ಇದಕ್ಕೆ ಉದಾಹರಣೆಯಾಗಿ ಮೊದಲ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್ ಕಲೆಹಾಕಿದ್ದ ಸಂಜು ಸ್ಲೋ ಬಾಲ್ಗೆ ಬಲಿಯಾಗಿದ್ದರು. ಇದೀಗ ಎರಡನೇ ಟಿ20 ಪಂದ್ಯದಲ್ಲೂ 7 ಎಸೆತಗಳಲ್ಲಿ 2 ಬೌಂಡರಿ ಸಹಿತ 10 ರನ್ ಕಲೆಹಾಕಿದ್ದ ಸಂಜು, ಮತ್ತೊಮ್ಮೆ ಸ್ಲೋ ಬಾಲ್ಗೆ ವಿಕೆಟ್ ಒಪ್ಪಿಸಿದ್ದಾರೆ. ತಂಡದಲ್ಲಿ ಅವಕಾಶಕ್ಕಾಗಿ ಪೈಪೋಟಿ ಏರ್ಪಟ್ಟಿರುವಾಗ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದ ಸಂಜುಗೆ ಇನ್ನೇಷ್ಟು ಅವಕಾಶ ನೀಡಬೇಕು ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.