ಈ ಗುರಿಯೊಂದಿಗೆ ಭಾರತ ತಂಡ ತನ್ನ ಹಳೆಯ ದಾಖಲೆಯನ್ನು ಸುಧಾರಿಸಿಕೊಂಡಿದೆ. ಇದು ತವರು ನೆಲದಲ್ಲಿ ಯಾವುದೇ ತಂಡಕ್ಕೆ ಟೀಮ್ ಇಂಡಿಯಾ ನೀಡಿದ ದೊಡ್ಡ ಗುರಿಯಾಗಿದೆ. ಟೀಂ ಇಂಡಿಯಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮಯಾಂಕ್ ಅಗರ್ವಾಲ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 62 ರನ್ ಗಳಿಸಿದರೆ, ಚೇತೇಶ್ವರ ಪೂಜಾರ, ಶುಭಮನ್ ಗಿಲ್ ಮತ್ತು ಅಕ್ಷರ್ ಪಟೇಲ್ ಕೂಡ ಗಮನಾರ್ಹ ಕೊಡುಗೆ ನೀಡಿದರು.