- Kannada News Photo gallery Cricket photos Aakash Chopra picks Yuzvendra Chahal's replacement at RCB for IPL 2022
Aakash Chopra: ಚಹಲ್ ಬದಲಿಗೆ RCB ಇವರನ್ನು ಟಾರ್ಗೆಟ್ ಮಾಡಲಿದೆ..!
IPL 2022: ಆರ್ಸಿಬಿ ಪರ 112 ಪಂದ್ಯಗಳನ್ನಾಡಿರುವ ಯುಜುವೇಂದ್ರ ಚಹಲ್ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದರಲ್ಲೂ ಕಳೆದ ಸೀಸನ್ನಲ್ಲಿ ಯುಎಇನಲ್ಲಿ ನಡೆದ ದ್ವಿತಿಯಾರ್ಧದ ಎಂಟು ಪಂದ್ಯಗಳಲ್ಲಿ ಚಹಲ್ 14 ವಿಕೆಟ್‌ಗಳನ್ನು ಪಡೆದಿದ್ದರು.
Updated on: Dec 04, 2021 | 8:48 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಆರ್ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿದೆ. ಆದರೆ ಅತ್ತ ರಿಲೀಸ್ ಆದ ಆಟಗಾರರ ಪಟ್ಟಿಯಲ್ಲಿ ಆರ್ಸಿಬಿ ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಇರುವುದು ವಿಶೇಷ.

ಚಹಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಕಾರಣ ಅವರು ಮತ್ತೆ ಆರ್ಸಿಬಿ ತಂಡಕ್ಕೆ ಸಿಗುವುದು ಅನುಮಾನ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ. ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ಚಹಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಆರ್ಸಿಬಿ ಬದಲಿ ಆಟಗಾರರನ್ನು ಟಾರ್ಗೆಟ್ ಮಾಡಲಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಆಕಾಶ್ ಚೋಪ್ರಾ ಪ್ರಕಾರ ಆರ್ಸಿಬಿ ಚಹಲ್ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡ ಬಿಡುಗಡೆ ಮಾಡಿರುವ ರಾಹುಲ್ ಚಹರ್ ಅವರನ್ನು ಟಾರ್ಗೆಟ್ ಮಾಡಲಿದೆ. ಏಕೆಂದರೆ ಆರ್ಸಿಬಿ ಹೋಮ್ ಗ್ರೌಂಡ್ ಚಿನ್ನಸ್ವಾಮಿ ಸ್ಟೇಡಿಯಂ ಲೆಗ್ ಸ್ಪಿನ್ನರ್‌ಗಳಿಗೆ ಅನುಕೂಲವಾಗಿದೆ. ಹೀಗಾಗಿ ಆರ್ಸಿಬಿ ಕೂಡ ಲೆಗ್ ಸ್ಪಿನ್ನರ್ ರಾಹುಲ್ ಅವರ ಆಯ್ಕೆಗೆ ಮುಂದಾಗಲಿದೆ ಎಂದಿದ್ದಾರೆ.

ಒಂದು ವೇಳೆ ರಾಹುಲ್ ಚಹರ್ ಅವರನ್ನು ಕೂಡ ಖರೀದಿಸಲು ಸಾಧ್ಯವಾಗದಿದ್ದರೆ ಆರ್ಸಿಬಿ ಪಂಜಾಬ್ ಕಿಂಗ್ಸ್ ತಂಡ ರಿಲೀಸ್ ಮಾಡಿರುವ ರವಿ ಬಿಷ್ಣೋಯ್ ಅವರ ಆಯ್ಕೆ ಮಾಡಲಿದೆ. ಏಕೆಂದರೆ ರವಿ ಬಿಷ್ಣೋಯ್ ಕೂಡ ಉತ್ತಮ ಲೆಗ್ ಸ್ಪಿನ್ನರ್ ಆಗಿದ್ದು, ಹೀಗಾಗಿ ಆರ್ಸಿಬಿ ರಾಹುಲ್ ಚಹರ್ ಅಥವಾ ಬಿಷ್ಣೋಯ್ ಅವರನ್ನು ಟಾರ್ಗೆಟ್ ಮಾಡಲಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಆರ್ಸಿಬಿ ಪರ 112 ಪಂದ್ಯಗಳನ್ನಾಡಿರುವ ಯುಜುವೇಂದ್ರ ಚಹಲ್ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದರಲ್ಲೂ ಕಳೆದ ಸೀಸನ್ನಲ್ಲಿ ಯುಎಇನಲ್ಲಿ ನಡೆದ ದ್ವಿತಿಯಾರ್ಧದ ಎಂಟು ಪಂದ್ಯಗಳಲ್ಲಿ ಚಹಲ್ 14 ವಿಕೆಟ್‌ಗಳನ್ನು ಪಡೆದಿದ್ದರು. ಇದಾಗ್ಯೂ ಈ ಬಾರಿ ಆರ್ಸಿಬಿಗೆ ಚಹಲ್ ಅವರನ್ನು ರಿಟೈನ್ ಮಾಡಿಕೊಂಡಿಲ್ಲ ಎಂಬುದೇ ಅಚ್ಚರಿ.
