World Record: ಬರೋಬ್ಬರಿ 15 ಸಿಕ್ಸ್​: ಕ್ರಿಕೆಟ್ ಇತಿಹಾಸದ ಅತೀ ವೇಗದ ಶತಕ

Edited By:

Updated on: Dec 05, 2021 | 3:30 PM

fastest century: ಕ್ರಿಕೆಟ್‌ನಲ್ಲಿ ವೇಗದ ಶತಕದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು ಟಿ20 ಕ್ರಿಕೆಟ್​ನ ಅತೀ ವೇಗದ ಶತಕ. ಹಾಗೆಯೇ ವೃತ್ತಿಪರ ಕ್ರಿಕೆಟ್​ನ ಅತೀ ವೇಗದ ಶತಕವಾಗಿ ಉಳಿದಿದೆ.

1 / 6
 ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು? ಈ ಪ್ರಶ್ನೆಗೆ ಸಾಮಾನ್ಯವಾಗಿ ಕೇಳಿ ಬರುವ ಉತ್ತರ ಕ್ರಿಸ್ ಗೇಲ್ ಅಥವಾ ಎಬಿ ಡಿವಿಲಿಯರ್ಸ್​. ಆದರೆ, ಈ ಎರಡೂ ಉತ್ತರಗಳು ತಪ್ಪು. ಏಕೆಂದರೆ ಗೇಲ್ ಹಾಗೂ ಎಬಿಡಿಗಿಂತ ವೇಗವಾಗಿ ಶತಕ ಗಳಿಸಿದ ಬ್ಯಾಟರ್​ ಒಬ್ಬರು ಇದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು? ಈ ಪ್ರಶ್ನೆಗೆ ಸಾಮಾನ್ಯವಾಗಿ ಕೇಳಿ ಬರುವ ಉತ್ತರ ಕ್ರಿಸ್ ಗೇಲ್ ಅಥವಾ ಎಬಿ ಡಿವಿಲಿಯರ್ಸ್​. ಆದರೆ, ಈ ಎರಡೂ ಉತ್ತರಗಳು ತಪ್ಪು. ಏಕೆಂದರೆ ಗೇಲ್ ಹಾಗೂ ಎಬಿಡಿಗಿಂತ ವೇಗವಾಗಿ ಶತಕ ಗಳಿಸಿದ ಬ್ಯಾಟರ್​ ಒಬ್ಬರು ಇದ್ದಾರೆ.

2 / 6

ಹೌದು, ಟ್ರಿನಿಡಾಡ್ ಮತ್ತು ಟೊಬಾಗೋದ ಕ್ರಿಕೆಟಿಗ ಇರಾಕ್ ಥಾಮಸ್ ಮಾರ್ ಕ್ರಿಕೆಟ್ ಇತಿಹಾಸ ಅತೀ ವೇಗದ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಥಾಮಸ್ 2016ರಲ್ಲಿ ಈ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ಅತೀ ವೇಗದ ಶತಕದ ದಾಖಲೆ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿತ್ತು.

3 / 6

ಡಾನ್ ಬ್ರಾಡ್ಮನ್ 1931 ರಲ್ಲಿ ವಿಲೇಜ್ ಕ್ರಿಕೆಟ್ ಟೂರ್ನಿಯಲ್ಲಿ ಕೇವಲ 22 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಬ್ರಾಡ್‌ಮನ್ ಅಂದು ಕೇವಲ 3 ಓವರ್‌ಗಳಲ್ಲಿ 99 ರನ್ ಗಳಿಸಿದ್ದರು. ಮೊದಲ ಓವರ್‌ನಲ್ಲಿ 33 ರನ್, ಎರಡನೇ ಓವರ್‌ನಲ್ಲಿ 40 ರನ್ ಮತ್ತು ಮೂರನೇ ಓವರ್‌ನಲ್ಲಿ 27 ರನ್ ಬಾರಿಸಿದ್ದರು. ಅಂತಿಮವಾಗಿ 10 ಸಿಕ್ಸರ್ ಮತ್ತು 9 ಬೌಂಡರಿಗಳೊಂದಿಗೆ ಡಾನ್ ಬ್ರಾಡ್ಮನ್ 22 ಎಸೆತಗಳಲ್ಲಿ ವೇಗದ ಶತಕ ಪೂರೈಸಿದ್ದರು.

4 / 6

ಈ ವಿಶ್ವ ದಾಖಲೆ ನಿರ್ಮಾಣವಾಗಿ ಬರೋಬ್ಬರಿ 85 ವರ್ಷಗಳ ಬಳಿಕ ಇರಾಕ್ ಥಾಮಸ್ ಹೊಸ ದಾಖಲೆ ಬರೆದಿದ್ದರು. 2016 ರಲ್ಲಿ ಟೊಬಾಗೊ ಕ್ರಿಕೆಟ್ ಅಸೋಸಿಯೇಷನ್ ​​ಆಯೋಜಿಸಿದ್ದ ಟಿ20 ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಥಾಮಸ್ ಶತಕ ಬಾರಿಸಿ ಬ್ರಾಡ್​ಮನ್ ಅವರ ಅತೀ ವೇಗದ ಶತಕದ ದಾಖಲೆಯನ್ನು ಮುರಿದಿದ್ದರು. ಈ ಇನ್ನಿಂಗ್ಸ್‌ನಲ್ಲಿ, ಥಾಮಸ್ ಬರೋಬ್ಬರಿ 15 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅಷ್ಟೇ ಅಲ್ಲದೆ, 5 ಬೌಂಡರಿಗಳನ್ನೂ ಸಹ ಬಾರಿಸಿ ಅಬ್ಬರಿಸಿದ್ದರು. ಅದರಂತೆ 21 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ಅತೀ ವೇಗದ ಶತಕದ ಸರದಾರ ಎನಿಸಿಕೊಂಡಿದ್ದಾರೆ.

5 / 6

ಇನ್ನು ವೃತ್ತಿಪರ ಕ್ರಿಕೆಟ್‌ನಲ್ಲಿ ವೇಗದ ಶತಕದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಐಪಿಎಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಗೇಲ್ ಕೇವಲ 30 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಇದು ಟಿ20 ಕ್ರಿಕೆಟ್​ನ ಅತೀ ವೇಗದ ಶತಕ. ಹಾಗೆಯೇ ವೃತ್ತಿಪರ ಕ್ರಿಕೆಟ್​ನ ಅತೀ ವೇಗದ ಶತಕವಾಗಿ ಉಳಿದಿದೆ.

6 / 6

ಹಾಗೆಯೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ದಾಖಲೆ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟರ್​ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿದೆ. ಎಬಿಡಿ ಏಕದಿನ ಕ್ರಿಕೆಟ್​ನಲ್ಲಿ 31 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್‌ನ ಅತೀ ವೇಗದ ಶತಕದ ವಿಶ್ವ ದಾಖಲೆಯನ್ನು ಹೊಂದಿದೆ.

Loading...
Unable to load recommendations.
Follow Us