- Kannada News Photo gallery Cricket photos IND vs AUS 2nd test Ravichandran Ashwin achieves magnanimous records in Delhi vs australia
IND vs AUS: ಆಸೀಸ್ ವಿರುದ್ಧ ಶತಕದ ಸಾಧನೆ ಮಾಡಿದ ಅಶ್ವಿನ್..! 700 ವಿಕೆಟ್ ಕಂಪ್ಲೀಟ್
Ravichandran Ashwin: ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ತಂಡದ ವಿರುದ್ಧ 100 ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು.
Updated on:Feb 17, 2023 | 5:00 PM

ಮೊದಲ ಟೆಸ್ಟ್ನಲ್ಲಿ ಆಸೀಸ್ ಪಡೆಯನ್ನು ಇನ್ನಿಲ್ಲದಂತೆ ಕಾಡಿದ ರವಿಚಂದ್ರನ್ ಅಶ್ವಿನ್, ಎರಡನೇ ಟೆಸ್ಟ್ನಲ್ಲೂ ವಿಕೆಟ್ಗಳ ಭೇಟೆಯಾಡಿದ್ದಾರೆ.

ಒಂದೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಅಶ್ವಿನ್, ಮೊದಲು ಮಾರ್ನಸ್ ಲಬುಶೇನ್ಗೆ ಪೆವಲಿಯನ್ ಹಾದಿ ತೋರಿಸಿದರೆ, ನಂತರದ ಎಸೆತದಲ್ಲೇ ಸ್ಟೀವ್ ಸ್ಮಿತ್ ಅವರನ್ನು ಹೊರಹಾಕಿದರು.

ಬಳಿಕ ಅಲೆಕ್ಸ್ ಕ್ಯಾರಿ ವಿಕೆಟ್ ಪಡೆದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ತಂಡದ ವಿರುದ್ಧ 100 ಹೆಚ್ಚು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು.ಅಷ್ಟೇ ಅಲ್ಲ, ಅಶ್ವಿನ್ ಈಗ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳನ್ನು ಕೂಡ ಪೂರೈಸಿದ್ದಾರೆ. ಇನ್ನು ಅಶ್ವಿನ್ ಹೊರತುಪಡಿಸಿ ಟೆಸ್ಟ್ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ಪಡೆದ ಆಟಗಾರರ ಪಟ್ಟಿ ಹೀಗಿದೆ.

ಶೇನ್ ವಾರ್ನ್: ಇಂಗ್ಲೆಂಡ್ ವಿರುದ್ಧ 195 ವಿಕೆಟ್

ಡೆನ್ನಿಸ್ ಲಿಲ್ಲೆ: ಇಂಗ್ಲೆಂಡ್ ವಿರುದ್ಧ 167 ವಿಕೆಟ್

ಕರ್ಟ್ಲಿ ಆಂಬ್ರೋಸ್: ಇಂಗ್ಲೆಂಡ್ ವಿರುದ್ಧ 164 ವಿಕೆಟ್

ಗ್ಲೆನ್ ಮೆಕ್‌ಗ್ರಾತ್: ಇಂಗ್ಲೆಂಡ್ ವಿರುದ್ಧ 157 ವಿಕೆಟ್

ಇಯಾನ್ ಬೋಥಮ್: ಆಸ್ಟ್ರೇಲಿಯಾ ವಿರುದ್ಧ 148 ವಿಕೆಟ್
Published On - 5:00 pm, Fri, 17 February 23




