ಎಲ್ಲರನ್ನೂ ಹಿಂದಿಕ್ಕಿ ಸಿಕ್ಸರ್ ಕಿಂಗ್ ಎನಿಸಿಕೊಂಡ ಯುಎಇ ಬ್ಯಾಟರ್..!

| Updated By: ಝಾಹಿರ್ ಯೂಸುಫ್

Updated on: Jan 02, 2024 | 9:03 AM

Most Sixes In 2023: 2023 ರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮುಹಮ್ಮದ್ ವಸೀಮ್. ವಸೀಮ್ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್ 100 ಸಿಕ್ಸ್​ಗಳ ಗಡಿ ತಲುಪಿಲ್ಲ ಎಂಬುದು ವಿಶೇಷ.

1 / 7
2023 ಕಳೆದು ಇದೀಗ 2024 ಕ್ಕೆ ಕಾಲಿಟ್ಟಿದ್ದೇವೆ. ಈ ಬಾರಿಯಂತೆ ಈ ವರ್ಷ ಕೂಡ ಕೆಲ ಬ್ಯಾಟರ್​ಗಳಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು. ಅದರಲ್ಲೂ ಎಲ್ಲರ ಕಣ್ಣು ಇದೀಗ ಯುಎಇ ಆಟಗಾರ ಮುಹಮ್ಮದ್ ವಸೀಮ್ ಮೇಲೆ ನೆಟ್ಟಿದೆ. ಇದಕ್ಕೆ ಕಾರಣ ಒಂದೇ ವರ್ಷದಲ್ಲಿ 100 ಕ್ಕೂ ಅಧಿಕ ಸಿಕ್ಸ್ ಬಾರಿಸುವುದು.

2 / 7
ಹೌದು, 2023 ರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮುಹಮ್ಮದ್ ವಸೀಮ್. ವಸೀಮ್ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್​ಮನ್ 100 ಸಿಕ್ಸ್​ಗಳ ಗಡಿ ತಲುಪಿಲ್ಲ ಎಂಬುದು ವಿಶೇಷ. ಹಾಗಿದ್ರೆ 2023 ರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಬ್ಯಾಟರ್​ಗಳು ಯಾರೆಲ್ಲಾ ಎಂದು ನೋಡೋಣ..

3 / 7
1- ಮುಹಮ್ಮದ್ ವಸೀಮ್: ಯುಎಇ ತಂಡದ ಆರಂಭಿಕ ಆಟಗಾರ ಮುಹಮ್ಮದ್ ವಸೀಮ್ 2023 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟು 47 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಬರೋಬ್ಬರಿ 101 ಸಿಕ್ಸ್​ಗಳನ್ನು ಬಾರಿಸಿ ಕಳೆದ ವರ್ಷದ ಸಿಕ್ಸರ್ ಕಿಂಗ್ ಎನಿಸಿಕೊಂಡಿದ್ದಾರೆ.

4 / 7
2- ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ವರ್ಷ 39 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಹಿಟ್​ಮ್ಯಾನ್ ಬ್ಯಾಟ್​ನಿಂದ ಸಿಡಿದಿರುವ ಸಿಕ್ಸರ್​ಗಳ ಸಂಖ್ಯೆ ಬರೋಬ್ಬರಿ 80 ಸಿಕ್ಸ್​.

5 / 7
3- ಕುಶಾಲ್ ಮಲ್ಲ: ನೇಪಾಳ ತಂಡದ ಬ್ಯಾಟರ್ ಕುಶಾಲ್ ಮಲ್ಲ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 32 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 65 ಸಿಕ್ಸ್​ಗಳನ್ನು ಬಾರಿಸಿ ಈ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿದ್ದಾರೆ.

6 / 7
4- ಮಿಚೆಲ್ ಮಾರ್ಷ್: ಆಸ್ಟ್ರೇಲಿಯಾ ಆಟಗಾರ ಮಿಚೆಲ್ ಮಾರ್ಷ್ 2023 ರಲ್ಲಿ ಒಟ್ಟು 33 ಇನಿಂಗ್ಸ್​ ಆಡಿದ್ದು, ಈ ವೇಳೆ 61 ಸಿಕ್ಸ್​ಗಳನ್ನು ಬಾರಿಸಿದ್ದಾರೆ.

7 / 7
5- ಡೇರಿಲ್ ಮಿಚೆಲ್: ನ್ಯೂಝಿಲೆಂಡ್ ಆಟಗಾರ ಡೇರಿಲ್ ಮಿಚೆಲ್ 2023 ರಲ್ಲಿ 55 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 61 ಸಿಕ್ಸ್​ಗಳನ್ನು ಬಾರಿಸಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ.

Published On - 9:03 am, Tue, 2 January 24