PAK vs BAN: ತವರಿನಲ್ಲಿ 3 ವರ್ಷಗಳ ಬರ ನೀಗಿಸಿದ ಪಾಕ್ ವೇಗಿ ಖುರ್ರಂ ಶಹಜಾದ್

Updated on: Sep 01, 2024 | 7:02 PM

Khurram Shahzad: ಶಹಜಾದ್ ದಾಳಿಗೆ ಬಾಂಗ್ಲಾದೇಶ ಆರಂಭಿಕ ಜಾಕಿರ್ ಹಸನ್ ಒಂದು ರನ್ ಗಳಿಸಿದರೆ, ನಾಯಕ ನಜ್ಮುಲ್ ಹಸನ್ ಶಾಂಟೊ ನಾಲ್ಕು ರನ್​ ಬಾರಿಸಿ ಔಟಾದರು. ಶದ್ಮನ್ ಇಸ್ಮಲ್ ಕೂಡ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಇಲ್ಲಿಗೇ ನಿಲ್ಲದ ಖುರ್ರಂ ಶಹಜಾದ್, ಅನುಭವಿ ಶಕೀಬ್ ಅಲ್ ಹಸನ್ ಅವರನ್ನು ಔಟ್ ಮಾಡಿದರು.

1 / 6
ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಸರಣಿಯ ಎರಡನೇ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ 274 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಕೇವಲ 26 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಆಡುತ್ತಿದೆ. ಸರಣಿಯ ಎರಡನೇ ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ 274 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಕೇವಲ 26 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

2 / 6

ಬಾಂಗ್ಲಾದೇಶ ತಂಡದ ಈ ಬ್ಯಾಟಿಂಗ್ ಬೆನ್ನೇಲುಬು ಮುರಿಯುವಲ್ಲಿ ಪಾಕ್ ತಂಡದ ಯುವ ವೇಗಿ ಖುರ್ರಂ ಶಹಜಾದ್ ಪಾತ್ರ ಪ್ರಮುಖವಾಗಿತ್ತು. ಮೊದಲ ಇನ್ನಿಂಗ್ಸ್​ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಶಹಬಾದ್, ಬಾಂಗ್ಲಾದೇಶ ತಂಡದ ಪ್ರಮುಖ ಮೂವರು ಬ್ಯಾಟ್ಸ್​ಮನ್​ಗಳನ್ನು ಕ್ಷಣಾರ್ಧದಲ್ಲಿ ಪೆವಿಲಿಯನ್​ಗೆ ಕಳುಹಿಸಿದರು.

3 / 6

ಶಹಜಾದ್ ದಾಳಿಗೆ ಬಾಂಗ್ಲಾದೇಶ ಆರಂಭಿಕ ಜಾಕಿರ್ ಹಸನ್ ಒಂದು ರನ್ ಗಳಿಸಿದರೆ, ನಾಯಕ ನಜ್ಮುಲ್ ಹಸನ್ ಶಾಂಟೊ ನಾಲ್ಕು ರನ್​ ಬಾರಿಸಿ ಔಟಾದರು. ಶದ್ಮನ್ ಇಸ್ಮಲ್ ಕೂಡ ಕೇವಲ 10 ರನ್ ಗಳಿಸಲಷ್ಟೇ ಶಕ್ತರಾದರು. ಇಲ್ಲಿಗೇ ನಿಲ್ಲದ ಖುರ್ರಂ ಶಹಜಾದ್, ಅನುಭವಿ ಶಕೀಬ್ ಅಲ್ ಹಸನ್ ಅವರನ್ನು ಔಟ್ ಮಾಡಿದರು.

4 / 6

ಹೀಗಾಗಿ ಬಾಂಗ್ಲಾದೇಶ 26 ರನ್‌ಗಳಿಗೆ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ 6 ವಿಕೆಟ್​ಗಳಲ್ಲಿ ಖುರ್ರಂ ಒಬ್ಬರೆ ನಾಲ್ಕು ವಿಕೆಟ್ ಪಡೆದರು. ಇದಾದ ಬಳಿಕ ಮೆಹದಿ ಹಸನ್ ಮಿರಾಜ್ ಮತ್ತು ಲಿಟನ್ ದಾಸ್ ನಡುವೆ 165 ರನ್ ಗಳ ಜೊತೆಯಾಟವಿತ್ತು. ಮೆಹದಿ (78) ಅವರನ್ನು ಔಟ್ ಮಾಡುವ ಮೂಲಕ ಖುರ್ರಂ ಟೆಸ್ಟ್‌ನಲ್ಲಿ ಮೊದಲ ಬಾರಿಗೆ 5 ವಿಕೆಟ್‌ಗಳನ್ನು ಪೂರೈಸಿದರು.

5 / 6

ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ಕೇವಲ ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಖುರ್ರಂ, ತಸ್ಕಿನ್ ಅಹ್ಮದ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ 6 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಖುರ್ರಂ, ಕಳೆದ ಮೂರು ವರ್ಷಗಳಲ್ಲಿ ಯಾವುದೇ ಪಾಕಿಸ್ತಾನಿ ವೇಗಿ ತವರು ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿಲ್ಲ ಎಂಬ ಕೊರತೆಯನ್ನು ನೀಗಿಸಿದರು

6 / 6

ಈ 3 ವರ್ಷಗಳಲ್ಲಿ ಈ ಸಾಧನೆ ಮಾಡಿದ ಮೊದಲ ಪಾಕಿಸ್ತಾನಿ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಖುರ್ರಂ ಪಾತ್ರರಾದರು. ಅವರಿಗಿಂತ ಮೊದಲು, ಫೆಬ್ರವರಿ 2021 ರಲ್ಲಿ, ರಾವಲ್ಪಿಂಡಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹಸನ್ ಅಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 5 ವಿಕೆಟ್‌ಗಳನ್ನು ಪಡೆದಿದ್ದರು. ಕಾಕತಾಳೀಯವೆಂಬಂತೆ ತವರಿನಲ್ಲಿ ಪಾಕಿಸ್ತಾನದ ಕೊನೆಯ ಟೆಸ್ಟ್ ಗೆಲುವು ಕೂಡ ಇದೇ ಪಂದ್ಯದಲ್ಲಿ ಲಭಿಸಿತ್ತು. ಅಂದಿನಿಂದ, ಮುಂದಿನ 9 ಟೆಸ್ಟ್‌ಗಳಲ್ಲಿ, ತಂಡವು 5 ರಲ್ಲಿ ಸೋತಿದ್ದರೆ, 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿತ್ತು.

Loading...
Unable to load recommendations.
Follow Us