PAK vs ENG: 3 ದಿನಗಳಲ್ಲಿ 5 ಶತಕ: ಪಾಕಿಸ್ತಾನದಲ್ಲಿ ಟೆಸ್ಟ್​ ಕ್ರಿಕೆಟ್​ನ ಕಗ್ಗೊಲೆ..!

Updated on: Oct 10, 2024 | 8:04 AM

Pakistan vs England, 1st Test: ಮುಲ್ತಾನ್​ನಲ್ಲಿ ನಡೆಯುತ್ತಿರುವ ಆತಿಥೇಯ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್ ತಂಡವು 3 ವಿಕೆಟ್ ಕಳೆದುಕೊಂಡು 492 ರನ್ ಕಲೆಹಾಕಿದೆ. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್ ಆಡಿದ ಪಾಕಿಸ್ತಾನ್ ತಂಡವು 556 ರನ್​ಗಳಿಸಿ ಆಲೌಟ್ ಆಗಿತ್ತು.

1 / 7
ಬರೋಬ್ಬರಿ 1048 ರನ್​ಗಳು... ಅದು ಸಹ ಕೇವಲ ಮೂರು ದಿನದಾಟಗಳಲ್ಲಿ... ಈ ಮೂರು ದಿನದಾಟಗಳಲ್ಲಿ ಮೂಡಿಬಂದ ಶತಕಗಳ ಸಂಖ್ಯೆ 5 ...ಇಂತಹದೊಂದು ರನ್​ ಮಳೆ ಸುರಿದಿರುವುದು ಪಾಕಿಸ್ತಾನದ ಮುಲ್ತಾನ್​ನಲ್ಲಿ. ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೂರು ದಿನದಾಟಗಳಲ್ಲಿ ಐವರು ಬ್ಯಾಟರ್​ಗಳು ಶತಕ ಬಾರಿಸಿದ್ದಾರೆ.

ಬರೋಬ್ಬರಿ 1048 ರನ್​ಗಳು... ಅದು ಸಹ ಕೇವಲ ಮೂರು ದಿನದಾಟಗಳಲ್ಲಿ... ಈ ಮೂರು ದಿನದಾಟಗಳಲ್ಲಿ ಮೂಡಿಬಂದ ಶತಕಗಳ ಸಂಖ್ಯೆ 5 ...ಇಂತಹದೊಂದು ರನ್​ ಮಳೆ ಸುರಿದಿರುವುದು ಪಾಕಿಸ್ತಾನದ ಮುಲ್ತಾನ್​ನಲ್ಲಿ. ಪಾಕಿಸ್ತಾನ್ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ಮೂರು ದಿನದಾಟಗಳಲ್ಲಿ ಐವರು ಬ್ಯಾಟರ್​ಗಳು ಶತಕ ಬಾರಿಸಿದ್ದಾರೆ.

2 / 7

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ 102 ರನ್ ಬಾರಿಸಿ ಅಬ್ಬರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಶಾನ್ ಮಸೂದ್ 177 ಎಸೆತಗಳಲ್ಲಿ 151 ರನ್ ಸಿಡಿಸಿದ್ದರು.

3 / 7

ಇದಾದ ಬಳಿಕ ಬಂದ ಸೌದ್ ಶಕೀಲ್ 82 ರನ್ ಬಾರಿಸಿದರು. ಇನ್ನು 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅಘಾ ಸಲ್ಮಾನ್ 119 ಎಸೆತಗಳಲ್ಲಿ ಅಜೇಯ 104 ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ್ ತಂಡವು 2ನೇ ದಿನದಾಟದ ಮುಕ್ತಾಯಕ್ಕೂ ಮುನ್ನ 556 ರನ್ ಕಲೆಹಾಕಿ ಆಲೌಟ್ ಆಯಿತು.

4 / 7

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ ಓಪನರ್ ಝಾಕ್ ಕ್ರಾಲಿ 85 ಎಸೆತಗಳಲ್ಲಿ 78 ರನ್​ ಚಚ್ಚಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಬೆನ್ ಡಕೆಟ್ 75 ಎಸೆತಗಳಲ್ಲಿ 84 ರನ್ ಬಾರಿಸಿದರು.

5 / 7

ಮತ್ತೊಂದೆಡೆ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್ 277 ಎಸೆತಗಳಲ್ಲಿ 12 ಫೋರ್​ಗಳೊಂದಿಗೆ ಅಜೇಯ 176 ರನ್ ಬಾರಿಸಿದ್ದಾರೆ. ಹಾಗೆಯೇ ಸ್ಪೋಟಕ ಬ್ಯಾಟಿಂಗ್​ನೊಂದಿಗೆ ಹ್ಯಾರಿ ಬ್ರೂಕ್ 173 ಎಸೆತಗಳಲ್ಲಿ ಅಜೇಯ 141 ರನ್ ಕಲೆಹಾಕಿದ್ದಾರೆ. ಈ ಮೂಲಕ ಇಂಗ್ಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 492 ರನ್​ ಗಳಿಸಿದೆ.

6 / 7

ಅಂದರೆ ಉಭಯ ತಂಡಗಳ ಇನಿಂಗ್ಸ್​ಗಳಲ್ಲಿ ಐದು ಶತಕಗಳು ಹಾಗೂ ಮೂರು ಅರ್ಧಶತಕಗಳು ಮೂಡಿಬಂದಿವೆ. ಅದು ಸಹ ಕೇವಲ ಮೂರು ದಿನದಾಟಗಳಲ್ಲಿ ಎಂಬುದು ವಿಶೇಷ. ಕೇವಲ ಮೂರು ದಿನದಾಟಗಳಲ್ಲೇ ಪಂದ್ಯವೊಂದರ ಮೊದಲ ಇನಿಂಗ್ಸ್ ಸ್ಕೋರ್ 1000 ರನ್​ಗಳ ಗಡಿದಾಟಿರುವುದರಿಂದ ಇದೀಗ ಮುಲ್ತಾನ್​ನಲ್ಲಿನ ಫ್ಲಾಟ್ ಪಿಚ್​ ಬಗ್ಗೆ ಅಪಸ್ವರಗಳು ಕೇಳಿ ಬರುತ್ತಿವೆ.

7 / 7

ಅದರಲ್ಲೂ ಈ ಪಿಚ್​ನಲ್ಲಿ ಎಲ್ಲರೂ ಶತಕ ಬಾರಿಸುತ್ತಿದ್ದಾರೆ. ಫಾರ್ಮ್ ಕಳೆದುಕೊಂಡುವರು ಪಾಕಿಸ್ತಾನಕ್ಕೆ ಬಂದು ಬ್ಯಾಟಿಂಗ್ ಮಾಡಿ. ಇದು ಮುಲ್ತಾನ್ ಹೈವೆಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯ. ಇಂಗ್ಲೆಂಡ್​ನಲ್ಲಿ ಹುಟ್ಟಿದ ಟೆಸ್ಟ್ ಕ್ರಿಕೆಟ್​ ಪಾಕಿಸ್ತಾನದಲ್ಲಿ ಕಗ್ಗೊಲೆಯಾಗಿ ಎಂಬಿತ್ಯಾದಿ ಬರಹಗಳೊಂದಿಗೆ ಇದೀಗ ಮುಲ್ತಾನ್ ಟೆಸ್ಟ್ ಪಂದ್ಯವನ್ನು ಟ್ರೋಲ್ ಮಾಡಲಾಗುತ್ತಿದೆ.

Loading...
Unable to load recommendations.
Follow Us