ಪಾಕಿಸ್ತಾನದಲ್ಲಿ ಪಾಕ್ ಕ್ರಿಕೆಟಿಗರಿಗಿಂತ ವಿರಾಟ್ ಕೊಹ್ಲಿಯೇ ಜನಪ್ರಿಯ..!
Virat Kohli: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಶ್ವದ ಹಲವೆಡೆ ಪಂದ್ಯಗಳನ್ನಾಡಿದ್ದರೂ ಪಾಕಿಸ್ತಾನದಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಮ್ಯಾಚ್ ಆಡಿಲ್ಲ. ಅತ್ತ ಕಿಂಗ್ ಕೊಹ್ಲಿ ಪಾಕ್ನಲ್ಲಿ ಪಂದ್ಯವಾಡುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ನೀಡಿದ ಹೇಳಿಕೆಯು ಭಾರೀ ವೈರಲ್ ಆಗಿದೆ.
1 / 5
ಟೀಮ್ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳಿರುವುದು ಗೊತ್ತೇ ಇದೆ. ಆದರೆ ಕಿಂಗ್ ಕೊಹ್ಲಿಗಿಂತ ಜನಪ್ರಿಯ ಕ್ರಿಕೆಟಿಗ ಪಾಕಿಸ್ತಾನದಲ್ಲಿ ಇಲ್ವಂತೆ. ಇದನ್ನು ಹೇಳಿದ್ದು ಭಾರತದ ಯಾವುದೇ ಕ್ರಿಕೆಟಿಗನಲ್ಲ, ಬದಲಾಗಿ ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್ ಅಕ್ಮಲ್.
2 / 5
ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ಕ್ರಿಕೆಟಿಗ. ಕೊಹ್ಲಿಗಿಂತ ಜನಪ್ರಿಯ ಯಾವ ಕ್ರಿಕೆಟಿಗನೂ ನಮ್ಮಲ್ಲಿ ಇಲ್ಲ. ಅವರಿಗೆ ಪಾಕ್ನಲ್ಲಿ ಅಷ್ಟೊಂದು ಅಭಿಮಾನಿಗಳಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಒಮ್ಮೆಯಾದರೂ ಪಾಕಿಸ್ತಾನದಲ್ಲಿ ಆಡಬೇಕೆಂದು ನಾನು ಬಯಸುತ್ತೇನೆ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
3 / 5
ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಗೆ ನೀಡುವ ಗೌರವ ಮತ್ತು ಪ್ರೀತಿ ಬೇರೆ ಯಾವುದೇ ಆಟಗಾರನಿಗೆ ಸಿಗುವುದಿಲ್ಲ. ಹೀಗಾಗಿ ಭಾರತೀಯ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ನಿವೃತ್ತಿಯಾಗುವ ಮೊದಲು ಒಮ್ಮೆಯಾದರೂ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಬರಬೇಕೆಂದು ಕಮ್ರಾನ್ ಅಕ್ಮಲ್ ವಿನಂತಿಸಿದ್ದಾರೆ.
4 / 5
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಎಲ್ಲಾ ದೇಶಗಳಲ್ಲೂ ಆಡಿದ್ದಾರೆ. ಇವರಿಬ್ಬರು ಎಲ್ಲೇ ಹೋದರೂ ಅಭಿಮಾನಿಳು ಸಂಭ್ರಮಿಸುತ್ತಿದ್ದಾರೆ. ಆದರೆ ಪಾಕಿಸ್ತಾನದಲ್ಲಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳು ಎಲ್ಲರನ್ನು ಹಿಂದಿಕ್ಕುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೊಂದು ಮಂದಿ ವಿರಾಟ್ ಕೊಹ್ಲಿಯನ್ನು ರೋಲ್ ಮಾಡೆಲ್ ಎಂದು ಪರಿಗಣಿಸಿದ್ದಾರೆ. ಹಾಗೆಯೇ ರೋಹಿತ್ ಶರ್ಮಾ ಅವರನ್ನು ಇಷ್ಟಪಡುತ್ತಿದ್ದಾರೆ. ಹೀಗಾಗಿ ಇವರಿಬ್ಬರು ಪಾಕ್ ನೆಲದಲ್ಲಿ ಆಡಿದರೆ, ಪಾಕಿಸ್ತಾನಿ ಅಭಿಮಾನಿಗಳ ಸಂತಸಕ್ಕೆ ಮಿತಿಯೇ ಇರುವುದಿಲ್ಲ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ.
5 / 5
ಇನ್ನು ಕಮ್ರಾನ್ ಅಕ್ಮಲ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಕಿಸ್ತಾನದಲ್ಲಿ ಆಡಬೇಕೆಂದು ಹೇಳಲು ಮುಖ್ಯ ಕಾರಣ ಮುಂಬರುವ ಚಾಂಪಿಯನ್ಸ್ ಟ್ರೋಫಿ. 2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. ಆದರೆ ಪಾಕ್ನಲ್ಲಿ ಆಡಲು ಟೀಮ್ ಇಂಡಿಯಾ ಹಿಂದೇಟು ಹಾಕುವ ಸಾಧ್ಯತೆಯಿದೆ. ಇದೇ ಕಾರಣದಿಂದಾಗಿ ಇದೀಗ ಕಮ್ರಾನ್ ಅಕ್ಮಲ್, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಮ್ಮೆಯಾದರೂ ಅಭಿಮಾನಿಗಳಿಗೋಸ್ಕರ ಪಾಕಿಸ್ತಾನದಲ್ಲಿ ಪಂದ್ಯವಾಡಬೇಕೆಂದು ವಿನಂತಿಸಿದ್ದಾರೆ.