‘ಇದು ನನ್ನ ಕೊನೆಯ ಟಿ20 ವಿಶ್ವಕಪ್’; ಕಿವೀಸ್ ತಂಡದ ಸ್ಟಾರ್ ಪ್ಲೇಯರ್ ಘೋಷಣೆ

|

Updated on: Jun 15, 2024 | 7:49 PM

T20 World Cup 2024: ಉಗಾಂಡಾ ವಿರುದ್ಧದ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರೆಂಟ್ ಬೌಲ್ಟ್, ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದು ಹೇಳಿದ್ದಾರೆ. ಅಂದರೆ ಅವರು 2026 ರ ಟಿ-20 ವಿಶ್ವಕಪ್‌ನಲ್ಲಿ ಬೌಲ್ಟ್ ಆಡುವುದಿಲ್ಲ ಎಂಬುದು ಸಾಭೀತಾಗಿದೆ.

1 / 7
ಈ ಬಾರಿಯ ಟಿ20 ವಿಶ್ವಕಪ್‌ನಿಂದ ನ್ಯೂಜಿಲೆಂಡ್ ತಂಡ ಲೀಗ್ ಹಂತದಿಂದಲೇ ಹೊರಬಿದ್ದಿದೆ. ಕಿವೀಸ್ ತಂಡ ಲೀಗ್ ಸುತ್ತಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋಲನ್ನು ಎದುರಿಸಬೇಕಾಯಿತು. ಹೀಗಾಗಿ ಉಗಾಂಡಾ ವಿರುದ್ಧದ ಪಂದ್ಯದಲ್ಲಿ ಗೆದ್ದು, ಪಪುವಾ ನ್ಯೂಗಿನಿ ವಿರುದ್ಧ ಒಂದು ಪಂದ್ಯ ಉಳಿದಿದ್ದರೂ ಅಂಕಗಳ ಆಧಾರದ ಮೇಲೆ ಕೇನ್ ಪಡೆ ವಿಶ್ವಕಪ್‌ನಿಂದ ಹೊರಬಿದ್ದಿದೆ.

2 / 7
ಒಂದೆಡೆ ಈ ಬಾರಿಯ ಟಿ20 ವಿಶ್ವಕಪ್ ಗೆದ್ದು, ವಿಶ್ವಕಪ್ ಬರವನ್ನು ನೀಗಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಕಿವೀಸ್ ಪಡೆಯ ಕನಸು ಮೊಳಕೆಯಲ್ಲೇ ಸತ್ತು ಹೋಗಿದ್ದರೆ, ಇನ್ನೊಂದೆಡೆ ಕಿವೀಸ್ ತಂಡದ ‘ಹೋಮ್‌ಕಮಿಂಗ್‌’ಗೂ ಮುನ್ನ ನ್ಯೂಜಿಲೆಂಡ್‌ನ ಸ್ಟಾರ್ ಬೌಲರ್ ಟ್ರೆಂಟ್ ಬೌಲ್ಟ್ ದೊಡ್ಡ ಘೋಷಣೆ ಮಾಡಿದ್ದಾರೆ.

3 / 7
ಉಗಾಂಡಾ ವಿರುದ್ಧದ ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರೆಂಟ್ ಬೌಲ್ಟ್, ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದು ಹೇಳಿದ್ದಾರೆ. ಅಂದರೆ ಅವರು 2026 ರ ಟಿ-20 ವಿಶ್ವಕಪ್‌ನಲ್ಲಿ ಬೌಲ್ಟ್ ಆಡುವುದಿಲ್ಲ ಎಂಬುದು ಸಾಭೀತಾಗಿದೆ.

4 / 7
ಬೌಲ್ಟ್ ತಮ್ಮ ಹೇಳಿಕೆಯಲ್ಲಿ ಇದು ನನ್ನ ಕೊನೆಯ ಟಿ20 ವಿಶ್ವಕಪ್. ನಾನು ಹೇಳಬೇಕಾಗಿರುವುದು ಇಷ್ಟೇ ಎಂದರು. 2011 ರ ಡಿಸೆಂಬರ್​ನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಬೌಲ್ಟ್, ಅಂದಿನಿಂದ ತಂಡದ ಪ್ರಮುಖ ಬೌಲರ್ ಆಗಿದ್ದಾರೆ. ಇದುವರೆಗೆ ಬೌಲ್ಟ್ 2014 ರಿಂದ ಟಿ20 ವಿಶ್ವಕಪ್‌ನ 4 ಸೀಸನ್​ಗಳಲ್ಲಿ ಭಾಗವಹಿಸಿದ್ದಾರೆ.

5 / 7
ಬೌಲ್ಟ್ ಈಗ ನ್ಯೂಜಿಲೆಂಡ್ ಪರ ಆಡುತ್ತಾರೆಯೇ ಅಥವಾ ಯಾವುದೇ ಒಂದು ಸ್ವರೂಪದಿಂದ ನಿವೃತ್ತಿ ಹೊಂದುತ್ತಾರೆಯೇ ಎಂಬುದು ದೃಢಪಟ್ಟಿಲ್ಲ. ಆದರೆ ಅವರು 2026 ರ ವಿಶ್ವಕಪ್‌ನ ಭಾಗವಾಗುವುದಿಲ್ಲ ಎಂಬುದು ಖಚಿತವಾಗಿದೆ. 2022 ರಲ್ಲಿ ಬೋಲ್ಟ್ ಕೇಂದ್ರ ಒಪ್ಪಂದದಿಂದ ಹೊರಗಿದ್ದರು. ಸ್ವತಃ ಅವರೇ ಈ ಆಯ್ಕೆಯನ್ನು ಆರಿಸಿಕೊಂಡಿದ್ದರು.

6 / 7
ಪ್ರಸ್ತುತ, ಅವರು ಪ್ರಪಂಚದಾದ್ಯಂತ ಫ್ರಾಂಚೈಸ್ ಕ್ರಿಕೆಟ್ ಆಡುತ್ತಿದ್ದಾರೆ. ಬೌಲ್ಟ್ ಇಲ್ಲಿಯವರೆಗೆ ಅವರು 78 ಟೆಸ್ಟ್, 114 ಏಕದಿನ ಮತ್ತು 60 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್‌ನಲ್ಲಿ 317, ಏಕದಿನದಲ್ಲಿ 211 ಮತ್ತು ಟಿ-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 81 ವಿಕೆಟ್‌ಗಳನ್ನು ಪಡೆದಿದ್ದಾರೆ.

7 / 7
ಬೌಲ್ಟ್ ಹೆಸರಿನಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿದ್ದು, ಏಕದಿನದಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ವಿಶ್ವದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.