ಗೋಲ್ಡನ್ ಬ್ಯಾಟ್ ರೇಸ್ನಲ್ಲಿ ಕೊಹ್ಲಿಯೇ ಕಿಂಗ್! ರೋಹಿತ್ಗೂ ಇದೆ ಅವಕಾಶ
ICC World Cup 2023 Most Runs: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಲಾ ಅರ್ಧಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ 500 ಕ್ಕೂ ಅಧಿಕ ರನ್ ಬಾರಿಸಿದ ಸಾಧನೆ ಮಾಡಿದ್ದು, ಇದರೊಂದಿಗೆ ಗೋಲ್ಡನ್ ಬ್ಯಾಟ್ ರೇಸ್ನಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.
1 / 7
ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಲಾ ಅರ್ಧಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ 500 ಕ್ಕೂ ಅಧಿಕ ರನ್ ಬಾರಿಸಿದ ಸಾಧನೆ ಮಾಡಿದ್ದು, ಇದರೊಂದಿಗೆ ಗೋಲ್ಡನ್ ಬ್ಯಾಟ್ ರೇಸ್ನಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ.
2 / 7
ವಿರಾಟ್ ಕೊಹ್ಲಿ (594): ಪ್ರಸ್ತುತ ವಿಶ್ವಕಪ್‌ನಲ್ಲಿ 9 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರರ್ ಆಗಿದ್ದಾರೆ. ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ 56 ಎಸೆತಗಳಲ್ಲಿ 51 ರನ್ ಸಿಡಿಸಿದ ವಿರಾಟ್ ಒಟ್ಟು ಈ ವಿಶ್ವಕಪ್‌ನಲ್ಲಿ 594 ರನ್ ಕಲೆಹಾಕಿದ್ದು, ಗೋಲ್ಡನ್ ಬ್ಯಾಟ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
3 / 7
ಕ್ವಿಂಟನ್ ಡಿ ಕಾಕ್ (591): ಈ ವಿಶ್ವಕಪ್‌ನಲ್ಲಿ 4 ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ. ಡಿ ಕಾಕ್ 65.66. ಸರಾಸರಿಯಲ್ಲಿ ಇದುವರೆಗೆ 591 ರನ್ ಸಿಡಿಸಿದ್ದಾರೆ.
4 / 7
ರಚಿನ್ ರವೀಂದ್ರ (565): ನ್ಯೂಜಿಲೆಂಡ್ ತಂಡದ ಯುವ ಆಟಗಾರ ರಚಿನ್ ರವೀಂದ್ರ ಮೂರು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ ಈ ವಿಶ್ವಕಪ್‌ನಲ್ಲಿ 70.62 ರ ಸರಾಸರಿಯಲ್ಲಿ 565 ರನ್ ಕಲೆಹಾಕಿದ್ದಾರೆ.
5 / 7
ರೋಹಿತ್ ಶರ್ಮಾ (503): ಭಾರತ ತಂಡದ ನಾಯಕ 503 ರನ್ ಗಳಿಸಿ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ ರೋಹಿತ್, ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ.
6 / 7
ಡೇವಿಡ್ ವಾರ್ನರ್ (499): ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ 499 ರನ್‌ಗಳೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ. ಅವರು 55.44 ಸರಾಸರಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧ ಶತಕಗಳನ್ನು ಬಾರಿಸಿದ್ದಾರೆ.
7 / 7
ಮೇಲಿನ ಈ ಐವರು ಆಟಗಾರರ ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆದಿರುವುದರಿದ ಸೆಮಿಸ್ ಸುತ್ತಿನಲ್ಲಿ ಯಾವ ಆಟಗಾರ ಅಬ್ಬರಿಸುತ್ತಾನೋ ಆತನಿಗೆ ಈ ವಿಶ್ವಕಪ್ನ ಗೋಲ್ಡನ್ ಬ್ಯಾಟ್ ದಕ್ಕಲಿದೆ.