ದಿಢೀರ್ ನಿವೃತ್ತಿ ಘೋಷಿಸಿದ ನಿಕೋಲಸ್ ಪೂರನ್..!

Updated on: Jun 10, 2025 | 8:01 AM

Nicholas Pooran retirement: ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ನಿಕೋಲಸ್ ಪೂರನ್ 29ನೇ ವಯಸ್ಸಿನಲ್ಲಿ ಇಂಟರ್​ನ್ಯಾಷನಲ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಇದಾಗ್ಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೇರಿದಂತೆ ವಿಶ್ವದ ಪ್ರಮುಖ ಲೀಗ್​ಗಳಲ್ಲಿ ಮುಂದುವರೆಯುವುದಾಗಿ ಅವರು ತಿಳಿಸಿದ್ದಾರೆ.

1 / 5
ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ದಾಂಡಿಗ ನಿಕೋಲಸ್ ಪೂರನ್ (Nicholas Pooran) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಅದು ಕೂಡ ತಮ್ಮ 29ನೇ ವಯಸ್ಸಿನಲ್ಲಿ ಎಂಬುದೇ ಅಚ್ಚರಿ. 2016 ರಲ್ಲಿ ವಿಂಡೀಸ್ ಪರ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದ ಪೂರನ್ ಕೇವಲ 9 ವರ್ಷಗಳಲ್ಲೇ ಇಂಟರ್​ನ್ಯಾಷನಲ್ ಕೆರಿಯರ್ ಅಂತ್ಯಗೊಳಿಸಿದ್ದಾರೆ.

2 / 5
ಈ ಬಗ್ಗೆ ಸೋಷಿಯಲ್ ಮೀಡಿಯಾದ ಪೋಸ್ಟ್ ಹಂಚಿಕೊಂಡಿರುವ ನಿಕೋಲಸ್ ಪೂರನ್, ಬಹಳ ಯೋಚಿಸಿದ ನಂತರ, ನಾನು ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನಾವು ಪ್ರೀತಿಸುವ ಈ ಆಟ ನಮಗೆ ತುಂಬಾ ನೀಡಿದೆ ಮತ್ತು ಮುಂದೆಯೂ ನೀಡುತ್ತದೆ. ಸಂತೋಷ, ಉದ್ದೇಶ, ಅನೇಕ ನೆನಪುಗಳು ಮತ್ತು ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವ ಅವಕಾಶ. ಮೆರೂನ್ ಜೆರ್ಸಿ ಧರಿಸುವುದು, ರಾಷ್ಟ್ರಗೀತೆಗಾಗಿ ನಿಲ್ಲುವುದು ಮತ್ತು ನೀವು ಪ್ರತಿ ಬಾರಿ ಮೈದಾನಕ್ಕೆ ಕಾಲಿಡುವಾಗ ಎಲ್ಲವನ್ನೂ ನೀಡುವುದು... ಇವುಗಳನ್ನು ಪದಗಳಲ್ಲಿ ಹೇಳುವುದು ಕಷ್ಟ.

3 / 5
ಇವೆಲ್ಲದರ ನಡುವೆ ನಾಯಕನಾಗಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುವ ಗೌರವ ಕೂಡ ಸಿಕ್ಕಿದೆ. ಅಭಿಮಾನಿಗಳ ಅಚಲ ಪ್ರೀತಿಗೆ ಧನ್ಯವಾದಗಳು. ನೀವು ಕಷ್ಟದ ಕ್ಷಣಗಳಲ್ಲಿ ನನ್ನನ್ನು ಬೆಂಬಲಿಸಿದ್ದೀರಿ ಮತ್ತು ಉತ್ತಮ ಕ್ಷಣಗಳನ್ನು ಅಪ್ರತಿಮ ಉತ್ಸಾಹದಿಂದ ಆಚರಿಸಿದ್ದೀರಿ. ನನ್ನೊಂದಿಗೆ ಈ ಪ್ರಯಾಣವನ್ನು ನಡೆಸಿದ್ದಕ್ಕಾಗಿ ನನ್ನ ಕುಟುಂಬ, ಸ್ನೇಹಿತರು ಮತ್ತು ತಂಡದ ಸದಸ್ಯರಿಗೆ ಧನ್ಯವಾದಗಳು ಎಂದು ನಿಕೋಲಸ್ ಪೂರನ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

4 / 5
ನಿಕೋಲಸ್ ಪೂರನ್ ವೆಸ್ಟ್ ಇಂಡೀಸ್ ಪರ 61 ಏಕದಿನ ಪಂದ್ಯಗಳನ್ನಾಡಿದ್ದು, ಈ ವೇಳೆ 39.66 ಸರಾಸರಿಯಲ್ಲಿ 1983 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕಗಳು ಮತ್ತು 11 ಅರ್ಧಶತಕಗಳು ಸೇರಿವೆ. ಹಾಗೆಯೇ ವಿಂಡೀಸ್ ಪರ 106 ಟಿ20 ಪಂದ್ಯಗಳಲ್ಲಿ ಬ್ಯಾಟ್ ಬೀಸಿರುವ ಪೂರನ್ ಒಟ್ಟು 2275 ರನ್ ಗಳಿಸಿದ್ದಾರೆ. ಈ ವೇಳೆ 13 ಅರ್ಧಶತಕಗಳನ್ನು ಬಾರಿಸಿದ್ದಾರೆ.

5 / 5
ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಸ್ಫೋಟಕ ದಾಂಡಿಗನಾಗಿ ಗುರುತಿಸಿಕೊಂಡಿದ್ದ ಪೂರನ್​ಗೆ ವೆಸ್ಟ್ ಇಂಡೀಸ್ ಪರ ಟೆಸ್ಟ್ ಪಂದ್ಯವಾಡುವ ಅವಕಾಶ ದೊರೆತಿರಲಿಲ್ಲ. ಈ ಅವಕಾಶಕ್ಕೂ ಮುನ್ನವೇ ಅವರು ಅಂತರರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಇದಾಗ್ಯೂ ಅವರು ಲೀಗ್ ಕ್ರಿಕೆಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ.

Published On - 8:00 am, Tue, 10 June 25