- Kannada News Photo gallery Cricket photos India Women face England Women in the third fixture of their Women's T20 World Cup 2023 campaign
INDW vs ENGW: ಮಹಿಳಾ ಟಿ20 ವಿಶ್ವಕಪ್ನಲ್ಲಿಂದು ಭಾರತ vs ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯ: ಎಷ್ಟು ಗಂಟೆಗೆ ಆರಂಭ?
WT20WC, India Women vs England Women: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಇಂದು ಗ್ಕೆಬರ್ಹಾನ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ವನಿತೆಯರು ಮುಖಾಮುಖಿ ಆಗುತ್ತಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.
Updated on: Feb 18, 2023 | 10:35 AM

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ರೋಚಕ ಘಟ್ಟದತ್ತ ತಲುಪುತ್ತಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಭರ್ಜರಿ ಪ್ರದರ್ಶನ ತೋರುತ್ತಿದ್ದು ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ಗ್ಕೆಬರ್ಹಾನ ಸೇಂಟ್ ಜಾರ್ಜ್ ಪಾರ್ಕ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ವನಿತೆಯರು ಮುಖಾಮುಖಿ ಆಗುತ್ತಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ.

ಈಗಾಗಲೇ ಉಭಯ ತಂಡಗಳು ಆಡಿರುವ ಎರಡು ಪಂದ್ಯಗಳ ಪೈಕಿ ಎರಡರಲ್ಲೂ ಗೆದ್ದು ಬೀಗಿದೆ. ಟೀಮ್ ಇಂಡಿಯಾ ಪಾಕ್ ವಿರುದ್ಧ 7 ವಿಕೆಟ್ಗಳ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದರೆ, ಇತ್ತ ಇಂಗ್ಲೆಂಡ್ ವನಿತೆಯರು ವಿಂಡೀಸ್ ವಿರುದ್ಧ 7 ವಿಕೆಟ್ಗಳ, ಐರ್ಲೆಂಡ್ ವಿರುದ್ಧ 4 ವಿಕೆಟ್ಗಳಿಂದ ಗೆದ್ದಿತ್ತು.

ಸದ್ಯ ರನ್ರೇಟ್ ಆಧಾರದ ಮೇಲೆ 4 ಅಂಕದೊಂದಿಗೆ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಭಾರತ ದ್ವಿತೀಯ ಸ್ಥಾನದಲ್ಲಿದೆ. ಭಾರತ ಮಹಿಳಾ ತಂಡ ಇಂದಿನ ಪಂದ್ಯವನ್ನೂ ಗೆದ್ದರೆ 6 ಪಾಯಿಂಟ್ನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

ಭಾರತ ಶಫಾಲಿ ವರ್ಮಾ, ಸ್ಮೃತಿ ಮಂದಾನ, ಜೆಮಿಯಾ, ಹರ್ಮನ್‌ಪ್ರೀತ್, ರಿಚಾ ಘೋಷ್ ಅವರಂತಹ ಸ್ಟಾರ್ ಬ್ಯಾಟರ್ಗಳಿಂದ ಕೂಡಿದೆ. ಆದರೆ, ಅನುಭವಿ ಬ್ಯಾಟರ್ಗಳಾದ ಮಂದಾನ ಹಾಗೂ ಕೌರ್ ಕಡೆಯಿಂದ ನಿರೀಕ್ಷೆಗೆ ತಕ್ಕ ಪ್ರದರ್ಶನ ಬರುತ್ತಿಲ್ಲ. ಇಂದಿನದು ಮಹತ್ವದ ಪಂದ್ಯ ಆಗಿರುವುದರಿಂದ ಇವರಿಬ್ಬರು ಮಿಂಚಲೇ ಬೇಕಾಗಿದೆ.

ಇತ್ತ ಇಂಗ್ಲೆಂಡ್ ಬಲಿಷ್ಠವಾಗಿದೆ. ಬ್ಯಾಟರ್ಗಳು ಕೈಕೊಟ್ಟರೆ ಬೌಲರ್ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಅಲಿನ್ ಕಾಪ್ಸೆ, ನಾಯಕಿ ಹೇಲೆ ಮ್ಯಾಥ್ಯೂಸ್, ಕಾಂಪ್ಬೆಲ್ಲೆ ಭರ್ಜರಿ ಫಾರ್ಮ್ನಲ್ಲಿದ್ದು ಅಪಾಯಕಾರಿ ಆಗಬಹುದು. ಹೀಗಾಗಿ ಭಾರತೀಯ ಬೌಲರ್ಗಳು ಕೂಡ ರಣತಂತ್ರ ಹೇರಬೇಕಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಪಂದ್ಯ ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 6:30ಕ್ಕೆ ಆರಂಭವಾಗಲಿದೆ. 6 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ನೋಡಬಹುದು.

ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ರಾಧಾ ಯಾದವ್, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್, ಶಿಖಾ ಪಾಂಡೆ, ರೇಣುಕಾ ಠಾಕೂರ್, ಅಂಜಲಿ ಸರ್ವಾಣಿ.
























