Namibia vs Karnataka: ನಮೀಬಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಗೆದ್ದ ಕರ್ನಾಟಕ..!
Namibia vs Karnataka: ಐದು ಪಂದ್ಯಗಳ ಏಕದಿನ ಸರಣಿಗಾಗಿ ನಮೀಬಿಯಾ ಪ್ರವಾಸ ಮಾಡಿರುವ ಕರ್ನಾಟಕ ಕ್ರಿಕೆಟ್ ತಂಡ 4ನೇ ಏಕದಿನ ಪಂದ್ಯವನ್ನು 5 ವಿಕೆಟ್ಗಳಿಂದ ಗೆದ್ದು ಏಕದಿನ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.
1 / 6
ಐದು ಪಂದ್ಯಗಳ ಏಕದಿನ ಸರಣಿಗಾಗಿ ನಮೀಬಿಯಾ ಪ್ರವಾಸ ಮಾಡಿರುವ ಕರ್ನಾಟಕ ಕ್ರಿಕೆಟ್ ತಂಡ ವಿಂಡ್‌ಹೋಕ್‌ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ 4ನೇ ಏಕದಿನ ಪಂದ್ಯವನ್ನು 5 ವಿಕೆಟ್ಗಳಿಂದ ಗೆದ್ದು ಏಕದಿನ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿದೆ.
2 / 6
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ನಮೀಬಿಯಾ ತಂಡ ನಿಗದಿತ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 254 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಕರ್ನಾಟಕ ತಂಡ ಇನ್ನು 17 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ಗಳಿಂದ ಗೆದ್ದು ಬೀಗಿತು.
3 / 6
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಮೀಬಿಯಾದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ಮೊದಲ 3 ವಿಕೆಟ್ಗಳು ಕೇವಲ 17 ರನ್ಗಳಿಗೆ ಉರುಳಿದವು. ಆದರೆ ನಾಯಕ ಜಾನ್ ಫ್ರಿಲಿಂಕ್ 124 ಎಸೆತಗಳಲ್ಲಿ 109 ರನ್‌ಗಳ ಶತಕದ ಇನ್ನಿಂಗ್ಸ್ ಆಡಿದರು. ಇವರ ಇನ್ನಿಂಗ್ಸ್‌ನ ಸಹಾಯದಿಂದ ನಮೀಬಿಯಾ 254 ರನ್‌ಗಳ ಗುರಿ ಸೆಟ್ ಮಾಡುವಲ್ಲಿ ಯಶಸ್ವಿಯಾಯಿತು.
4 / 6
ಕರ್ನಾಟಕದ ಪರ ನಿಖಿನ್ ಜೋಶಿ ಎರಡು ವಿಕೆಟ್ ಪಡೆದರು. ವಿಧ್ವತ್ ಕಾವೇರಪ್ಪ, ವಿಜಯ್‌ಕುಮಾರ್ ವೈಶಾಖ್ ಮತ್ತು ಶುಭಾಂಗ್ ಹೆಗ್ಡೆ ತಲಾ ಒಂದು ವಿಕೆಟ್ ಪಡೆದರು.
5 / 6
254 ರನ್‌ಗಳ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 46.1 ಓವರ್‌ಗಳಲ್ಲಿ 256 ರನ್ ಬಾರಿಸುವುದರೊಂದಿಗೆ ಸುಲಭ ಜಯ ಸಾಧಿಸಿತು. ತಂಡದ ಪರ ಆರಂಭಿಕ ಎಲ್‌ಆರ್ ಚೇತನ್ 58 ಎಸೆತಗಳಲ್ಲಿ 47 ರನ್ ಸಿಡಿಸಿದರೆ, ನಿಖಿನ್ ಜೋಶಿ 56 ರನ್ ಗಳಿಸಿ ರನೌಟ್ ಆದರು.
6 / 6
ಇನ್ನು ಸಿದ್ಧಾರ್ಥ್ 26 ರನ್‌ಗಳ ಇನ್ನಿಂಗ್ಸ್ ಆಡಿದರೆ, ಕೃತಿಕ್ ಕೃಷ್ಣ 32 ರನ್ ಬಾರಿಸಿದರು. ರವಿಕುಮಾರ್ ಸಮರ್ಥ್ 56 ರನ್ ಮತ್ತು ಶುಭಾಂಗ್ ಹೆಗ್ಡೆ ಅಜೇಯ 30 ರನ್ ಬಾರಿಸುವುದರೊಂದಿಗೆ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ನಮೀಬಿಯಾ ಪರ ಬೆನ್ ಶಿಕೊಂಗೊ ಎರಡು ವಿಕೆಟ್ ಪಡೆದರೆ, ಹಾಂಡ್ರಾ ಕ್ಲಾಜಿಂಜಾ ಮತ್ತು ಜಾನ್ ಫ್ರಿಲಿಂಕ್ ತಲಾ ಒಂದು ವಿಕೆಟ್ ಪಡೆದರು.