IPL 2021: ಐಪಿಎಲ್ ಲೀಗ್ ಹಂತ ಮುಕ್ತಾಯ; ಈ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಟಾಪ್ 5 ಆಟಗಾರರು

| Updated By: ಪೃಥ್ವಿಶಂಕರ

Updated on: Oct 09, 2021 | 2:54 PM

IPL 2021: ಐಪಿಎಲ್ -2021 ರ ಲೀಗ್ ಹಂತದಲ್ಲಿ ರಾಹುಲ್ 30 ಸಿಕ್ಸರ್ ಬಾರಿಸಿದರು. ಜೊತೆಗೆ 13 ಪಂದ್ಯಗಳಲ್ಲಿ 626 ರನ್ ಗಳಿಸಿದ್ದಾರೆ. ರಾಹುಲ್ ಸ್ಟ್ರೈಕ್ ರೇಟ್ 138.80.

1 / 6
ಐಪಿಎಲ್ 2021 ರ ಲೀಗ್ ಹಂತ ಮುಗಿದಿದೆ. ಲೀಗ್ ತನ್ನ ಪ್ಲೇಆಫ್‌ನ ನಾಲ್ಕು ತಂಡಗಳನ್ನು ಪಡೆದುಕೊಂಡಿದೆ. ದೆಹಲಿ ಕ್ಯಾಪಿಟಲ್ಸ್ ಅಗ್ರಸ್ಥಾನದಲ್ಲಿದ್ದು ಪ್ಲೇಆಫ್ ಪ್ರವೇಶಿಸಿದೆ. ಮೂರು ಬಾರಿ ವಿಜೇತರಾದ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್‌ಗೆ ಪ್ರವೇಶಿಸಿದೆ. ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್ ನಾಲ್ಕನೇ ಸ್ಥಾನದಲ್ಲಿದೆ. ಪ್ಲೇಆಫ್‌ ಸುತ್ತು ತುಂಬಾ ಆಸಕ್ತಿದಾಯಕವಾಗಿತ್ತು. ಲೀಗ್ ಹಂತದಲ್ಲಿ, ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಅಬ್ಬರಿಸಿದರು. ಲೀಗ್ ಹಂತ ಮುಗಿದ ನಂತರ ಯಾವ ಬ್ಯಾಟ್ಸ್‌ಮನ್ ಹೆಚ್ಚು ಸಿಕ್ಸರ್ ಬಾರಿಸಿದರು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

2 / 6
 ಈ ಪಟ್ಟಿಯಲ್ಲಿರುವ ಮೊದಲ ಹೆಸರು ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್. ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಮತ್ತು ಸಾಕಷ್ಟು ರನ್ ಗಳಿಸಿದ್ದಾರೆ. ಆದರೆ ತಮ್ಮ ತಂಡವನ್ನು ಪ್ಲೇಆಫ್‌ಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಐಪಿಎಲ್ -2021 ರ ಲೀಗ್ ಹಂತದಲ್ಲಿ ರಾಹುಲ್ 30 ಸಿಕ್ಸರ್ ಬಾರಿಸಿದರು. ಜೊತೆಗೆ 13 ಪಂದ್ಯಗಳಲ್ಲಿ 626 ರನ್ ಗಳಿಸಿದ್ದಾರೆ. ರಾಹುಲ್ ಸ್ಟ್ರೈಕ್ ರೇಟ್ 138.80.

3 / 6
 ಗ್ಲೆನ್ ಮ್ಯಾಕ್ಸ್​ವೆಲ್

ಗ್ಲೆನ್ ಮ್ಯಾಕ್ಸ್​ವೆಲ್

4 / 6
ಚೆನ್ನೈ ಸೂಪರ್ ಕಿಂಗ್ಸ್​ನ ಯುವ ಬ್ಯಾಟ್ಸ್​ಮನ್ ರಿತುರಾಜ್ ಗಾಯಕ್ವಾಡ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 14 ಪಂದ್ಯಗಳಲ್ಲಿ 20 ಸಿಕ್ಸರ್ ಬಾರಿಸಿದ್ದಾರೆ ಮತ್ತು 533 ರನ್ ಗಳಿಸಿದ್ದಾರೆ. ಈ ಯುವ ಬಲಗೈ ಬ್ಯಾಟ್ಸ್‌ಮನ್ 137.01 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.

5 / 6
ಈ ಪಟ್ಟಿಯಲ್ಲಿ ಫಾಫ್ ಡು ಪ್ಲೆಸಿಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಚೆನ್ನೈ ತಂಡದಲ್ಲಿ, ಗಾಯಕ್ವಾಡ್‌ ಅವರ ಈ ಪಾಲುದಾರ ಇದುವರೆಗೆ 20 ಸಿಕ್ಸರ್‌ಗಳನ್ನು ಸಂಗ್ರಹಿಸಿದ್ದಾರೆ. ಅದೂ ಕೇವಲ 14 ಪಂದ್ಯಗಳಲ್ಲಿ. ಗಾಯಕವಾಡ್ ಮತ್ತು ಡು ಪ್ಲೆಸಿಸ್ ಅವರ ಅಂಕಿಅಂಶಗಳು ಒಂದೇ ಆಗಿರುತ್ತವೆ. ಡು ಪ್ಲೆಸಿಸ್ 137.53 ಸ್ಟ್ರೈಕ್ ರೇಟ್​ನಲ್ಲಿ ರನ್ ಗಳಿಸಿದರು.

6 / 6
 ಮಯಾಂಕ್ ಅಗರ್ವಾಲ್ ಐದನೇ ಸ್ಥಾನದಲ್ಲಿದ್ದಾರೆ. ಮಯಾಂಕ್ ಈ ಋತುವಿನಲ್ಲಿ 12 ಪಂದ್ಯಗಳನ್ನು ಆಡಿದ್ದಾರೆ ಮತ್ತು 18 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅವರು 140.44 ಸ್ಟ್ರೈಕ್ ರೇಟ್ ನಲ್ಲಿ 441 ರನ್ ಗಳಿಸಿದ್ದಾರೆ.

Published On - 2:54 pm, Sat, 9 October 21