Will Pucovski: 26ನೇ ವಯಸ್ಸಿಗೆ ಕ್ರಿಕೆಟ್ ಬದುಕಿಗೆ ನೋವಿನ ವಿದಾಯ ಹೇಳಿದ ಆಸೀಸ್ ಆಟಗಾರ
Will Pucovski: ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ವಿಲ್ ಪುಕೊವ್ಸ್ಕಿ ಕೇವಲ 26ನೇ ವಯಸ್ಸಿಗೆ ತಮ್ಮ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಕನ್ಕ್ಯುಶನ್ (ಚೆಂಡಿನಿಂದ ತಲೆಗೆ ಹೊಡೆದಾಗ ಉಂಟಾಗುವ ಗಾಯ) ನಿಂದ ಬಳಲುತ್ತಿದ್ದ ಪುಕೊವ್ಸ್ಕಿ ಅವರು ವೈದ್ಯರ ಸಲಹೆ ಮೇರೆಗೆ ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.