AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್ ಸರಣಿ ಗೆದ್ದರೂ WTC ಪಾಯಿಂಟ್ಸ್ ಪಟ್ಟಿಯಲ್ಲಿ ಖಾತೆ ತೆರೆಯದ ನ್ಯೂಜಿಲೆಂಡ್; ಕಾರಣವೇನು?

New Zealand's Massive Win vs Zimbabwe: ನ್ಯೂಜಿಲೆಂಡ್ ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 359 ರನ್‌ಗಳಿಂದ ಗೆದ್ದಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದ ಮೂರನೇ ಅತಿದೊಡ್ಡ ಗೆಲುವು. ಆದರೆ, ಜಿಂಬಾಬ್ವೆ WTCಯಲ್ಲಿಲ್ಲದ ಕಾರಣ, ಈ ಗೆಲುವಿನಿಂದ ನ್ಯೂಜಿಲೆಂಡ್‌ಗೆ ಯಾವುದೇ ಅಂಕಗಳು ಸಿಗಲಿಲ್ಲ. ದಕ್ಷಿಣ ಆಫ್ರಿಕಾ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಿಸಿದೆ. ಪ್ರಸ್ತುತ WTC ಪಾಯಿಂಟ್ಸ್ ಟೇಬಲ್‌ನಲ್ಲಿ ಆಸ್ಟ್ರೇಲಿಯಾ ಮುಂಚೂಣಿಯಲ್ಲಿದೆ.

ಪೃಥ್ವಿಶಂಕರ
|

Updated on: Aug 09, 2025 | 10:43 PM

Share
ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಅದ್ಭುತ ಪ್ರದರ್ಶನ ನೀಡಿ ಇನ್ನಿಂಗ್ಸ್ ಮತ್ತು 359 ರನ್‌ಗಳ ಬೃಹತ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ, ನ್ಯೂಜಿಲೆಂಡ್ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು . ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೂರನೇ ಅತಿದೊಡ್ಡ ಜಯವಾಗಿದೆ.

1 / 6
ಆದರೆ ಈ ಐತಿಹಾಸಿಕ ಗೆಲುವಿನ ಹೊರತಾಗಿಯೂ ನ್ಯೂಜಿಲೆಂಡ್, 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​ನ ಪಾಯಿಂಟ್ ಪಟ್ಟಿಯಲ್ಲಿ ಯಾವುದೇ ಪ್ರಯೋಜನವನ್ನು ಪಡೆಯಲಿಲ್ಲ. ಅಂದರೆ ಟೆಸ್ಟ್ ಸರಣಿ ಗೆದ್ದರೂ ನ್ಯೂಜಿಲೆಂಡ್ ತಂಡಕ್ಕೆ ಯಾವುದೇ ಅಂಕಗಳು ಸಿಕ್ಕಿಲ್ಲ.

2 / 6
ವಾಸ್ತವವಾಗಿ, ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರ-9 ತಂಡಗಳು ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುತ್ತವೆ. ಆದರೆ ಜಿಂಬಾಬ್ವೆ ತಂಡದ ಶ್ರೇಯಾಂಕ ಇದಕ್ಕಿಂತ ಕೆಳಗಿರುವುದರಿಂದ, ಉಭಯ ತಂಡಗಳ ಟೆಸ್ಟ್ ಸರಣಿಯು WTC ಯ ಭಾಗವಾಗಿರಲಿಲ್ಲ. ಇದರರ್ಥ ನ್ಯೂಜಿಲೆಂಡ್ ಎರಡೂ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದರೂ ಸಹ, ಈ ಸರಣಿಯಿಂದ ಯಾವುದೇ ಅಂಕಗಳನ್ನು ಪಡೆಯುವುದಿಲ್ಲ.

3 / 6
ಇತ್ತೀಚೆಗೆ, ದಕ್ಷಿಣ ಆಫ್ರಿಕಾ ತಂಡವು ಜಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿ ಏಕಪಕ್ಷೀಯವಾಗಿ ಗೆದ್ದಿತು. ಆದರೆ ನ್ಯೂಜಿಲೆಂಡ್​ನಂತೆಯೇ ದಕ್ಷಿಣ ಆಫ್ರಿಕಾ ಕೂಡ 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್‌ ಪಟ್ಟಿಯಲ್ಲಿ ಯಾವುದೇ ಅಂಕಗಳನ್ನು ಪಡೆಯಲಿಲ್ಲ .

4 / 6
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಇಲ್ಲಿಯವರೆಗೆ 6 ತಂಡಗಳು ಭಾಗವಹಿಸಿವೆ. ಪ್ರಸ್ತುತ, ಆಸ್ಟ್ರೇಲಿಯಾ ತಂಡವು 12 ಅಂಕಗಳು ಮತ್ತು 100 PCT ಯೊಂದಿಗೆ ಮೊದಲ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಶ್ರೀಲಂಕಾ ತಂಡವು 2 ಪಂದ್ಯಗಳಲ್ಲಿ 1 ಜಯದೊಂದಿಗೆ ಎರಡನೇ ಸ್ಥಾನದಲ್ಲಿದೆ.

5 / 6
ಇದರ ನಂತರ ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಭಾರತ ತಂಡವಿದೆ. ಇವುಗಳಲ್ಲದೆ, ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಐದನೇ ಸ್ಥಾನದಲ್ಲಿ ಮತ್ತು ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ.

6 / 6