181.6 kph ವೇಗದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್..! ದಂಗಾದ ಪ್ರೇಕ್ಷಕರು
Australia vs India, 2nd Test: ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ 180 ರನ್ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ.
1 / 5
ಬರೋಬ್ಬರಿ 181.6 kph... ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ನಲ್ಲಿ ಮೊಹಮ್ಮದ್ ಸಿರಾಜ್ ಬರೋಬ್ಬರಿ 181.6 kph ವೇಗದಲ್ಲಿ ಚೆಂಡೆಸೆದಿದ್ದಾರೆ ಎಂದು ತೋರಿಸಲಾಗಿದೆ. ಅಂದರೆ ಇದು ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗದ ಬೌಲ್. ಆದರೆ ಇಂತಹದೊಂದು ವಿಶ್ವ ದಾಖಲೆಯನ್ನು ಖುದ್ದು ಸಿರಾಜ್ ಕೂಡ ನಂಬಲು ಸಿದ್ಧರಿರಲಿಲ್ಲ.
2 / 5
ಏಕೆಂದರೆ ಅದು ಸ್ಪೀಡ್ ಗನ್ (ಸ್ಪೀಡ್ ಮೀಟರ್) ಎಡವಟ್ಟಿನಿಂದಾಗಿ ತೋರಿಸಲಾದ ವೇಗವಾಗಿತ್ತು. ಸಾಮಾನ್ಯವಾಗಿ 130-140ರ ಅಸುಪಾಸಿನಲ್ಲಿ ಚೆಂಡೆಸೆಯುವ ಸಿರಾಜ್ ಎಸೆದ 25ನೇ ಓವರ್ನ 5ನೇ ಎಸೆತದ ವೇಗವನ್ನು ಅಡಿಲೇಡ್ ಮೈದಾನದ ಸ್ಕ್ರೀನ್ನಲ್ಲಿ 181.6 kph ವೇಗ ಎಂದು ತಪ್ಪಾಗಿ ತೋರಿಸಲಾಗಿತ್ತು. ಇದನ್ನು ನೋಡಿ ಪ್ರೇಕ್ಷಕರು ಕೂಡ ದಂಗಾದರು.
3 / 5
ಆದರೆ ಆ ಬಳಿಕ ಈ ತಪ್ಪನ್ನು ಸರಿಪಡಿಸಿಕೊಳ್ಳಲಾಗಿದೆ. ಸ್ಪೀಡ್ ಗನ್ ಎರರ್ನಿಂದಾಗಿ ಮೊಹಮ್ಮದ್ ಸಿರಾಜ್ ಅವರ ಎಸೆತವು 181.6 kph ವೇಗದಿಂದ ಕೂಡಿತ್ತು ಎಂದು ತೋರಿಸಲಾಗಿದ್ದು, ಆದರೆ ಆ ಚೆಂಡು 135ರ ಅಸುಪಾಸಿನ ವೇಗದಲ್ಲಿ ಸಾಗಿದೆ ಎಂದು ತಿಳಿಸಲಾಗಿದೆ. ಇದರೊಂದಿಗೆ ಒಂದು ಕ್ಷಣಕ್ಕೆ ದಂಗಾದ ಪ್ರೇಕ್ಷಕರು ನಿರಾಳರಾದರು.
4 / 5
ಅಂದಹಾಗೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ ವಿಶ್ವ ದಾಖಲೆ ಪಾಕಿಸ್ತಾನದ ಶೊಯೇಬ್ ಅಖ್ತರ್ ಹೆಸರಿನಲ್ಲಿದೆ. 2003ರ ಏಕದಿನ ವಿಶ್ವಕಪ್ನ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಖ್ತರ್ 161.3 kph ವೇಗದಲ್ಲಿ ಚೆಂಡೆಸೆದು ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
5 / 5
ಇನ್ನು ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ 180 ರನ್ಗಳಿಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ. ಇದೀಗ ದ್ವಿತೀಯ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡವು ಬ್ಯಾಟಿಂಗ್ ಮುಂದುವರೆಸಿದೆ.