- Kannada News Photo gallery Cricket photos Hardik Natasha Wedding Unseen Pictures Of Hardik Natashas Wedding Came Out see photos
Hardik-Natasha Wedding: ಹಾರ್ದಿಕ್-ನತಾಶಾ ಮದುವೆಯ ಅಪರೂಪದ ಫೋಟೋಗಳು ಇಲ್ಲಿವೆ
Hardik-Natasha Wedding: ಫೆಬ್ರವರಿ 14 ರಂದು, ದಂಪತಿಗಳಿಬ್ಬರು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು. ಮರುದಿನವೇ ಫೆಬ್ರವರಿ 15 ರಂದು ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
Updated on: Feb 18, 2023 | 12:45 PM

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅವರ ಮರು ವಿವಾಹದ ಎಲ್ಲಾ ವಿಧಿವಿಧಾನಗಳು ಮುಗಿದಿವೆ. ಫೆಬ್ರವರಿ 14 ರಂದು, ದಂಪತಿಗಳಿಬ್ಬರು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು. ಮರುದಿನವೇ ಫೆಬ್ರವರಿ 15 ರಂದು ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

ಹಾರ್ದಿಕ್ ಮತ್ತು ನತಾಶಾ ತಮ್ಮ ಮದುವೆಗೆ ಉದಯಪುರವನ್ನು ಆಯ್ಕೆ ಮಾಡಿಕೊಂಡಿದ್ದರು. ಮದುವೆಯ ವಿಧಿವಿಧಾನಗಳು ಮೂರು ದಿನಗಳ ಕಾಲ ನಡೆದವು. ಈ ವಿಶೇಷ ಸಂದರ್ಭದಲ್ಲಿ ಹಲವು ತಾರೆಯರು ಪಾಲ್ಗೊಂಡಿದ್ದರು. ಅದೇ ಸಮಯದಲ್ಲಿ, ವಿವಿಧ ಉದ್ಯಮಗಳ ದೊಡ್ಡ ವ್ಯಕ್ತಿಗಳು ಈ ಮದುವೆಯಲ್ಲಿ ಭಾಗವಹಿಸಿದರು.

ಅಂದಹಾಗೆ, ಮದುವೆಯ ಹಲವು ಚಿತ್ರಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ಇತ್ತೀಚಿಗೆ ಈ ಜೋಡಿಗಳ ಅಪರೂಪದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂದಿವೆ. ಈ ಅಪರೂಪದ ಫೋಟೋಗಳಲ್ಲಿ ಈ ದಂಪತಿಗಳು ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವುದನ್ನು ಕಾಣಬಹುದಾಗಿದೆ.

ಈ ಮದುವೆ ಸಂಭ್ರಮದಲ್ಲಿ ಸಹೋದರ ಕೃನಾಲ್ ಪಾಂಡ್ಯ ಮತ್ತು ಅತ್ತಿಗೆ ಪಂಖುನಿ ಕೂಡ ಭಾಗವಹಿಸಿದ್ದರು.

ಮದುವೆ ಮಂಟಪದಲ್ಲಿ ಕುಳಿತಿರುವ ಮದುಮಗ ಹಾರ್ದಿಕ್ ಪಾಂಡ್ಯ ಹಣೆಗೆ ಸಹೋದರ ಕೃನಾಲ್ ಪಾಂಡ್ಯ ತಿಲಕವನ್ನಿಡುವುದನ್ನು ಕಾಣಬಹುದಾಗಿದೆ.

ಬಳಿಕ ಮದುವೆಯ ಆಚರಣೆಗಳು ಮುಗಿದ ನಂತರ, ಹಾರ್ದಿಕ್ ತನ್ನ ಸಹೋದರ ಕೃನಾಲ್ ಜೊತೆಗೂಡಿ ಮಂಟಪದಲ್ಲಿ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
























