ಈ ವಿಶ್ವ ದಾಖಲೆ ನಿರ್ಮಾಣವಾಗಿ ಬರೋಬ್ಬರಿ 85 ವರ್ಷಗಳ ಬಳಿಕ ಇರಾಕ್ ಥಾಮಸ್ ಹೊಸ ದಾಖಲೆ ಬರೆದಿದ್ದರು. 2016 ರಲ್ಲಿ ಟೊಬಾಗೊ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಟಿ20 ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ ಥಾಮಸ್ ಶತಕ ಬಾರಿಸಿ ಬ್ರಾಡ್ಮನ್ ಅವರ ಅತೀ ವೇಗದ ಶತಕದ ದಾಖಲೆಯನ್ನು ಮುರಿದಿದ್ದರು. ಈ ಇನ್ನಿಂಗ್ಸ್‌ನಲ್ಲಿ, ಥಾಮಸ್ ಬರೋಬ್ಬರಿ 15 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಅಷ್ಟೇ ಅಲ್ಲದೆ, 5 ಬೌಂಡರಿಗಳನ್ನೂ ಸಹ ಬಾರಿಸಿ ಅಬ್ಬರಿಸಿದ್ದರು. ಅದರಂತೆ 21 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ಅತೀ ವೇಗದ ಶತಕದ ಸರದಾರ ಎನಿಸಿಕೊಂಡಿದ್ದಾರೆ.