ODI World Cup 2023: ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು ಖಚಿತ: ಸಯೀದ್ ಅಜ್ಮಲ್

Edited By:

Updated on: Jul 02, 2023 | 9:30 PM

ODI World Cup 2023: ಏಕದಿನ ವಿಶ್ವಕಪ್​ ಆರಂಭಕ್ಕೂ ಮುನ್ನವೇ ಪಾಕಿಸ್ತಾನ್ ತಂಡದ ಮಾಜಿ ಸ್ಪಿನ್ನರ್ ನೀಡಿರುವ ಹೇಳಿಕೆಯು ಇದೀಗ ಎಲ್ಲರ ಗಮನ ಸೆಳೆದಿದೆ.

1 / 7
ODI World Cup 2023: ಏಕದಿನ ವಿಶ್ವಕಪ್​ಗಾಗಿ ಕೌಂಟ್​ ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಝಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿದೆ. ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ.

ODI World Cup 2023: ಏಕದಿನ ವಿಶ್ವಕಪ್​ಗಾಗಿ ಕೌಂಟ್​ ಡೌನ್ ಶುರುವಾಗಿದೆ. ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್-ನ್ಯೂಝಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿದೆ. ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಭಿಯಾನ ಆರಂಭಿಸಲಿದೆ.

2 / 7

ಇನ್ನು ಅಕ್ಟೋಬರ್ 15 ರಂದು ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯದಲ್ಲಿ ಭಾರತ ತಂಡವನ್ನು ಬಗ್ಗು ಬಡಿದು ಪಾಕಿಸ್ತಾನ್ ಜಯಭೇರಿ ಬಾರಿಸಲಿದೆ ಎಂದು ಪಾಕ್ ತಂಡ ಮಾಜಿ ಆಟಗಾರ ಸಯೀದ್ ಅಜ್ಮಲ್ ಭವಿಷ್ಯ ನುಡಿದಿದ್ದಾರೆ.

3 / 7

ಈ ಬಗ್ಗೆ ಮಾತನಾಡಿರುವ ಸಯೀದ್ ಅಜ್ಮಲ್, ಈ ಬಾರಿ ಭಾರತದ ವಿರುದ್ಧ ಪಾಕಿಸ್ತಾನ್ ಗೆಲ್ಲುವುದು ಖಚಿತ. ಏಕೆಂದರೆ ಪಾಕ್ ತಂಡದ ಬೌಲಿಂಗ್ ಲೈನಪ್ ಬಲಿಷ್ಠವಾಗಿದ್ದು, ಇದರ ಮುಂದೆ ಟೀಮ್ ಇಂಡಿಯಾ ಮಂಡಿಯೂರಲಿದೆ ಎಂದು ಅಜ್ಮಲ್ ಹೇಳಿದ್ದಾರೆ.

4 / 7

ಇಲ್ಲಿ ಭಾರತ ತಂಡಕ್ಕೆ ತವರಿನಲ್ಲಿ ಆಡುತ್ತಿರುವುದು ಅನುಕೂಲಕರ. ಅದರಲ್ಲೂ ಟೀಮ್ ಇಂಡಿಯಾ ಅಪಾಯಕಾರಿ ಬ್ಯಾಟರ್‌ಗಳನ್ನು ಹೊಂದಿದ್ದಾರೆ. ಆದರೆ, ಅವರ ಬೌಲಿಂಗ್ ದುರ್ಬಲವಾಗಿದೆ ಎಂಬುದೇ ಸತ್ಯ.

5 / 7

ಅದೇ ಪಾಕಿಸ್ತಾನವು ವಿಕೆಟ್ ಕಬಳಿಸುವ ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಪಾಕಿಸ್ತಾನವು ಶೇ. 60 ರಷ್ಟು ಗೆಲುವು ಸಾಧಿಸಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಸಯೀದ್ ಅಜ್ಮಲ್ ಅಭಿಪ್ರಾಯಪಟ್ಟಿದ್ದಾರೆ.

6 / 7

ಒಟ್ಟಿನಲ್ಲಿ ಏಕದಿನ ವಿಶ್ವಕಪ್​ ಆರಂಭಕ್ಕೂ ಮುನ್ನವೇ ಪಾಕಿಸ್ತಾನ್ ತಂಡದ ಮಾಜಿ ಸ್ಪಿನ್ನರ್ ನೀಡಿರುವ ಹೇಳಿಕೆಯು ಇದೀಗ ಎಲ್ಲರ ಗಮನ ಸೆಳೆದಿದೆ.

7 / 7

ಇಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಬ್ಯಾಟರ್​ಗಳನ್ನು ಹೊಂದಿದ್ದರೆ, ಪಾಕ್ ತಂಡವು ಉತ್ತಮ ಬೌಲರ್​ಗಳನ್ನು ಹೊಂದಿದೆ. ಹೀಗಾಗಿ ಹೈವೋಲ್ಟೇಜ್ ಕದನದಲ್ಲಿ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

Loading...
Unable to load recommendations.
Follow Us