- Kannada News Photo gallery Cricket photos pakistan palyed 48 dot balls vs england t20 world cup final
PAK vs ENG: ಬರೋಬ್ಬರಿ 48 ಡಾಟ್ ಬಾಲ್..! ಟಿ20 ವಿಶ್ವಕಪ್ ಫೈನಲ್‌ನಲ್ಲಿ ರನ್ ಗಳಿಸಲು ತಿಣುಕಾಡಿದ ಪಾಕಿಸ್ತಾನ
T20 World Cup 2022: 8 ಓವರ್‌ಗಳಲ್ಲಿ ಪಾಕಿಸ್ತಾನ ಯಾವುದೇ ರನ್ ಗಳಿಸಲಿಲ್ಲ. ಅಲ್ಲದೆ ಪಾಕಿಸ್ತಾನದ ಇನ್ನಿಂಗ್ಸ್‌ನಲ್ಲಿ ಕೇವಲ 2 ಸಿಕ್ಸರ್ ಮತ್ತು 8 ಬೌಂಡರಿಗಳಷ್ಟೇ ಹೊರಬಂದವು.
Updated on: Nov 13, 2022 | 5:11 PM

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ಮತ್ತೊಮ್ಮೆ ವಿಫಲವಾಗಿದೆ. ಸೆಮಿಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾಕಿಸ್ತಾನಿ ಬ್ಯಾಟ್ಸ್‌ಮನ್‌ಗಳು ಫೈನಲ್‌ನಲ್ಲಿ ರನ್ ಬರ ಎದುರಿಸಿದರು. ಹೀಗಾಗಿ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕ್ ತಂಡ 20 ಓವರ್‌ಗಳಲ್ಲಿ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಒಬ್ಬನೇ ಒಬ್ಬ ಬ್ಯಾಟರ್ ಅರ್ಧಶತಕ ಬಾರಿಸಲಿಲ್ಲ. ತಂಡದ ಪರ ಶಾನ್ ಮಸೂದ್ ಗರಿಷ್ಠ 38 ರನ್ ಗಳಿಸಿದರೆ, ಇವರ ಹೊರತಾಗಿ ಬಾಬರ್ ಅಜಮ್ 32 ರನ್ಗಳ ಇನ್ನಿಂಗ್ಸ್ ಆಡಿದರು.

ಈ ಪಂದ್ಯದಲ್ಲಿ ಪಾಕಿಸ್ತಾನದ ತಂಡದ ಈ ಸ್ಥಿತಿಗೆ ತಂಡದ ಬ್ಯಾಟ್ಸ್ಮನ್ಗಳ ನಿಧಾನತಿಯ ಬ್ಯಾಟಿಂಗ್ ಕಾರಣವಾಯಿತು. ಅದರಲ್ಲೂ ತಂಡ ಒಟ್ಟು 48 ಡಾಟ್ ಬಾಲ್‌ಗಳನ್ನು ಆಡಿದ್ದು ದೊಡ್ಡ ವಿಷಯ. ಅಂದರೆ 8 ಓವರ್‌ಗಳಲ್ಲಿ ಪಾಕಿಸ್ತಾನ ಯಾವುದೇ ರನ್ ಗಳಿಸಲಿಲ್ಲ. ಅಲ್ಲದೆ ಪಾಕಿಸ್ತಾನದ ಇನ್ನಿಂಗ್ಸ್‌ನಲ್ಲಿ ಕೇವಲ 2 ಸಿಕ್ಸರ್ ಮತ್ತು 8 ಬೌಂಡರಿಗಳು ಹೊರಬಂದವು.

ಇಫ್ತಿಕರ್ ಅಹ್ಮದ್ 6 ಎಸೆತಗಳಲ್ಲಿ ಖಾತೆ ತೆರೆಯಲಿಲ್ಲ. ಮೊಹಮ್ಮದ್ ಹ್ಯಾರಿಸ್ 12 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಸುಸ್ತಾದರು. ರಿಜ್ವಾನ್ ಅವರ ಸ್ಟ್ರೈಕ್ ರೇಟ್ ಕೂಡ 107 ಆಗಿತ್ತು. ಬಾಬರ್ ಕೂಡ 114 ಸ್ಟ್ರೈಕ್ ರೇಟ್‌ನಲ್ಲಿ ಸ್ಕೋರ್ ಮಾಡಿದರು.

ಸ್ಯಾಮ್ ಕರನ್ ಇಂಗ್ಲೆಂಡ್ ಪರ ಗರಿಷ್ಠ 15 ಡಾಟ್ ಬಾಲ್‌ಗಳನ್ನು ಎಸೆದರೆ, ಆದಿಲ್ ರಶೀದ್ 10 ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ. ಕ್ರಿಸ್ ಜೋರ್ಡಾನ್ ಕೂಡ 9 ಬಾಲ್ ಡಾಟ್ ಬೌಲ್ ಮಾಡಿದರು.

ಸ್ಯಾಮ್ ಕರನ್ ಇಂಗ್ಲೆಂಡ್ ಪರ ಮಿಂಚಿನ ಪ್ರದರ್ಶನ ನೀಡಿ, 4 ಓವರ್‌ಗಳಲ್ಲಿ 12 ರನ್ ನೀಡಿ 3 ವಿಕೆಟ್ ಪಡೆದರು. ಆದಿಲ್ ರಶೀದ್ 22 ರನ್ ನೀಡಿ 2 ವಿಕೆಟ್ ಪಡೆದರು. ಜೋರ್ಡಾನ್ 27 ರನ್ ನೀಡಿ 2 ವಿಕೆಟ್ ಪಡೆದರು.



















