- Kannada News Photo gallery Cricket photos PAK vs BAN 2nd Test Day 1 called off due to rain in Rawalpindi
PAK vs BAN: ಪಾಕ್ ತಂಡಕ್ಕೆ ಶುರುವಾಯ್ತು ಟೆಸ್ಟ್ ಸರಣಿ ಸೋಲಿನ ಭಯ
PAK vs BAN: ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ನಡೆಯಲು ಸಾಧ್ಯವಾಗಲಿಲ್ಲ. ಪಂದ್ಯ ನಡೆಸುವ ಸಲುವಾಗಿ ಊಟದ ವಿರಾಮದವರೆಗೂ ಕಾಯ್ದರೂ ಮಳೆ ನಿಲ್ಲದ ಕಾರಣಕ್ಕೆ ಪಂದ್ಯದ ಅಧಿಕಾರಿಗಳು ಮೊದಲ ದಿನದ ಆಟವನ್ನು ರದ್ದುಗೊಳಿಸಿದರು.
Updated on: Aug 30, 2024 | 7:17 PM

ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ ಮಳೆಯಿಂದಾಗಿ ರದ್ದಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ನಡೆಯಲು ಸಾಧ್ಯವಾಗಲಿಲ್ಲ. ಪಂದ್ಯ ನಡೆಸುವ ಸಲುವಾಗಿ ಊಟದ ವಿರಾಮದವರೆಗೂ ಕಾಯ್ದರೂ ಮಳೆ ನಿಲ್ಲದ ಕಾರಣಕ್ಕೆ ಪಂದ್ಯದ ಅಧಿಕಾರಿಗಳು ಮೊದಲ ದಿನದ ಆಟವನ್ನು ರದ್ದುಗೊಳಿಸಿದರು.

ರಾವಲ್ಪಿಂಡಿಯಲ್ಲಿ ಮೊದಲ ದಿನದ ಆಟ ರದ್ದಾಗಿರುವುದು ಆತಿಥೇಯ ಪಾಕಿಸ್ತಾನಕ್ಕೆ ಅತ್ಯಂತ ಕೆಟ್ಟ ಸುದ್ದಿಯಾಗಿದೆ. ಏಕೆಂದರೆ ಈ ತಂಡವು ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶಕ್ಕಿಂತ 0-1 ಹಿನ್ನಡೆಯಲ್ಲಿದೆ. ಇದೀಗ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಪಾಕ್ ತಂಡಕ್ಕೆ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ. ರಾವಲ್ಪಿಂಡಿಯಲ್ಲಿ ಇದೇ ಹವಾ ಮುಂದುವರಿದರೆ ಪಾಕಿಸ್ತಾನ ಟೆಸ್ಟ್ ಸರಣಿ ಸೋಲಬೇಕಾಗುತ್ತದೆ.

ಇನ್ನು ರಾವಲ್ಪಿಂಡಿಯ ಹವಾಮಾನದ ಬಗ್ಗೆ ಹೇಳುವುದಾದರೆ.. ಮಳೆಯಿಂದಾಗಿ ಶುಕ್ರವಾರದ ಮೊದಲ ದಿನದ ರದ್ದಾಗಿದೆ. ಇದೀಗ ಮುಂದಿನ ಎರಡು ದಿನಗಳಲ್ಲೂ ಮಳೆ ಈ ಪಂದ್ಯಕ್ಕೆ ದೊಡ್ಡ ಅಡಚಣೆಯನ್ನು ಉಂಟುಮಾಡುವ ಸಾಧ್ಯತೆಗಳಿವೆ. ವರದಿಗಳ ಪ್ರಕಾರ ಸೋಮವಾರ ಮತ್ತು ಮಂಗಳವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಶನಿವಾರ ಮತ್ತು ಭಾನುವಾರ ಮಾತ್ರ ಮಳೆಯಿಲ್ಲ ಎಂದು ವರದಿ ಹೇಳಿದೆ. ಅಂದರೆ ಕೊನೆಯ ಎರಡು ದಿನಗಳಲ್ಲಿ ಪಂದ್ಯ ನಡೆದರೆ, ನಿಖರ ಫಲಿತಾಂಶ ಹೊರಬೀಳುವುದು ಕಷ್ಟ ಸಾಧ್ಯ. ಕೊನೆಯ ಎರಡೂ ದಿನಗಳಲ್ಲಿ ಮಳೆ ಇಲ್ಲದಿದ್ದರೂ, ಪಂದ್ಯಕ್ಕೆ ಕ್ರೀಡಾಂಗಣ ಸಿದ್ದವಾಗುವುದರ ಮೇಲೆ ಪಾಕ್ ತಂಡದ ಭವಿಷ್ಯ ನಿಂತಿದೆ. ಒಂದು ವೇಳೆ ಈ ಪಂದ್ಯ ನಡೆಯದಿದ್ದರೆ ಬಾಂಗ್ಲಾದೇಶ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.

ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ನಾಚಿಕೆಗೇಡಿನ ಸೋಲು ಕಂಡಿತ್ತು. ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್ ಕಲೆಹಾಕಿದರೆ, ಇದಕ್ಕುತ್ತರವಾಗಿ ಬಾಂಗ್ಲಾದೇಶ 565 ರನ್ ಗಳಿಸಿತ್ತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ ಕೇವಲ 146 ರನ್ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ 30 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಮುಟ್ಟಿತು.

ಇದೀಗ ರಾವಲ್ಪಿಂಡಿಯಲ್ಲಿ ನಡೆಯಬೇಕಾದ ಎರಡನೇ ಟೆಸ್ಟ್‌ಗೆ ಮಳೆ ಅಡ್ಡಿಪಡಿಸಿ ಪಾಕಿಸ್ತಾನ ಈ ಪಂದ್ಯವನ್ನು ಗೆಲ್ಲದಿದ್ದರೆ, ಬಾಂಗ್ಲಾದೇಶ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡ ದಾಖಲೆ ಬರೆದರೆ, ಇತ್ತ ಈ ಸೋಲಿನೊಂದಿಗೆ ಪಾಕ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಗುಳಿಯಲಿದೆ.



















