Aakash Chopra: ಚಹಲ್ ಬದಲಿಗೆ RCB ಇವರನ್ನು ಟಾರ್ಗೆಟ್ ಮಾಡಲಿದೆ..!

IPL 2022: ಆರ್​ಸಿಬಿ ಪರ 112 ಪಂದ್ಯಗಳನ್ನಾಡಿರುವ ಯುಜುವೇಂದ್ರ ಚಹಲ್ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದರಲ್ಲೂ ಕಳೆದ ಸೀಸನ್​ನಲ್ಲಿ ಯುಎಇನಲ್ಲಿ ನಡೆದ ದ್ವಿತಿಯಾರ್ಧದ ಎಂಟು ಪಂದ್ಯಗಳಲ್ಲಿ ಚಹಲ್ 14 ವಿಕೆಟ್‌ಗಳನ್ನು ಪಡೆದಿದ್ದರು.

Dec 04, 2021 | 8:48 PM
TV9kannada Web Team

| Edited By: Zahir PY

Dec 04, 2021 | 8:48 PM

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಆರ್​ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿದೆ. ಆದರೆ ಅತ್ತ ರಿಲೀಸ್ ಆದ ಆಟಗಾರರ ಪಟ್ಟಿಯಲ್ಲಿ ಆರ್​ಸಿಬಿ ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಇರುವುದು ವಿಶೇಷ.

1 / 5
ಚಹಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವ ಕಾರಣ ಅವರು ಮತ್ತೆ ಆರ್​ಸಿಬಿ ತಂಡಕ್ಕೆ ಸಿಗುವುದು ಅನುಮಾನ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ. ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್ ಚಹಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಹೀಗಾಗಿ ಆರ್​ಸಿಬಿ ಬದಲಿ ಆಟಗಾರರನ್ನು ಟಾರ್ಗೆಟ್ ಮಾಡಲಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

2 / 5
 ಆಕಾಶ್ ಚೋಪ್ರಾ ಪ್ರಕಾರ ಆರ್​ಸಿಬಿ ಚಹಲ್ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡ ಬಿಡುಗಡೆ ಮಾಡಿರುವ ರಾಹುಲ್ ಚಹರ್ ಅವರನ್ನು ಟಾರ್ಗೆಟ್ ಮಾಡಲಿದೆ. ಏಕೆಂದರೆ ಆರ್​ಸಿಬಿ ಹೋಮ್​ ಗ್ರೌಂಡ್ ಚಿನ್ನಸ್ವಾಮಿ ಸ್ಟೇಡಿಯಂ ಲೆಗ್ ಸ್ಪಿನ್ನರ್‌ಗಳಿಗೆ ಅನುಕೂಲವಾಗಿದೆ. ಹೀಗಾಗಿ ಆರ್​ಸಿಬಿ ಕೂಡ ಲೆಗ್​ ಸ್ಪಿನ್ನರ್ ರಾಹುಲ್ ಅವರ ಆಯ್ಕೆಗೆ ಮುಂದಾಗಲಿದೆ ಎಂದಿದ್ದಾರೆ.

3 / 5
ಒಂದು ವೇಳೆ ರಾಹುಲ್ ಚಹರ್ ಅವರನ್ನು ಕೂಡ ಖರೀದಿಸಲು ಸಾಧ್ಯವಾಗದಿದ್ದರೆ ಆರ್​ಸಿಬಿ ಪಂಜಾಬ್ ಕಿಂಗ್ಸ್​ ತಂಡ ರಿಲೀಸ್ ಮಾಡಿರುವ ರವಿ ಬಿಷ್ಣೋಯ್ ಅವರ ಆಯ್ಕೆ ಮಾಡಲಿದೆ. ಏಕೆಂದರೆ ರವಿ ಬಿಷ್ಣೋಯ್ ಕೂಡ ಉತ್ತಮ ಲೆಗ್ ಸ್ಪಿನ್ನರ್ ಆಗಿದ್ದು, ಹೀಗಾಗಿ ಆರ್​ಸಿಬಿ ರಾಹುಲ್ ಚಹರ್ ಅಥವಾ ಬಿಷ್ಣೋಯ್ ಅವರನ್ನು ಟಾರ್ಗೆಟ್ ಮಾಡಲಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

4 / 5
ಆರ್​ಸಿಬಿ ಪರ 112 ಪಂದ್ಯಗಳನ್ನಾಡಿರುವ ಯುಜುವೇಂದ್ರ ಚಹಲ್ 139 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದರಲ್ಲೂ ಕಳೆದ ಸೀಸನ್​ನಲ್ಲಿ ಯುಎಇನಲ್ಲಿ ನಡೆದ ದ್ವಿತಿಯಾರ್ಧದ ಎಂಟು ಪಂದ್ಯಗಳಲ್ಲಿ ಚಹಲ್ 14 ವಿಕೆಟ್‌ಗಳನ್ನು ಪಡೆದಿದ್ದರು. ಇದಾಗ್ಯೂ ಈ ಬಾರಿ ಆರ್​ಸಿಬಿಗೆ ಚಹಲ್ ಅವರನ್ನು ರಿಟೈನ್ ಮಾಡಿಕೊಂಡಿಲ್ಲ ಎಂಬುದೇ ಅಚ್ಚರಿ.

5 / 5

Follow us on

Most Read Stories

Click on your DTH Provider to Add TV9 Kannada