IPL 2023: RCB ಬೌಲರ್​ಗಳ ಬೆಂಡೆತ್ತಿ ಭರ್ಜರಿ ದಾಖಲೆ ಬರೆದ ಮುಂಬೈ ಇಂಡಿಯನ್ಸ್

| Updated By: ಝಾಹಿರ್ ಯೂಸುಫ್

Updated on: May 10, 2023 | 10:52 PM

IPL 2023 Kannada: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 199 ರನ್​ ಕಲೆಹಾಕಿತ್ತು.

1 / 6
IPL 2023: ಐಪಿಎಲ್​ನ 54ನೇ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು ಬಗ್ಗು ಬಡಿಯುವ ಮೂಲಕ ಮುಂಬೈ ಇಂಡಿಯನ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಅದು ಅಂತಿಂಥ ಗೆಲುವಲ್ಲ, ಬದಲಾಗಿ ದಾಖಲೆಯ ಜಯ ಎಂಬುದೇ ವಿಶೇಷ.

2 / 6
ಹೌದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 199 ರನ್​ ಕಲೆಹಾಕಿತ್ತು.

3 / 6
200 ರನ್​ಗಳ ಬೃಹತ್ ಗುರಿ ಪಡೆದ ಮುಂಬೈ ಇಂಡಿಯನ್ಸ್ ತಂಡದ ಪರ ಇಶಾನ್ ಕಿಶನ್ (42), ಸೂರ್ಯಕುಮಾರ್ ಯಾದವ್ (83) ಹಾಗೂ ನೆಹಾಲ್ (52) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೇವಲ 16.3 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

4 / 6
ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಅತೀ ಹೆಚ್ಚು ಬಾಲ್ ಉಳಿಸಿ 200+ ಸ್ಕೋರ್​ ಅನ್ನು ಚೇಸ್ ಮಾಡಿ ಗೆದ್ದ ತಂಡ ಎಂಬ ದಾಖಲೆ ಮುಂಬೈ ಇಂಡಿಯನ್ಸ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ಹೆಸರಿನಲ್ಲಿತ್ತು.

5 / 6
2017 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಗುಜರಾತ್ ಲಯನ್ಸ್ ವಿರುದ್ಧ 15 ಎಸೆತಗಳನ್ನು ಬಾಕಿಯಿರಿಸಿ 208 ರನ್​ಗಳನ್ನು ಚೇಸ್ ಮಾಡಿ ಜಯ ಸಾಧಿಸಿತ್ತು. ಇದೀಗ ಈ ದಾಖಲೆಯನ್ನು ಮುಂಬೈ ಇಂಡಿಯನ್ಸ್ ಮುರಿದಿದೆ.

6 / 6
ಆರ್​ಸಿಬಿ ಬೌಲರ್​ಗಳನ್ನು ಬೆಂಡೆತ್ತಿದ ಮುಂಬೈ ಇಂಡಿಯನ್ಸ್​ ಬ್ಯಾಟರ್​ಗಳು 21 ಎಸೆತಗಳು ಬಾಕಿ ಇರುವಾಗಲೇ 200 ರನ್​ಗಳಿಸಿ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲೇ ಕಡಿಮೆ ಎಸೆತಗಳಲ್ಲಿ 200 ರನ್​ಗಳನ್ನು ಚೇಸ್ ಮಾಡಿದ ದಾಖಲೆಯು ಮುಂಬೈ ಇಂಡಿಯನ್ಸ್ ಪಾಲಾಗಿದೆ.