕ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

2 / 5
2025-26 ರ ರಣಜಿ ಟ್ರೋಫಿಯ ಮೊದಲ ಸುತ್ತಿನಲ್ಲಿ, ಮೊಹಮ್ಮದ್ ಶಮಿ ಉತ್ತರಾಖಂಡ್ ವಿರುದ್ಧ ಆಡಿದರು. ಎರಡೂ ಇನ್ನಿಂಗ್ಸ್‌ಗಳಲ್ಲಿ ಅದ್ಭುತ ಬೌಲಿಂಗ್ ಮಾಡಿದ ಶಮಿ, ಮೊದಲ ಇನ್ನಿಂಗ್ಸ್‌ನಲ್ಲಿ 14.5 ಓವರ್‌ಗಳನ್ನು ಬೌಲ್ ಮಾಡಿ 37 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು. ಗಮನಾರ್ಹ ಸಂಗತಿಯೇಂದರೆ ಕೇವಲ ನಾಲ್ಕು ಎಸೆತಗಳಲ್ಲಿ ಈ ಮೂರು ವಿಕೆಟ್‌ಗಳನ್ನು ಪಡೆದರು.

3 / 5
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ವಿನಾಶಕಾರಿ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ, 24.4 ಓವರ್‌ಗಳನ್ನು ಬೌಲಿಂಗ್ ಮಾಡಿ, 38 ರನ್‌ಗಳನ್ನು ಬಿಟ್ಟುಕೊಟ್ಟು ನಾಲ್ವರು ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಇದರರ್ಥ ಮೊಹಮ್ಮದ್ ಶಮಿ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದರು. ಇದರ ಜೊತೆಗೆ ಸುಮಾರು 40 ಓವರ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ತಮ್ಮ ಫಿಟ್‌ನೆಸ್ ಅನ್ನು ಸಹ ಸಾಭೀತುಪಡಿಸಿದರು.

4 / 5
ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತಂಡವನ್ನು ಘೋಷಿಸಿದ ನಂತರ, ಆಯ್ಕೆದಾರ ಅಜಿತ್ ಅಗರ್ಕರ್ ಅವರು ಶಮಿ ಅವರ ಫಿಟ್ನೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದರು. ಇದರ ನಂತರ, ಉತ್ತರಾಖಂಡ್ ವಿರುದ್ಧ ಮೈದಾನಕ್ಕೆ ಇಳಿಯುವ ಮೊದಲು ಶಮಿ, ‘ಫಿಟ್ನೆಸ್ ಸಮಸ್ಯೆಯಾಗಿದ್ದರೆ, ನಾನು ಬಂಗಾಳ ಪರ ಆಡಲು ಸಾಧ್ಯವಾಗುತ್ತಿರಲಿಲ್ಲ. ನಾನು 2025 ರ ಚಾಂಪಿಯನ್ಸ್ ಟ್ರೋಫಿ, 2025 ರ ಐಪಿಎಲ್ ಮತ್ತು ದುಲೀಪ್ ಟ್ರೋಫಿಯನ್ನು ಆಡಿದ್ದೇನೆ. ನನಗೆ ನಾಲ್ಕು ದಿನಗಳ ಕ್ರಿಕೆಟ್ ಆಡಲು ಸಾಧ್ಯವಾದರೆ, 50 ಓವರ್ ಕ್ರಿಕೆಟ್ ಅನ್ನು ಸಹ ಆಡಲು ಸಾಧ್ಯವಾಗುತ್ತದೆ’ ಎಂದಿದ್ದರು.

5 / 5
ಆದಾಗ್ಯೂ, ಶಮಿ ಹೇಳಿಕೆಯಿಂದ ಕೆರಳಿದ ಅಗರ್ಕರ್, ‘ಶಮಿ ಅದ್ಭುತ ಆಟಗಾರ, ಅವರಿಗೆ ಏನನ್ನಾದರೂ ಹೇಳಿಬೇಕೆಂದೆನಿಸಿದರೆ ಅದನ್ನು ನನ್ನ ಬಳಿ ಹೇಳಬೇಕು. ಆನಂತರ ನಾವು ಅದರ ಬಗ್ಗೆ ಚರ್ಚಿಸುತ್ತೇವೆ. ಇಂಗ್ಲೆಂಡ್ ಪ್ರವಾಸಕ್ಕೂ ಮುಂಚೆಯೇ, ಅವರು ಫಿಟ್ ಆಗಿದ್ದರೆ, ಅವರು ತಂಡದಲ್ಲಿರುತ್ತಾರೆ ಎಂದು ನಾವು ಹೇಳಿದ್ದೆವು. ಆದರೆ ಕಳೆದ ಒಂದು ವರ್ಷದಲ್ಲಿ ಅವರು ಫಿಟ್ ಇಲ್ಲ ಎಂದು ನಾವು ಗಮನಿಸಿದ್ದೇವೆ. ಕಳೆದ ಬಾರಿ ನಾವು ಅವರನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಬಯಸಿದ್ದೆವು, ಆದರೆ ಅವರು ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಅವರು ಫಿಟ್ ಆಗಿದ್ದರೆ, ಮುಂದಿನ ಕೆಲವು ತಿಂಗಳುಗಳಲ್ಲಿ ವಿಷಯಗಳು ಬದಲಾಗಬಹುದು  ಎಂದಿದ್ದಾರೆ.