PAK vs ENG: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಕೆಲ ರೋಚಕ ಫೋಟೋಗಳು ಇಲ್ಲಿದೆ ನೋಡಿ
TV9 Web | Updated By: Vinay Bhat
Updated on:
Nov 14, 2022 | 8:59 AM
Pakistan vs England: ಬೆನ್ ಸ್ಟೋಕ್ಸ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ ಸ್ಯಾಮ್ ಕುರ್ರನ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ 5 ವಿಕೆಟ್ಗಳ ಜಯ ಸಾಧಿಸಿರುವ ಆಂಗ್ಲರು ಎರಡನೇ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
1 / 9
ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಮಹಾ ಟೂರ್ನಿಗೆ ತೆರೆಬಿದ್ದಿದೆ. ಭಾನುವಾರ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ (Pakistan vs England) ತಂಡ ಗೆದ್ದು ಬೀಗಿತು.
2 / 9
ಬೆನ್ ಸ್ಟೋಕ್ಸ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ ಸ್ಯಾಮ್ ಕುರ್ರನ್ ಅವರ ಅಮೋಘ ಬೌಲಿಂಗ್ ಪ್ರದರ್ಶನದಿಂದ 5 ವಿಕೆಟ್ಗಳ ಜಯ ಸಾಧಿಸಿರುವ ಆಂಗ್ಲರು ಎರಡನೇ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.
3 / 9
ಅದೃಷ್ಟದ ಮೂಲಕ ಅಂತಿಮ ಸುತ್ತಿಗೆ ಬಂದಿರುವ ಪಾಕಿಸ್ತಾನವನ್ನು 8 ವಿಕೆಟ್ಗೆ 137 ರನ್ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಇಂಗ್ಲೆಂಡ್ನ ಡೆತ್ಓವರ್ ಸ್ಪೆಷಲಿಸ್ಟ್ಗಳ ಬಲೆಗೆ ಬಿದ್ದ ಪಾಕಿಸ್ತಾನ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು
4 / 9
ರಿಜ್ವಾನ್ 15 ರನ್ ಗಳಿಸಿ ಔಟಾದರೆ ಹ್ಯಾರೀಸ್ 8 ರನ್, ಇಫ್ತಿಕಾರ್ ಅಹ್ಮದ್ ಸೊನ್ನೆ ಸುತ್ತಿದರು. ಬಾಬರ್ ನಿಧಾನಗತಿಯಲ್ಲಿ ಬ್ಯಾಟ್ ಮಾಡಿ 28 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ಶಾನ್ ಮಸೂದ್ ಉತ್ತಮ ಬ್ಯಾಟಿಂಗ್ ನಿಭಾಯಿಸಿ 28 ಸೆತಗಳಲ್ಲಿ 38 ರನ್ ಮಾಡಿ ವಿಕೆಟ್ ನೀಡಿದರು.
5 / 9
ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ಗೆ ಆಫ್ರಿದಿ ಆರಂಭದಲ್ಲೇ ಪೆಟ್ಟು ನೀಡಿದರು. ಕಳೆದ ಪಂದ್ಯದ ಹೀರೋ ಅಲೆಕ್ಸ್ ಹೇಲ್ಸ್ 1 ರನ್ಗೆ ಕ್ಲೀನ್ ಬೌಲ್ಡ್ ಆದರು. ನಾಯಕ ಜೋಸ್ ಬಟ್ಲರ್ 26, ಫಿಲಿಪ್ ಸಾಲ್ಟ್ 10 ಹ್ಯಾರಿ ಬ್ರೂಕ್ಸ್ 20, ಮೊಯೀನ್ ಅಲಿ 19 ರನ್ ಗಳಿಸಿದರು.
6 / 9
ಫೈನಲ್ ಪಂದ್ಯದಲ್ಲಿ ತನ್ನ ಘನತೆಗೆ ತಕ್ಕಂತೆ ಆಡಿದ ಬೆನ್ ಸ್ಟೋಕ್ಸ್ 5 ಬೌಂಡರಿ 1 ಸಿಕ್ಸರ್ ಸಮೇತ ಹೋರಾಟ ನಡೆಸಿ ಔಟಾಗದೇ 52 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇಂಗ್ಲೆಂಡ್ ಒಂದು ಓವರ್ ಬಾಕಿ ಇರುವಂತೆಯೇ 5 ವಿಕೆಟ್ಗೆ 138 ರನ್ ಗಳಿಸಿ ಜಯಭೇರಿ ಬಾರಿಸಿತು.
7 / 9
2010ರಲ್ಲಿ ಮೊದಲ ಬಾರಿ ಟ್ರೋಫಿ ಗೆದ್ದಿದ್ದ ಇಂಗ್ಲೆಂಡ್ ತಂಡ ಇದೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
8 / 9
2019ರಲ್ಲಿ ಒಡಿಐ ವಿಶ್ವಕಪ್ ಗೆದ್ದು, ಈಗ ಟಿ20 ವಿಶ್ವಕಪ್ ಕೂಡ ಗೆದ್ದ ಇಂಗ್ಲೆಂಡ್ ಏಕಕಾಲದಲ್ಲಿ ಎರಡೂ ಟ್ರೋಫಿಗಳನ್ನು ಹೊಂದಿರುವ ವಿಶ್ವದ ಏಕಮಾತ್ರ ತಂಡ ಎಂಬ ಇತಿಹಾಸ ನಿರ್ಮಿಸಿದೆ.
9 / 9
ಟಿ20 ವಿಶ್ವಕಪ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದ ಸ್ಯಾಮ್ ಕುರ್ರನ್ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಬಾಚಿಕೊಂಡರು.