8 Sixes In An Over: ಒಂದೇ ಓವರ್​ನಲ್ಲಿ 8 ಸಿಕ್ಸ್, 77 ರನ್​: ಇದುವೇ ವಿಶ್ವ ದಾಖಲೆ..!

| Updated By: ಝಾಹಿರ್ ಯೂಸುಫ್

Updated on: Nov 29, 2022 | 10:14 PM

World Records: ಇದು ವಿಶ್ವ ದಾಖಲೆಯಲ್ಲ ಎಂಬುದು ವಿಶೇಷ. ಅಂದರೆ ರತುರಾಜ್ ಗಾಯಕ್ವಾಡ್​ಗೂ ಮೊದಲೇ ನ್ಯೂಜಿಲೆಂಡ್ ಆಟಗಾರ ಒಂದೇ ಓವರ್​ನಲ್ಲಿ ಒಟ್ಟು 8 ಸಿಕ್ಸ್​ಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

1 / 6
ಟೀಮ್ ಇಂಡಿಯಾದ ಯುವ ಆಟಗಾರ ರುತುತಾಜ್ ಗಾಯಕ್ವಾಡ್ ಒಂದೇ ಓವರ್​ನಲ್ಲಿ 7 ಸಿಕ್ಸ್ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಜಯ್ ಹಜಾರೆ ಟೂರ್ನಿಯಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಮಹಾರಾಷ್ಟ್ರ ಪರ ಬ್ಯಾಟ್ ಬೀಸಿದ ರುತುರಾಜ್ ಶಿವಂ ಸಿಂಗ್ ಓವರ್​ನಲ್ಲಿ 7 ಸಿಕ್ಸ್​ನೊಂದಿಗೆ 43 ರನ್​ ಚಚ್ಚಿದ್ದರು.

2 / 6
ಈ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ರುತುರಾಜ್ ಗಾಯಕ್ವಾಡ್ 159 ಎಸೆತಗಳಲ್ಲಿ ಅಜೇಯ 220 ರನ್​ ಬಾರಿಸಿದ್ದರು. ಈ ಇನ್ನಿಂಗ್ಸ್‌ನೊಂದಿಗೆ, ರುತುರಾಜ್ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಒಂದೇ ಓವರ್‌ನಲ್ಲಿ ಏಳು ಸಿಕ್ಸರ್‌ಗಳನ್ನು ಬಾರಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು.

3 / 6
ಆದರೆ ಇದು ವಿಶ್ವ ದಾಖಲೆಯಲ್ಲ ಎಂಬುದು ವಿಶೇಷ. ಅಂದರೆ ರತುರಾಜ್ ಗಾಯಕ್ವಾಡ್​ಗೂ ಮೊದಲೇ ನ್ಯೂಜಿಲೆಂಡ್ ಆಟಗಾರ ಒಂದೇ ಓವರ್​ನಲ್ಲಿ ಒಟ್ಟು 8 ಸಿಕ್ಸ್​ಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

4 / 6
1990 ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ ವೆಲ್ಲಿಂಗ್ಟನ್ ಮತ್ತು ಕ್ಯಾಂಟರ್ಬರಿ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಕಣಕ್ಕಿಳಿದ ಲೀ ಜರ್ಮನ್ ಅಕ್ಷರಶಃ ಅಬ್ಬರಿಸಿದ್ದರು. ವೆಲ್ಲಿಂಗ್ಟನ್ ಬೌಲರ್​ ಬರ್ಟ್​ ವ್ಯಾನ್ಸ್​ ಓವರ್​ನಲ್ಲಿ ಒಟ್ಟು 8 ಸಿಕ್ಸ್​ಗಳನ್ನು ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

5 / 6
ವಿಶೇಷ ಎಂದರೆ ವ್ಯಾನ್ಸ್ ಆ ಓವರ್​ನಲ್ಲಿ ಬರೋಬ್ಬರಿ 22 ಎಸೆತಗಳನ್ನು ಎಸೆದಿದ್ದರು. ಅದರಲ್ಲಿ 17 ನೋಬಾಲ್​ಗಳು. ಇದರ ಸಂಪೂರ್ಣ ಲಾಭ ಪಡೆದ ಲೀ ಜರ್ಮನ್ ಒಟ್ಟು 77 ರನ್ ಕಲೆಹಾಕಿದ್ದರು ಎಂಬುದೇ ಅಚ್ಚರಿ.

6 / 6
ಅಂದರೆ ಅಂದು ವ್ಯಾನ್ಸ್ ಎಸೆದ ಓವರ್​ನ 22 ಎಸೆತಗಳಲ್ಲಿ ಕ್ಯಾಂಟರ್ಬರಿ ಬ್ಯಾಟ್ಸ್​ಮನ್​ಗಳು...0,4,4,4,6,6,4,6,1,4,1,0,6,6,6,6,6,0,0,4,0,1...ರನ್​ ಕಲೆಹಾಕಿದ್ದರು. ಈ ಮೂಲಕ ಒಟ್ಟು 77 ರನ್​ ಬಾರಿಸಿ ಇತಿಹಾಸ ನಿರ್ಮಿಸಿದ್ದರು. ಇದುವೇ ಇಂದಿಗೂ ಒಂದೇ ಓವರ್​ನಲ್ಲಿ ಮೂಡಿಬಂದ ಅತ್ಯಧಿಕ ಸಿಕ್ಸ್​ ದಾಖಲೆಯಾಗಿ ಉಳಿದಿದೆ. (ಸಾಂದರ್ಭಿಕ ಚಿತ್ರ)

Published On - 9:23 pm, Tue, 29 November 22