Nathan Lyon: ಟೀಮ್ ಇಂಡಿಯಾ ವಿರುದ್ಧ ಹೊಸ ದಾಖಲೆ ಬರೆದ ನಾಥನ್ ಲಿಯಾನ್

| Updated By: ಝಾಹಿರ್ ಯೂಸುಫ್

Updated on: Feb 18, 2023 | 3:59 PM

Nathan Lyon Records: ಸ್ಪಿನ್ ಮೋಡಿ ಮಾಡಿದ ನಾಥನ್ ಲಿಯಾನ್ ಕೆಎಲ್ ರಾಹುಲ್ (17) ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

1 / 9
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯದ ಮೂಲಕ ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ಇದುವರೆಗೆ ಆಸ್ಟ್ರೇಲಿಯಾದ ಯಾವೊಬ್ಬ ಬೌಲರ್​ ನಿರ್ಮಿಸದ ದಾಖಲೆ ಎಂಬುದೇ ವಿಶೇಷ.

2 / 9
ಬಾರ್ಡರ್-ಗವಾಸ್ಕರ್ ಸರಣಿಯ 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಮೊಹಮ್ಮದ್ ಶಮಿ (4 ವಿಕೆಟ್) ಅವರ ಕರಾರುವಾಕ್ ದಾಳಿಗೆ ತತ್ತರಿಸಿದ ಆಸೀಸ್ ಪಡೆ ಕೇವಲ 263 ರನ್​ಗಳಿಗೆ ಆಲೌಟ್ ಆಗಿದ್ದರು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಅದಕ್ಕೆ ಸ್ಪಿನ್ ಮೋಡಿಗಾರ ನಾಥನ್ ಲಿಯಾನ್ ಅವಕಾಶವನ್ನೇ ಕಲ್ಪಿಸಿರಲಿಲ್ಲ.

3 / 9
2ನೇ ದಿನದಾಟದಲ್ಲಿ ಸ್ಪಿನ್ ಮೋಡಿ ಮಾಡಿದ ನಾಥನ್ ಲಿಯಾನ್ ಕೆಎಲ್ ರಾಹುಲ್ (17) ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ರೋಹಿತ್ ಶರ್ಮಾ (32) ರನ್ನು ಕ್ಲೀನ್ ಬೌಲ್ಡ್ ಮಾಡಿದರು.

4 / 9
ಆ ಬಳಿಕ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಚೇತೇಶ್ವರ ಪೂಜಾರರನ್ನು ಶೂನ್ಯಕ್ಕೆ ಔಟ್ ಮಾಡಿ ಸಂಭ್ರಮಿಸಿದರು. ಇನ್ನು ನಾಥನ್ ಲಿಯಾನ್ ಅವರ ನಾಲ್ಕನೇ ಬಲಿ ಶ್ರೇಯಸ್ ಅಯ್ಯರ್ (4). ಇದಾದ ಬಳಿಕ ಕೆಎಸ್ ಭರತ್ (6) ಅವರನ್ನು ಔಟ್ ಮಾಡುವ ಮೂಲಕ ನಾಥನ್ ಲಿಯಾನ್ 5 ವಿಕೆಟ್​ಗಳ ಸಾಧನೆ ಮಾಡಿದರು.

5 / 9
ವಿಶೇಷ ಎಂದರೆ ಈ 5 ವಿಕೆಟ್​ಗಳೊಂದಿಗೆ ನಾಥನ್ ಲಿಯಾನ್ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 100 ವಿಕೆಟ್ ಕಬಳಿಸಿದ ಮೊದಲ ಆಸ್ಟ್ರೇಲಿಯಾ ಬೌಲರ್ ಎನಿಸಿಕೊಂಡರು. ಅಲ್ಲದೆ ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ನಲ್ಲಿ ನೂರು ವಿಕೆಟ್ ಉರುಳಿಸಿದ ವಿಶ್ವದ ಮೂರನೇ ಬೌಲರ್​ ಎಂಬ ದಾಖಲೆಯನ್ನೂ ಕೂಡ ಬರೆದರು.

6 / 9
ಇದಕ್ಕೂ ಮುನ್ನ ಇಂಗ್ಲೆಂಡ್​ನ ಜೇಮ್ಸ್ ಅ್ಯಂಡರ್ಸನ್ ಹಾಗೂ ಮುತ್ತಯ್ಯ ಮುರಳೀಧರನ್ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್​ ಕ್ರಿಕೆಟ್​ನಲ್ಲಿ 100 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇನ್ನು ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ 100 ವಿಕೆಟ್ ಪಡೆದ ಮೂರನೇ ಬೌಲರ್​ ಎಂಬ ಹೆಗ್ಗಳಿಕೆಗೂ ನಾಥನ್ ಲಿಯಾನ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆಯನ್ನು ಅನಿಲ್ ಕುಂಬ್ಳೆ ಹಾಗೂ ಅಶ್ವಿನ್ ನಿರ್ಮಿಸಿದ್ದರು.

7 / 9
ಅನಿಲ್ ಕುಂಬ್ಳೆ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 38 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಅನಿಲ್ ಕುಂಬ್ಳೆ ಒಟ್ಟು 111 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಭಾರತ-ಆಸ್ಟ್ರೇಲಿಯಾ ನಡುವಣ ಟೆಸ್ಟ್​​ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.

8 / 9
ರವಿಚಂದ್ರನ್ ಅಶ್ವಿನ್: ಅನಿಲ್ ಕುಂಬ್ಳೆ ಬಳಿಕ ಈ ಸಾಧನೆ ಮಾಡಿದ 2ನೇ ಬೌಲರ್ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾತ್ರರಾಗಿದ್ದಾರೆ. ದೆಹಲಿ ಟೆಸ್ಟ್​ನ ಮೊದಲ ಇನಿಂಗ್ಸ್​ನಲ್ಲಿ 3 ವಿಕೆಟ್ ಕಬಳಿಸುವ ಮೂಲಕ ಅಶ್ವಿನ್ ಈ ಸಾಧನೆ ಮಾಡಿದರು. ಬಾರ್ಡರ್​-ಗವಾಸ್ಕರ್ ಸರಣಿಯಲ್ಲಿ 37 ಇನಿಂಗ್ಸ್​ನಲ್ಲಿ ಚೆಂಡೆಸೆದಿರುವ ಅಶ್ವಿನ್ ಒಟ್ಟು 100* ವಿಕೆಟ್ ಕಬಳಿಸಿದ್ದಾರೆ.

9 / 9
ನಾಥನ್ ಲಿಯಾನ್: ಟೀಮ್ ಇಂಡಿಯಾ ವಿರುದ್ಧ ದೆಹಲಿ ಟೆಸ್ಟ್​ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ 3ನೇ ಬೌಲರ್​ ಎಂಬ ಹಿರಿಮೆಗೆ ಲಿಯಾನ್ ಪಾತ್ರರಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್​​ ಸರಣಿಯಲ್ಲಿ ಇದುವರೆಗೆ 43 ಇನಿಂಗ್ಸ್​ನಲ್ಲಿ ಬೌಲಿಂಗ್ ಮಾಡಿರುವ ನಾಥನ್ ಲಿಯಾನ್ ಒಟ್ಟು 100* ಪಡೆದು ವಿಕೆಟ್ ಬೇಟೆ ಮುಂದುವರೆಸಿದ್ದಾರೆ.