2021 ರ ಆರಂಭದಲ್ಲಿ ಫ್ಯಾಬ್-4 ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರು. ಕಿಂಗ್ ಕೊಹ್ಲಿ ಒಟ್ಟು 27 ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರೆ, ಆಸ್ಟ್ರೇಲಿಯಾ ದಾಂಡಿಗ ಸ್ಟೀವ್ ಸ್ಮಿತ್ 26 ಶತಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದರು. ಇನ್ನು 24 ಶತಕಗಳನ್ನು ಸಿಡಿಸಿದ್ದ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನ ಅಲಂಕರಿಸಿದ್ದರು. ಇದೇ ವೇಳೆ ಜೋ ರೂಟ್ ಖಾತೆಯಲ್ಲಿದ್ದ ಟೆಸ್ಟ್ ಶತಕಗಳ ಸಂಖ್ಯೆ ಕೇವಲ 17 ಮಾತ್ರ.